ಕಾಪು : ಮಜೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾದೂರು ಮತ್ತು ಹೇರೂರು ಪರಿಸರದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ತೀವು ಆತಂಕಿತರಾಗಿದ್ದಾರೆ.
ಪಾದೂರು ಐಎಸ್‌ಪಿಆಎಲ್, ಸಿಎಸ್‌ಐ ಚರ್ಚ್, ಹೇರೂರು ಮತ್ತು ವಳದೂರುದಲ್ಲಿ ಚಿರತೆ ಓಡಾಡುತ್ತಿದ್ದು ಈ ಪರಿಸರದಲ್ಲಿ ಜನ ಓಡಾಡಲು ಹೆದರುವಂತಾಗಿದೆ. ಸೋಮವಾರ ರಾತ್ರಿ ಪಾದೂರು ಚರ್ಚ್ ಹಿಂಬದಿಯಲ್ಲಿರುವ ವಯೋವೃದ ಜಾರ್ಜ್ ಬಂಗೇರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು. ಭಯದಿಂದಲೇ ಮನೆಯವರು ರಾತ್ರಿಯಿಡೀ ನಿದ್ರೆ ಬಿಟ್ಟು ಎಚ್ಚರದಿಂದಲೇ ಕುಳಿತುಕೊಳ್ಳುವಂತಾಗಿತ್ತು.
ಬುಧವಾರ ಬೆಳಿಗೆ ಹೇರೂರು ನಿವಾಸಿ ವಿದ್ಯಾ ಪ್ರಭು ಅವರು ಹೂವು ಕೊಯ್ಯುತ್ತಿದ್ದಾಗ ಚಿರತೆ ಗುಟುರು ಹಾಕಿದ್ದು ತತ್‌ಕ್ಷಣ ಓಡಿ ತಪ್ಪಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಗ್ರಾಮಸ್ಥರು ಭಯಭೀತಿಯಿಂದ ಬದುಕಬೇಕಾಗಿದೆ. ಎನ್ನುತ್ತಾರೆ ಸ್ಥಳೀಯರು. ಪಾದೂರು, ಕೂರಾಲು, ವಳದೂರು, ಹೇರೂರು ಪರಿಸರದಲ್ಲಿ ಚಿರತೆ ಹಾವಳಿಯನ್ನು ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ. ಕಾಪು ತಾಲೂಕು ವ್ಯಾಪ್ತಿಯಲ್ಲಿ ಒಂದೇ ಬೋನು ಇದ್ದು ಸಮಸ್ಯೆ ಉಂಟಾಗಿದೆ.
ಸದ್ಯ ಕುರ್ಕಾಲು ಪರಿಸರದಲ್ಲಿ ಇರಿಸಲಾಗಿದ್ದ ಬೋನನ್ನು ಬುಧವಾರ ಸಂಜೆ ಪಾದೂರು-ಹೇರೂರು ಪರಿಸರದಲ್ಲಿ ತಂದು ಇರಿಸಲಾಗಿದೆ ಎಂದು ಮಜೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪುಸಾದ್ ಶೆಟ್ಟಿ ವಳದೂರು ತಿಳಿಸಿದ್ದಾರೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…