ಕಾಪು : ತಾಲೂಕಿನ ಮಲ್ಲಾರು ಗ್ರಾಮದ ಕೊಪ್ಪಲಂಗಡಿಯಲ್ಲಿ ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸೀಟಿನ ಕೆಳಗೆ ಇಟ್ಟಿದ್ದ ಚಿನ್ನದ ಸರವನ್ನು ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ.
ಶಿವಳ್ಳಿ ಗ್ರಾಮದ ಸಗ್ರಿ ನಿವಾಸಿ ಪೂಜಾ ಅವರು, ಫೆ.17 ರಂದು ತಮ್ಮ ದೊಡ್ಡಮ್ಮನ ಮಗಳಾದ ಉಷಾರೊಂದಿಗೆ ಕಾಪುವಿನ ಮಲ್ಲಾರು ಗ್ರಾಮದ ಕೊಪ್ಪಲಂಗಡಿಗೆ ತಮ್ಮ ದ್ವಿಚಕ್ರ ವಾಃನದಲ್ಲಿ ಬಂದಿದ್ದರು. ಇಲ್ಲಿನ ಅಂಗಡಿಯೊಂದರ ಮುಂದೆ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಮಗುವಿಗೆ ಪೆನ್ಸಿಲ್ ಸೆಟ್ ನ್ನು ತೆಗೆದುಕೊಳ್ಳುವ ಸಲುವಾಗಿ ಸ್ಟೇಷನರಿ ಅಂಗಡಿಗೆ ಹೋಗಿ ಮರಳಿ ಸ್ಕೂಟರ್ ಇಟ್ಟಲ್ಲಿಗೆ ಬಂದಿದ್ದರು.
ಈ ವೇಳೆ ದ್ವಿಚಕ್ರ ವಾಹನದ ಸೀಟಿನ ಲಾಕ್ ತೆರೆದು ಮೊಬೈಲನ್ನು ಒಳಗೆ ಇಡುವಾಗ ಅಲ್ಲಿ ಇಟ್ಟಿದ್ದ ಬೆಸುಗೆ ಹಾಕಿಸುವುದಕ್ಕಾಗಿ ತಂದಿದ್ದ ಚಿನ್ನದ ಸರ ಹಾಗೂ ಪೆಂಡೆಂಟ್ ಇದ್ದ ಸಣ್ಣ ಪರ್ಸ್ ಕಂಡು ಬಂದಿರುವುದಿಲ್ಲ. ಈ ಬಗ್ಗೆ ಅಕ್ಕ ಪಕ್ಕದವರಲ್ಲಿ ಹಾಗೂ ಹತ್ತಿರದ ಅಂಗಡಿಯಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅದರಂತೆ ಕಳ್ಳರು ಪೂಜಾ ಅವರ ದ್ವಿಚಕ್ರ ವಾಹನದ ಸೀಟಿನ ಲಾಕ್ ಓಪನ್ ಮಾಡಿ ಒಳಗೆ ಇಟ್ಟಿದ್ದ 48,000 ರೂ. ಮೌಲ್ಯದ 16 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಏರ್‌ಪೋರ್ಟ್‌ನಲ್ಲಿ 1.37 ಕೋಟಿ ರೂ. ಮೌಲ್ಯದ ಚಿನ್ನ, ಮಾದಕ ವಸ್ತು ವಶಕ್ಕೆ ಬೆಂಗಳೂರು: ಇಲ್ಲಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1.37…
ಬಾರ್, ಪಬ್‍ಗಳಿಗೆ ವಿದ್ಯಾರ್ಥಿಗಳು: ದೂರು ಬಂದ ಕಾರಣ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ : ಪ್ರಿಯಾಂಕ್ ಖರ್ಗೆ ಬೆಂಗಳೂರು : ಬಾರ್,…
ಕಾಂಗ್ರೆಸ್ ಬಡವರ ಪಕ್ಷ , ಶಾಲು, ಹೂವು ಹಾಕುವ ಬದಲು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿ: ಕಾರ್ಯಕರ್ತರಿಗೆ ಬಿ.ಕೆ ಹರಿಪ್ರಸಾದ್…
ಸ್ವಯಂ ಉದ್ಯೋಗದ ಹೆಸರಲ್ಲಿ ಗೃಹಿಣಿಯರಿಗೆ ಪಂಗನಾಮ : 10 ಕೋಟಿ ವಂಚಿಸಿ ಪರಾರಿ ಹಾವೇರಿ : “ಮನೆಯಲ್ಲೇ ಕುಳಿತು ಕೈತುಂಬಾ…
ಉಡುಪಿ: ಜೂ.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಉಡುಪಿ: ರಾಜ್ಯದಲ್ಲಿ 0 ಇಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ…
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್…