Featured

ಕಾಪು ಪುರಸಭಾ ಚುನಾವಣೆ : ಕಟ್ಟರ್ ಹಿಂದುತ್ವದ ಮತಬ್ಯಾಂಕ್ ಜಿ.ಎಸ್.ಬಿ ಹಾಗೂ ಬ್ರಾಹ್ಮಣ ಸಮಾಜಕ್ಕೆ ಟಿಕೆಟ್ ಕೊಡುವಲ್ಲಿ ಕಡೆಗಣಿಸಿತೆ ಬಿಜೆಪಿ…?: vishwanews24

ಕಾಪು ಪುರಸಭಾ ಚುನಾವಣೆ : ಕಟ್ಟರ್ ಹಿಂದುತ್ವದ ಮತಬ್ಯಾಂಕ್ ಜಿ.ಎಸ್.ಬಿ ಹಾಗೂ ಬ್ರಾಹ್ಮಣ ಸಮಾಜಕ್ಕೆ ಟಿಕೆಟ್ ಕೊಡುವಲ್ಲಿ ಕಡೆಗಣಿಸಿತೆ ಬಿಜೆಪಿ…?

ಕಾಪು:ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಜಾತಿವಾರು ಪೈಕಿ ಟಿಕೆಟ್ ನೀಡುವಲ್ಲಿ ಯಶಸ್ವಿಯಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ.


23  ವಾರ್ಡಿನ ಪೈಕಿ ಬಿಲ್ಲವ , ದೇವಾಡಿಗ, ಬಂಟ, ಹಾಗೂ ಇತರೆ ಜಾತಿಯ ಮುಖಂಡರಿಗೆ ಬಿಜೆಪಿ ಟಿಕೆಟ್ ನೀಡುವಲ್ಲಿ ಯಶಸ್ವಿಯಾದರೆ ಭಾಜಪದ ಮತ್ತು ಹಿಂದುತ್ವದ ಕಟ್ಟರ್ ಮತಬ್ಯಾಂಕ್ ಅನಿಸಿಕೊಂಡಿರುವ ಜಿ.ಎಸ್.ಬಿ ಹಾಗೂ ಬ್ರಾಹ್ಮಣ ೨ ಸಮುದಾಯವನ್ನು ಕಡೆಗಣಿಸಿದರು ಅನ್ನುವ ಮಾತು ಕೇಳಿ ಬರುತ್ತಿದೆ. ಕಾಪು ಪೇಟೆ, ಭಾರತ್ ನಗರ, ಜನಾರ್ಧನ ದೇವಸ್ಥಾನ , ಕೊಪ್ಪಲಂಗಡಿ ವಾರ್ಡಿನಲ್ಲಿ ಈ ಎರಡು ಸಮುದಾಯದ ನಿರ್ಣಾಯಕ ಮತಗಳಿದ್ದರೂ ಯಾವ ಕಾರಣಕ್ಕಾಗಿ ದೂರ ಇಟ್ಟರು ಅನ್ನುವ ಚರ್ಚೆ ಆರಂಭವಾಗಿದೆ.

ಸರಿ ಸುಮಾರು 400-450  ಜಿ.ಎಸ್.ಬಿ ಸಮುದಾಯ ಮತ್ತು 400-425 ಬ್ರಾಹ್ಮಣ ಸಮಾಜದ ಮತಗಳನ್ನು ಹೊಂದಿರುವ ಈ ಸಮುದಾಯಗಳಿಗೆ ಬಿಜೆಪಿ ಪಾರ್ಟಿ ಟಿಕೆಟ್ ನೀಡುವಲ್ಲಿ ಹಿಂದೆ ಸರಿದಿರುವುದು ಅಚ್ಚರಿ ಉಂಟು ಮಾಡಿದೆ.ಯಾವುದೇ ಲೆಕ್ಕಚಾರ ಹಾಕಿ ತಾಳೆ ಮಾಡಿನೋಡಿದರು ಎರಡು ಸಮುದಾಯದಿಂದ ಶೇಕಾಡ ೯೯% ಹಿಂದುತ್ವದ ಕಟ್ಟರ್ ಮತಗಳಿರುವ ಸಮುದಾಯಗಳು , ಕಳೆದ ಚುನಾವಣೆಯಲ್ಲಿಯೂ ಕೂಡ ಬಿಜೆಪಿ ಈ ಎರಡು ಜಾತಿಯ ಮುಖಂಡರಿಗೆ ಟಿಕೆಟ್ ನೀಡುವಲ್ಲಿ ವಿಫಲವಾಗಿತ್ತು ಆದರೇ ಈ ಬಾರಿಯಾದರೂ ಅವಕಾಶ ಸಿಗಬಹುದೆಂದು ನಂಬಿದ್ದ ಎರಡು ಸಮುದಾಯಕ್ಕೆ ನಿರಾಶೆ ಉಂಟುಮಾಡಿದೆ ಅನ್ನುವುದು ಸದ್ಯದ ಸುದ್ದಿ.

