Featured

ಕಾಪು ಪರಸಭಾ ಚುನಾವಣೆ- ಸಚಿವ ಸುನಿಲ್‌ಕುಮಾರ್‌ಗೆ ಪ್ರೆಸ್ಟೀಜ್ ಪ್ರಶ್ನೆ..!?? vishwanews24

ಕಾಪು ಪರಸಭಾ ಚುನಾವಣೆ- ಸಚಿವ ಸುನಿಲ್‌ಕುಮಾರ್‌ಗೆ ಪ್ರೆಸ್ಟೀಜ್ ಪ್ರಶ್ನೆ..!??

ಕಾಪು: ಹೌದು ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಗದ್ದುಗೇರಿಸುವುದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್‌ಗೆ ಪ್ರೆಸ್ಟೀಜ್ ಪ್ರಶ್ನೆಯಾಗಿದೆಂಬ ಮಾತು ಕೇಳಿಬರುತ್ತಿರುವಂತೆ ಶನಿವಾರ ನಡೆದ ಸಮಾವೇಶ ಸಾಕ್ಷಿಯಾಗಿದೆ.
ಕಳೆದ ಚುನಾವಣೆಯಲ್ಲಿ ಕಾಪು ಪುರಭೆಯ ಗದ್ದುಗೇರಲು ಒಂದು ಸೀಟಿನ ಕೊರತೆಯಾಗಿತ್ತು ಆದರೆ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಗೆದ್ದ ಬಂದ ನಂತರ ಸುಲಭವಾಗಿ ಮತದಾನದ ಮುಖಾಂತರ ಬಿಜೆಪಿ ಪುರಸಭೆಯಲ್ಲಿ ಆಡಳಿತ ಮಾಡಿದೆ, ಆದರೇ ಈ ಬಾರಿ ಮಾತ್ರ ಬಿಜೆಪಿಗೆ ಈ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ ಕೇಂದ್ರದಿAದ ಹಿಡಿದು ಪಂಚಾಯತ್ ಮಟ್ಟದವರೆಗೆ ಬಿಜೆಪಿ ಆಡಳಿತ ನಡೆಸುತ್ತಿದೆ ಮಾತ್ರವಲ್ಲದೆ ಉಡುಪಿ ಜಿಲ್ಲೆಗೆ ಎರಡೆರಡು ಸಚಿವ ಸ್ಥಾನ ದೊರೆತಿದೆ, ಅಷ್ಟೆ ಅಲ್ಲದೆ ಸಿಟ್ಟಿಂಗ್ ಎಂಎಲ್‌ಎ, ಸಿಟ್ಟಿಂಗ್ ಮಿನಿಸ್ಟರ್ ಕಂ ಉಸ್ತುವಾರಿ ಸಚಿವರ ಹಾಗೇ ಇರುವ ಸುನಿಲ್ ಕುಮಾರ್ ಸಚಿವನಾದ ನಂತರ ಎದುರಿಸುತ್ತಿರುವ ಜಿಲ್ಲೆಯ ಮೊದಲ ಚುನಾವಣೆ ಆದ್ದರಿಂದ ಇದೊಂದು ಬಿಜೆಪಿ ಪಾಲಿಗೆ ಮತ್ತು ಸುನಿಲ್ ಕುಮಾರ್‌ಗೆ ಮಹತ್ವದ್ದಾಗಿದೆ.

ಪ್ರತಿಯೊಂದು ವಾರ್ಡಿನ ಮಾಹಿತಿ ಕಲೆಹಾಕುತ್ತಿರುವ ಸಚಿವ

ಚುನಾವಣೆ ಘೋಷಣೆಯಾದ ದಿನದಿಂದ ಸಚಿವ ಸುನಿಲ್ ಕುಮಾರ್ ೨೩ ವಾರ್ಡಿನ ಮಾಹಿತಿ ಪಡೆದುಕೊಂಡು ಜಿಲ್ಲೆಯಿಂದ ಕೂಡ ಚುನಾವಣೆಗಾಗಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ನೇತೃತ್ವದಲ್ಲಿ ತಂಡ ನಿಯೋಜನೆ ಮಾಡಿ ಬಹುಮತದ ಸೀಟ್ ಗೆಲ್ಲಿಸಲು ಸಾಹಸ ಪಡುತ್ತಿದ್ದಾರೆಮದು ತಿಳಿದು ಬಂದಿದೆ.ಪ್ರತಿದಿನ ವಾರ್ಡುವಾರುಗಳಲ್ಲಿ ಹೊಸ ಬೆಳವಣಿಗೆಯ ಮಾಹಿತಿ ಕಲೆ ಹಾಕಿ ತಂತ್ರಗಾರಿಕೆ ನಡೆಸುತ್ತಿದ್ದಾರೆಂಬ ಮಾಹಿತಿ ಬಿಜೆಪಿಯ ಮೂಲಗಳಿಂದ ತಿಳಿದುಬಂದಿದೆ.

ಕಾಪುವಿನಲ್ಲಿ ಬೀಡುಬಿಟ್ಟ ಜಿಲ್ಲೆಯ ಪ್ರಮುಖರು
ಇಲ್ಲಿನ ಚುನಾವಣೆಯ ಬಹುಮತ ಪಡೆಯುವ ದೃಷ್ಟಿಯಿಂದ ಜಿಲ್ಲೆಯ ಬಿಜೆಪಿ ಪ್ರಮುಖರ ತಂಡ ಕಾಪು ಕ್ಷೇತ್ರದಲ್ಲಿ ಕಳೆದು ೧೦ ದಿನಗಳಿಂದ ಬೀಡು ಬಿಟ್ಟಿದೆ,ಪ್ರತಿಯೊಂದು ವಾರ್ಡಿಗೆ ಐದು ಬಾರಿ ಭೇಟಿ ಮಾಡಿ ಕಾರ್ಯಕರ್ತರ ಸಭೆ ನಡೆಸಿ ಮತಯಾಚನೆ ನಡೆಸಿ ಬಿಜೆಪಿ ಪಾಲಿಗೆ ಪುರಸಭೆಯನ್ನು ಒಲಿಸಿಕೊಳ್ಳಲು ಪ್ರಯತ್ನ ಇದಾಗಿದೆ.
ಪೊಲಿಟಿಕಲ್ ಬ್ಯುರೋ
ವಿಸ್ವನ್ಯೂಸ್24

Vishwa News 24

Recent Posts

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಓರ್ವನ ಮೃತದೇಹ ಪತ್ತೆ -vishwanews24

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನದ…

2 hours ago

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ: ಪೊಲೀಸ್ ಕಮಿಷನರ್ -vishwanews24

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ ಘಟನಾ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಹಾಜರಿರಲಿಲ್ಲ ಹಾಗೂ ಗಾಯಗೊಂಡಿಲ್ಲ :…

8 hours ago

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  -vishwanews24

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  ಬಂಟ್ವಾಳ: ಕಲ್ಲಡ್ಕ ಫ್ಲೈಓವರ್ ಮೇಲೆ ದನಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು…

9 hours ago

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ; -vishwanews24

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ.. ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ…

9 hours ago

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

11 hours ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

11 hours ago