ಕಾಪು: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ನಡುವಿನ ಮಾತಿನ ಜಟಾಪಟಿ ತಾರಕಕ್ಕೇರಿದ್ದು ಕೇಸರಿನ ಎರಚಾಟ ಜೋರಾಗಿ ನಡೆಯುತ್ತಿದೆ ಕಳೆದ ವಾರದ ಹಿಂದೆ ಕಾಪುವಿನ ಶಾಸಕ ಸುರೇಶ್ ಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರಿಗೆ ರಾಜಕಾರಣ ಎಂಬುದು ಒಂದು ವ್ಯವಹಾರವಾಗಿದೆ ಅದನ್ನು ಬಿಟ್ಟರೆ ಜೀವನಕ್ಕೆ ಬೇರೆನಿದೆ ಎಂದು ಪ್ರಶ್ನೆ ಮಾಡಿದ್ದರು, ಮಾತ್ರವಲ್ಲದೆ ಅವರಿಗೆ ಈಗ ಬಂದಿರುವ ಇಷ್ಟೊಂದು ಆಸ್ತಿಗಳು ಎಲ್ಲಿಂದ ಎಂದು ಪ್ರಶ್ನೆ ಮಾಡಿದ ಪರಿಣಾಮವಾಗಿ ಇಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪತ್ರಿಕಾಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ.
ಅವರು ಮಾತನಾಡಿ ನಮ್ಮದು ಭೂಮಾಲಕರ ಕುಟುಂಬ ಕೃಷಿ ನಮಗೆ ಮೂಲ ಆಧಾರ ಸ್ತಂಭವಾಗಿದೆ ಮತ್ತು ನಾನು ಮಾಜಿ ಶಾಸಕ ಹಾಗೂ ಮಾಜಿ ಸಂಸದ ಆದರಿಂದ ನನಗೆ ೮೦,೦೦೦ ಪೆನ್ಷನ್ ಹಣ ಬರುತ್ತದೆ ಅದರ ಜೊತೆಗೆ ಸ್ವಂತದ್ದು ಎಂಬುದು ಒಂದು ಉಡುಪಿಯಲ್ಲಿ ಮನೆ ಇದೆ ಇದನ್ನು ಹೊರತುಪಡಿಸಿ ಏನಾದರೂ ಆಸ್ತಿ ಮಾಡಿದ್ದರೆ ಶಾಸಕ ಸುರೇಶ್ ಶೆಟ್ಟಿ ಅವರು ದಾಖಲೆ ಸಮೇತವಾಗಿ ಚರ್ಚೆಗೆ ಬರಲಿ ನಾನು ಕೂಡ ಬಹಿರಂಗವಾಗಿ ಸಿದ್ಧನಾಗಿದ್ದೇನೆ ಎಂದರು.
ಕಾಪುವಿನ ಅಭಿವೃದ್ಧಿಯ ದೃಷ್ಟಿಯಲ್ಲಿ ನಾನು ಮಾತನಾಡುತ್ತಿದ್ದೇನೆ ಹೊರತು ವೈಯಕ್ತಿಕವಾಗಿ ಮಾತನಾಡುವ ಅಗತ್ಯವಿಲ್ಲ ಆದರೆ ಶಾಸಕರು ಮಾತ್ರ ತನ್ನ ಶಾಸಕತನದ ಪ್ರಭಾವವನ್ನು ಬಳಸಿಕೊಂಡು ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸಿ ಆರ್ ಜೆಡ್ ಫೈಯರ್ ಸೇರಿದಂತೆ ಪ್ರಮುಖ ದಾಖಲೆ ಇಲ್ಲದೆ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆಂದು ಆರೋಪ ಮಾಡಿದರು.
ಕಾಪುವಿನ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿ ವ್ಯಯಿಸಿದ್ದು ಕಾಪು ಪುರಸಭಾ ಕಟ್ಟಡ ಕಾಪುವಿನ ತಾಲೂಕು ಆಡಳಿತ ಕಟ್ಟಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಟ್ಟಡ ಸೇರಿದಂತೆ ೧೦ ಹಲವಾರು ಯೋಜನೆಯನ್ನು ಕಾಪುವಿಗೆ ತಂದಿದ್ದೇನೆ ಮಾತ್ರವಲ್ಲದೆ ಕಾಪು ಶಾಸಕ ಪ್ರಶ್ನೆ ಮಾಡುವಂತೆ ೫೦೦ ಮನೆಯ ನಿರ್ಮಾಣಕ್ಕಾಗಿ ಈಗಾಗಲೇ ನನ್ನ ಅವಧಿಯಲ್ಲಿ ಕಾಪು ಬಿಕ್ರಿ ಗುತ್ತು ಸಮೀಪದ ಜಾಗವನ್ನು ನಿಗದಿಪಡಿಸಿದ್ದು ಟೆಂಡರ್ ಪ್ರಕ್ರಿಯೆ ಆಗುವ ಮುನ್ನವೇ ನನ್ನ ಅವಧಿ ಮುಗಿದಿತ್ತು ಮಾನ್ಯ ಶಾಸಕರಾದ ಸುರೇಶ್ ಶೆಟ್ಟಿ ಅವರು ಇದನ್ನು ಮುಂದುವರಿಸಿಕೊ0ಡು ಹೋಗಲಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕಾಗಿ ಕ್ಷೇತ್ರದ ಅಭಿವೃದ್ಧಿಯ ಲೆಕ್ಕಾಚಾರದಲ್ಲಿ ಶಾಸಕರು ಹಿಂದೇಟು ಹಾಕುತ್ತಿದ್ದಾರೆ,ಕೇವಲ ೩೦೦ ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಸಿದರೆ ಸಾಲದು ಸಚಿವರ ಬಳಿ ಮತ್ತು ಟೇಬಲ್ ಟು ಟೇಬಲ್ ತಿರುಗಿದರೆ ಮಾತ್ರ ಹಣ ಸ್ಯಾಂಕ್ಷನ್ ಆಗುತ್ತದೆ ಎಂಬುದನ್ನ ಶಾಸಕರು ಅರಿತುಕೊಳ್ಳಬೇಕು ಎಂದರು.
ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯವಾಗಿದೆ. ಇವತ್ತು ನಾನು ಸೋತಿರಬಹುದು ಅವರ ಗೆದ್ದಿರಬಹುದು ಮುಂದಿನ ದಿನ ಹೇಗೆ ಎಂಬುದು ಮತದಾರರಿಗೆ ಮಾತ್ರ ಗೊತ್ತಿದೆ ನನ್ನ ಜೀವಮಾನವಿಡಿ ರಾಜಕೀಯದಲ್ಲಿ ಜನಸೇವೆ ಮಾಡಿದ್ದೇನೆ ಹೊರತು ಅಕ್ರಮ ಆಸ್ತಿಯನ್ನು ಸಂಪಾದನೆ ಮಾಡಿಲ್ಲ ಎಂದರು ಕಾಪು ಶಾಸಕ ಇನ್ನಾದರೂ ಗೂಬೆ ಕೂರಿಸುವುದನ್ನು ಬಿಟ್ಟು ಜನ ಪರವಾದ ಕೆಲಸವನ್ನ ಮಾಡಲಿ ನನ್ನ ಬೆಂಬಲ ಸಂಪೂರ್ಣ ಅವರಿಗೆ ಇದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನವೀನ್ಚಂದ್ರ ಸುವರ್ಣ ಅಡ್ವೆ,ಜಿತೇಂದ್ರ ಪುಟಾರ್ಡೋ,ಶಾಂತಲತ ಶೆಟ್ಟಿ ಸೇರಿದಂತೆ ಪ್ರಮುಖರು ಇದ್ದರು.
ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ ಮಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ದ.ಕ.ಜಿಲ್ಲಾ ಯುವ ಕಾಂಗ್ರೆಸ್…
ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ ಅ.3ರಿಂದ ಧಾರ್ಮಿಕ ಕಾರ್ಯಕ್ರಮಗಳ ಚಾಲನೆ.. ವರ್ಷಪೂರ್ತಿ ಗೋಸೇವೆ, ಅನ್ನದಾನ, ಆರೋಗ್ಯ–ಶಿಕ್ಷಣ ಸೇವೆ…
ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ ಮಂಗಳೂರು : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ…
ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…
ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…
ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್ ಶೆಟ್ಟಿ ಆಗ್ರಹ ಮಂಗಳೂರು: ಸ್ಫೋಟದ ನಿಖರ ಕಾರಣ…