ಕಾಪು: ಬೆಳ್ಳೆ ಗ್ರಾಮದ ಪಾಂಬೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಚಯ ಪ್ರತಿಷ್ಠಾನ (ರಿ) ಪಾಂಬೂರು ಇವರ ಆಶ್ರಯದಲ್ಲಿ ಪಾಂಬೂರು ರಂಗ ಪರಿಚಯದಲ್ಲಿ ಫೆ. 10 ರಿಂದ ಫೆ. 16ರವರೆಗೆ 7 ದಿನಗಳ ಪರಿಚಯ ರಂಗೋತ್ಸವ 2025 ನಡೆಯಲಿದೆ ಎಂದು ಕಾರ್ಯದರ್ಶಿ ಪ್ರಕಾಶ್ ನೊರೋನ್ನ ತಿಳಿಸಿದರು.
ಕಾಪು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಂಬೂರು ರಂಗ ಪರಿಚಯದಲ್ಲಿ ಪ್ರತೀ ದಿನ ಸಂಜೆ ಗಂಟೆ 6.30ರಿಂದ ಏಳು ದಿನಗಳ ಪರ್ಯಂತ ಕನ್ನಡ, ತುಳು, ಕೊಂಕಣಿ ಭಾಷೆಗಳ ಏಳು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಫೆ. 10 ರಂದು ರಂಗಾಯಣ ಮೈಸೂರು ಪ್ರಸ್ತುತಪಡಿಸುವ ಕನ್ನಡ ನಾಟಕ ಮೈ ಫ್ಯಾಮಿಲಿ, ಫೆ. 11 ರಂದು ಸುಮನಸಾ ಕೊಡವೂರು ಉಡುಪಿ ಪ್ರಸ್ತುತಪಡಿಸುವ ತುಳು ನಾಟಕ ಈದಿ, ಫೆ. 12 ರಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ಮತ್ತು ಅಸ್ತಿತ್ವ ಇವರು ಪ್ರಸ್ತುತ ಪಡಿಸುವ ಕೊಂಕಣಿ ನಾಟಕ ಪಯ್ಣ್, ಫೆ. 13 ರಂದು ಸ್ಪಿನ್ನಿಂಗ್ ಟ್ರೇ ಥಿಯೇಟರ್ ಕಂ. ಬಿಜಾಪುರ ಪ್ರಸ್ತುತಪಡಿಸುವ ಕನ್ನಡ ನಾಟಕ ಅನಾಮಿಕನ ಸಾವು, ಫೆ. 14 ರಂದು ಸಂಕಲ್ಪ ಮೈಸೂರು ಪ್ರಸ್ತುತಪಡಿಸುವ ಕನ್ನಡ ನಾಟಕ ಜೊತೆಗಿರುವನು ಚಂದಿರ, ಫೆ. 15 ರಂದು ಮಂದಾರ ಬೈಕಾಡಿ ಪ್ರಸ್ತುತಪಡಿಸುವ ಕನ್ನಡ ನಾಟಕ ಬೆತ್ತಲಾಟ, ಫೆ. 16ರಂದು ಕಲಾಕುಲ್ ಮಂಗಳೂರು ಪ್ರಸ್ತುತಪಡಿಸುವ ಕೊಂಕಣಿ ನಾಟಕ ಸಾ ಉಪಾದೆಸ್ ಪ್ರದರ್ಶನಗೊಳ್ಳಲಿವೆ ಎಂದರು.
ಫೆ. 10 ರಂದು ರಂಗಾಯಣ ಮೈಸೂರು ನಿರ್ದೇಶಕ ಸತೀಶ್ ತಿಪಟೂರು ಇವರು ರಂಗೋತ್ಸವವನ್ನು ಉದ್ಘಾಟಿಸಲಿದ್ದು ಫೆ. 16ರಂದು ಯಕ್ಷರಂಗಾಯಣ ಕಾರ್ಕಳ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ್ ಸಮಾರೋಪ ಭಾಷಣ ಮಾಡಲಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ನಾಟಕಗಳ ಪ್ರಾಯೋಜಕತ್ವ ವಹಿಸಿಕೊಂಡಿದ್ದು ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಶಿರ್ವ ಸಂತ ಮೇರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಕೆ.ಎಸ್. ಶ್ರೀಧರಮೂರ್ತಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಪ್ರತೀ ನಾಟಕಗಳು 90 ರಿಂದ 120 ನಿಮಿಷಗಳ ಕಾಲಮಿತಿಯ ನಾಟಕಗಳಾಗಿದ್ದು, ನಿಗದಿತ ಸಮಯದಲ್ಲೇ ಕಾರ್ಯಕ್ರಮಗಳು ಪ್ರಾರಂಭವಾಗಿ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳಲಿವೆ. ಕಲಾಸಕ್ತರಿಗೆ ಮುಕ್ತ ಅವಕಾಶವಿದೆ. ಮುಂದಿನ ಹಂತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಾಹಿತಿ, ಜಾಗೃತಿ ಶಿಬಿರಗಳು, ಕಾರ್ಯಾಗಾರಗಳನ್ನು ನಡೆಸಲು ಒಳಾಂಗಣ ರಂಗಮಂದಿರ, ಕಲಾವಿದರಿಗೆ ವಸತಿ ವ್ಯವಸ್ಥೆ, ಇತ್ಯಾದಿಗಳನ್ನು ನಿರ್ಮಿಸುವ ಮಹತ್ತರ ಯೋಜನೆಯು ಸಂಸ್ಥೆಗಿದೆ ಎಂದು ತಿಳಿಸಿದರು.
ಪರಿಚಯ ಪ್ರತಿಷ್ಠಾನ (ರಿ) ಪಾಂಬೂರು ಇದರ ಅಧ್ಯಕ್ಷ ಅನಿಲ್ ಡೇಸಾ, ಟ್ರಸ್ಟಿಗಳಾದ ವಿಲ್ಸನ್ ಡಿ ಸೋಜಾ, ಪೀಠರ್ ಓಸ್ತಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…