ಕಾಪು ದಂಡತೀರ್ಥ ಕೆರೆಯಲ್ಲಿ ಅದಮಾರು ಶ್ರೀಗಳ ಪವಿತ್ರ ಸ್ನಾನ : vishwanews24

ಕಾಪು:  ಪರ್ಯಾಯ ಪೀಠಾರೋಹಣಕ್ಕೆ ಪೂರ್ವಭಾವಿ ಯಾಗಿ ಸಂಪ್ರದಾಯ ದಂತೆ ಅದಮಾರು ಶ್ರೀಪಾದರು ಶನಿವಾರದ ಬೆಳಗಿನ ಜಾವ 1.30ಕ್ಕೆ ಕಾಪು ದಂಡತೀರ್ಥ ಮಠದಲ್ಲಿರುವ ದಂಡತೀರ್ಥದಲ್ಲಿ ಪವಿತ್ರ ಸ್ನಾನ ನೆರವೇರಿಸಿದರು.

ನಂತರ ಕ್ಷೇತ್ರದ ದೇವರ ಸಮ್ಮುಖ ಮಠದ ಪಟ್ಟದ ದೇವರಿಗೂ ಪೂಜೆ ನೆರವೇರಿಸಿದರು. ನಂತರ ಉಡುಪಿಗೆ ತೆರಳಿ ಸರ್ವಜ್ಞ ಪೀಠಾರೋಹಣಕ್ಕೆ ಪೂರ್ವ ಜೋಡುಕಟ್ಟೆಯಿಂದ ಹೊರಟ ಪರ್ಯಾಯ ಮೆರವಣಿಗೆ ಸೇರಿಕೊಂಡರು.ಅದಮಾರು ಸ್ವಾಮೀಜಿಯೊಂದಿಗೆ ಅವರ ಶಿಷ್ಯಗಣ, ಭಕ್ತಾಧಿಗಳು ಹಾಗೂ ಮಠದ ಕಾರ್ಯಕರ್ತರು ಉಪಸ್ಥಿತರಿದ್ದರು.

ಆಚಾರ್ಯ ಮಧ್ವರು ಪಾಜಕದಿಂದ ಕಾಪು ಬಳಿಯ ಉಳಿಯಾರಗೋಳಿಗೆ ಬಂದು ಇಲ್ಲಿನ ತೋಟಂತಿಲ್ಲಾಯರೆನ್ನುವ ಐಗಳ ಬಳಿ ವೇದಾಧ್ಯಾಯನಾದಿ ವಿದ್ಯಾಭ್ಯಾಸ ನಡೆಸಿದ್ದರು. ವಿದ್ಯಾಭ್ಯಾಸ ಮುಗಿಸಿ ಗುರುಗಳಿಗೆ ಗುರುದಕ್ಷಿಣೆ ನೀಡುವ ಸಂದರ್ಭ ಬಂದಾಗ ಆಚಾರ್ಯರು ಗುರುಗಳ ಆಶಯದಂತೆ ಪರಿಸರದ ನೀರಿನ ಸಮಸ್ಯೆ ಹೋಗಲಾಡಿಸುವ ಸಂಕಲ್ಪದಿಂದ ತಮ್ಮ ತಪೋದಂಡದಿಂದ ನೆಲವನ್ನು ಗೀರಿ ಈ ಸ್ಥಳದಲ್ಲಿ ನೀರಿ ಸೆಲೆ ಉಕ್ಕುವಂತೆ ಮಾಡಿದ್ದರಂತೆ. ಇದರಿಂ ದಾಗಿ ಇಲ್ಲಿ ಕೆರೆ ನಿರ್ಮಾಣವಾಗಿ ಇದರಿಂದಾಗಿ ಮುಂದೆ ಇಲ್ಲಿನ ನೀರಿನ ಸಮಸ್ಯೆ ಪರಿಹಾರಗಾಗಿ ಸುತ್ತೆಲ್ಲ ಕಷಿ ಭೂಮಿಗಳು ಸಂವದ್ದಿ ಪಡೆದುಕೊಂಡ ವೆಂಬ ಪ್ರತೀತಿಯಿದೆ. ಆಚಾರ್ಯರ ದಂಡದಿಂದ ಉದ್ಬವಿಸಿದ ಕಾರಣಕ್ಕೆ ದಂಡತೀರ್ಥವೆಂದು ಕರೆಸಿಕೊಳ್ಳುವ ಈ ಕೆರೆ ಇಂದಿಗೂ ವರ್ಷದ 12 ತಿಂಗಳೂ ನೀರಿನ ಸಮದ್ಧಿಯನ್ನು ಕಾಯ್ದುಕೊಂಡು ಬರುತ್ತಿದೆ. ಉಡುಪಿಯ ಶ್ರೀಕಷ್ಣ ಮಠದ ಪೂಜೆಯ ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಅಷ್ಟಮಠಗಳ ಯತಿಗಳು ತಮ್ಮ ತಮ್ಮ ಪರ್ಯಾಯದ ಅವದಿಯಲ್ಲಿ ಸರ್ವಜ್ಞ ಪೀಠಾರಹಣಕ್ಕೆ ಮುನ್ನ ಇಲ್ಲಿನ ಕೆರೆಯಲ್ಲಿ ಜಳಕ ಪೂರೆಸಿ, ಮಠದ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ಹೋಗುವುದು ಸಂಪ್ರದಾಯವಾಗಿ ಬಿಟ್ಟಿದೆ.

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

3 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

3 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

3 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

3 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

4 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

4 hours ago