ನಾಮನಿರ್ದೇಶನ ಸದಸ್ಯ ಮಾಡಿತ್ತು ಕಾಂಗ್ರೇಸ್
ಮತದಾರರನ್ನು ಮತ್ತು ಜಾತಿವಾರು ಪರಿಗಣನೆಯಲ್ಲಿ ಕಾಂಗ್ರೇಸ್ ಪಕ್ಷ ಕಳೆದ ಚುನಾವಣೆಯಲ್ಲಿ ಸಫಲತೆಯನ್ನು ಕಂಡುಕೊAಡ್ಡಿದ್ದು ಮಾತ್ರವಲ್ಲದೆ ಅಧಿಕಾರ ಚುಕ್ಕಾಣಿ ಹಿಡಿಯುವ ಸಂಧರ್ಭದಲ್ಲಿ ಜಿ.ಎಸ್.ಬಿ ಸಮುದಾಯದ ಹರೀಶ್ ಕೆ ನಾಯಕ್‌ರನ್ನು ನಾಮನಿರ್ದೇಶನ ಸದಸ್ಯನನ್ನಾಗಿ ಆಯ್ಕೆ ಮಾಡಿ ಕಾಂಗ್ರೇಸ್ ಪಕ್ಷ ಜೆ.ಎಸ್.ಬಿ ಸಮಾಜದ ಡ್ಯಾಮೇಜ್ ಕಂಟ್ರೋಲ್ ಮಾಡುವಲ್ಲಿ ಯಶಸ್ವಿಯಾಗಿತ್ತು . ಮಾತ್ರವಲ್ಲದೆ ಅವರಿಗೂ ಸ್ಥಾನಮಾನ ಕೊಡುವಲ್ಲಿ ಯಶಸ್ವಿಯಾಗಿತ್ತು. ಆದರೇ ಬಿಜೆಪಿ ಆಡಳಿತ ಸಮಯದಲ್ಲಿ ಅಧಿಕಾರ ಪಡೆದುಕೊಂಡರೂ ಈ ಎರಡು ಸಮುದಾಯದಿಂದ ಕಡೇ ಪಕ್ಷ ನಾಮನಿರ್ದೇಶನ ಸದಸ್ಯ ಮಾಡುವಲ್ಲಿ ಕೂಡ ವಿಫಲತೆಯನ್ನು ಕಂಡಿದೆ ಅನ್ನುವುದು ಸತ್ಯವಾದ ವಿಚಾರ.

ಈ ಎಲ್ಲಾ ಅಂಶಗಳ ನಡುವೆ ಈ ಬಾರಿಯು ಕೂಡ ಕಾಂಗ್ರೇಸ್ ಭಾರತನಗರ ವಾರ್ಡಿನಲ್ಲಿ ಹರೀಶ್ ನಾಯಕ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ಆರಂಭವಾಗಿದ್ದು ಮಾತ್ರವಲ್ಲಿ ಕಡೇ ಕ್ಷಣದಲ್ಲಿ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಅನ್ನುವ ಮಾತು ಕಾಂಗ್ರೇಸ್ ವಲಯದಲ್ಲಿ ಕೇಳಿ ಬರುತ್ತಿದೆ.ಕಾಪು ಪೇಟೆ ಮತ್ತು ಭಾರತ್ ನಗರ ಹಾಗೂ ಜನಾರ್ಧನ ದೇವಸ್ಥಾನ ವಾರ್ಡಿನಲ್ಲಿ ಈ ಎರಡು ಸಮುದಾಯದ ಮತಗಳು ಅತ್ಯಂತ ನಿರ್ಣಾಯಕ ಎಂಬುದು ಸರ್ವೆ ಸಾಮಾನ್ಯವಾಗಿ ತಿಳಿದಿರುವ ವಿಚಾರ ಆದರೂ ಬಿಜೆಪಿ ಯಾಕೇ ಕಡೆಗಣಿಸಿತು ಎಂಬುದು ಯಕ್ಷಪ್ರಶ್ನೆಯಾಗಿದೆ.
ಬ್ಯುರೋ ರಿಪೋರ್ಟ್
ವಿಶ್ವನ್ಯೂಸ್೨೪

Vishwa News 24

Recent Posts

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ – vishwanews24

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…

3 days ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ – vishwanews24

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…

3 days ago

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ – vishwanews24

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…

4 days ago

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ – vishwanews24

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…

4 days ago

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…

4 days ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…

4 days ago