Featured

ಕಾಪು: ಪಾಂಬೂರು ರಂಗ ಪರಿಚಯದಲ್ಲಿ ಫೆ. 10 ರಿಂದ ಫೆ. 16ರವರೆಗೆ ಪರಿಚಯ ರಂಗೋತ್ಸವ 2025 – vishwanews24

ಕಾಪು: ಪಾಂಬೂರು ರಂಗ ಪರಿಚಯದಲ್ಲಿ ಫೆ. 10 ರಿಂದ ಫೆ. 16ರವರೆಗೆ ಪರಿಚಯ ರಂಗೋತ್ಸವ 2025

ಕಾಪು: ಬೆಳ್ಳೆ ಗ್ರಾಮದ ಪಾಂಬೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಚಯ ಪ್ರತಿಷ್ಠಾನ (ರಿ) ಪಾಂಬೂರು ಇವರ ಆಶ್ರಯದಲ್ಲಿ ಪಾಂಬೂರು ರಂಗ ಪರಿಚಯದಲ್ಲಿ ಫೆ. 10 ರಿಂದ ಫೆ. 16ರವರೆಗೆ 7 ದಿನಗಳ ಪರಿಚಯ ರಂಗೋತ್ಸವ 2025 ನಡೆಯಲಿದೆ ಎಂದು ಕಾರ್ಯದರ್ಶಿ ಪ್ರಕಾಶ್ ನೊರೋನ್ನ ತಿಳಿಸಿದರು.

ಕಾಪು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಂಬೂರು ರಂಗ ಪರಿಚಯದಲ್ಲಿ ಪ್ರತೀ ದಿನ ಸಂಜೆ ಗಂಟೆ 6.30ರಿಂದ ಏಳು ದಿನಗಳ ಪರ್ಯಂತ ಕನ್ನಡ, ತುಳು, ಕೊಂಕಣಿ ಭಾಷೆಗಳ ಏಳು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.

ಫೆ. 10 ರಂದು ರಂಗಾಯಣ ಮೈಸೂರು ಪ್ರಸ್ತುತಪಡಿಸುವ ಕನ್ನಡ ನಾಟಕ ಮೈ ಫ್ಯಾಮಿಲಿ, ಫೆ. 11 ರಂದು ಸುಮನಸಾ ಕೊಡವೂರು ಉಡುಪಿ ಪ್ರಸ್ತುತಪಡಿಸುವ ತುಳು ನಾಟಕ ಈದಿ, ಫೆ. 12 ರಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ಮತ್ತು ಅಸ್ತಿತ್ವ ಇವರು ಪ್ರಸ್ತುತ ಪಡಿಸುವ ಕೊಂಕಣಿ ನಾಟಕ ಪಯ್ಣ್, ಫೆ. 13 ರಂದು ಸ್ಪಿನ್ನಿಂಗ್ ಟ್ರೇ ಥಿಯೇಟರ್ ಕಂ. ಬಿಜಾಪುರ ಪ್ರಸ್ತುತಪಡಿಸುವ ಕನ್ನಡ ನಾಟಕ ಅನಾಮಿಕನ ಸಾವು, ಫೆ. 14 ರಂದು ಸಂಕಲ್ಪ ಮೈಸೂರು ಪ್ರಸ್ತುತಪಡಿಸುವ ಕನ್ನಡ ನಾಟಕ ಜೊತೆಗಿರುವನು ಚಂದಿರ, ಫೆ. 15 ರಂದು ಮಂದಾರ ಬೈಕಾಡಿ ಪ್ರಸ್ತುತಪಡಿಸುವ ಕನ್ನಡ ನಾಟಕ ಬೆತ್ತಲಾಟ, ಫೆ. 16ರಂದು ಕಲಾಕುಲ್ ಮಂಗಳೂರು ಪ್ರಸ್ತುತಪಡಿಸುವ ಕೊಂಕಣಿ ನಾಟಕ ಸಾ ಉಪಾದೆಸ್ ಪ್ರದರ್ಶನಗೊಳ್ಳಲಿವೆ ಎಂದರು.

ಫೆ. 10 ರಂದು ರಂಗಾಯಣ ಮೈಸೂರು ನಿರ್ದೇಶಕ ಸತೀಶ್ ತಿಪಟೂರು ಇವರು ರಂಗೋತ್ಸವವನ್ನು ಉದ್ಘಾಟಿಸಲಿದ್ದು ಫೆ. 16ರಂದು ಯಕ್ಷರಂಗಾಯಣ ಕಾರ್ಕಳ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ್‌ ಸಮಾರೋಪ ಭಾಷಣ ಮಾಡಲಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ನಾಟಕಗಳ ಪ್ರಾಯೋಜಕತ್ವ ವಹಿಸಿಕೊಂಡಿದ್ದು ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಶಿರ್ವ ಸಂತ ಮೇರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಕೆ.ಎಸ್. ಶ್ರೀಧರಮೂರ್ತಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಪ್ರತೀ ನಾಟಕಗಳು 90 ರಿಂದ 120 ನಿಮಿಷಗಳ ಕಾಲಮಿತಿಯ ನಾಟಕಗಳಾಗಿದ್ದು, ನಿಗದಿತ ಸಮಯದಲ್ಲೇ ಕಾರ್ಯಕ್ರಮಗಳು ಪ್ರಾರಂಭವಾಗಿ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳಲಿವೆ. ಕಲಾಸಕ್ತರಿಗೆ ಮುಕ್ತ ಅವಕಾಶವಿದೆ. ಮುಂದಿನ ಹಂತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಾಹಿತಿ, ಜಾಗೃತಿ ಶಿಬಿರಗಳು, ಕಾರ್ಯಾಗಾರಗಳನ್ನು ನಡೆಸಲು ಒಳಾಂಗಣ ರಂಗಮಂದಿರ, ಕಲಾವಿದರಿಗೆ ವಸತಿ ವ್ಯವಸ್ಥೆ, ಇತ್ಯಾದಿಗಳನ್ನು ನಿರ್ಮಿಸುವ ಮಹತ್ತರ ಯೋಜನೆಯು ಸಂಸ್ಥೆಗಿದೆ ಎಂದು ತಿಳಿಸಿದರು.

ಪರಿಚಯ ಪ್ರತಿಷ್ಠಾನ (ರಿ) ಪಾಂಬೂರು ಇದರ ಅಧ್ಯಕ್ಷ ಅನಿಲ್‌ ಡೇಸಾ, ಟ್ರಸ್ಟಿಗಳಾದ ವಿಲ್ಸನ್ ಡಿ ಸೋಜಾ, ಪೀಠರ್‌ ಓಸ್ತಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago