Featured

ಕಾಪು ಪುರಸಭಾ ಚುನಾವಣೆ : ಜೆಡಿಎಸ್ ಪಕ್ಷದ ವತಿಯಿಂದ  ಸಮಾಲೋಚನ ಸಭೆ – Vishwanews24

ಕಾಪು ಪುರಸಭಾ ಚುನಾವಣೆ : ಜೆಡಿಎಸ್ ಪಕ್ಷದ ವತಿಯಿಂದ  ಸಮಾಲೋಚನ ಸಭೆ – Vishwanews24

ಕಾಪು ಪುರಸಭಾ ಚುನಾವಣೆಯ ತಯಾರಿ ಬಗ್ಗೆ ಜನತಾದಳ (ಜಾತ್ಯತೀತ)ಪಕ್ಷದ ವತಿಯಿಂದ  ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರ ಉಪಸ್ಥಿತಿಯಲ್ಲಿ, ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಶ್ರೀ ಇಕ್ಬಾಲ್ ಅತ್ರಾಡಿಯವರ ಅಧ್ಯಕ್ಷತೆಯಲ್ಲಿ  ಪುರಸಭಾ ವ್ಯಾಪ್ತಿಯ ಚುನಾವಣೆ ತಯಾರಿ ಬಗ್ಗೆ ಕಾಪು ಮಹಾಬಲಮಾಲ್ ನಲ್ಲಿರುವ ಪಕ್ಷ ಕಚೇರಿಯಲ್ಲಿ ದಿನಾಂಕ 03.12.2021ರಂದು ಸಭೆ ಜರಗಿತು.
ಶ್ರೀ ಎಚ್ ಡಿ ದೇವೇಗೌಡರು ಪ್ರಧಾನಮಂತ್ರಿಯಾಗಿ ಮತ್ತು ಶ್ರೀಎಚ್ ಡಿ ಕುಮಾರಸ್ವಾಮಿಯವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ  ಮಾಡಿದಂತಹ ಕೆಲಸಗಳನ್ನು ಜನರಿಗೆ ತಿಳಿಸುವುದು  ಹಾಗೂ ಕಾಪು ಪುರಸಭೆ ಮತ್ತು ಪ್ರಾಧಿಕಾರ ದಿಂದಾಗಿ ಆದ ತೊಂದರೆಗಳು, ಅದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಇನ್ನು ಮುಂದಿನ ದಿನಗಳಲ್ಲಿ  ನಮ್ಮ ಅಭ್ಯರ್ಥಿಗಳನ್ನು ಪುರಸಭೆಗೆ ಆಯ್ಕೆ ಮಾಡುವಲ್ಲಿ, ಜನರು ಸಹಕಾರ ಕೊಟ್ಟರೆ, ಪುರಸಭೆಯಲ್ಲಿ ಏನು ತೊಂದರೆ ಆಗುತ್ತಿತ್ತು ಅದನ್ನೆಲ್ಲ ನಿವಾರಿಸುವಲ್ಲಿ ಖಂಡಿತವಾಗಿ ಯಶಸ್ವಿಯಾಗುತ್ತೇವೆ. ನಮ್ಮನ್ನು ಬೆಂಬಲಿಸಿ ಎಂದು ಜನರಲ್ಲಿ ಸಹಕಾರವನ್ನು ಕೋರಬೇಕು,  ಎಲ್ಲಾ ಕಾರ್ಯಕರ್ತರು, ನಾಯಕರು ಒಗ್ಗಟ್ಟಿನಿಂದ ದುಡಿದು ಹೆಚ್ಚಿನ ಸಂಖ್ಯೆಯಲ್ಲಿ ಪುರಸಭಾ ಸದಸ್ಯರು ಆಯ್ಕೆಯಾಗುವಲ್ಲಿ ಪ್ರಯತ್ನಿಸಬೇಕು ಹಾಗೂ ಪುರಸಭಾ ಚುನಾವಣೆ ತಂತ್ರಗಾರಿಕೆ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸಭೆಗೆ ನೀಡಿದರು.
ಕಾರ್ಯಾಧ್ಯಕ್ಷರಾದ ಶ್ರೀ ವಾಸುದೇವ ರಾವ್ ರವರು  ಸಭೆಯನ್ನುದ್ದೇಶಿಸಿ ಮಾತನಾಡಿದರು.ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ವೀಕ್ಷಕರಾದ ಸುಧಾಕರ್ ಶೆಟ್ಟಿ, ಉದಯ ಹೆಗ್ಡೆ, ಎಂ ಟಿ ವೆಂಕಟೇಶ್, ರಾಜು ಆರ್ ಪುತ್ರನ್, ಅಬ್ದುಲ್ ಹಮೀದ್ ಯೂಸುಫ್,ತಬಸುಮ್, ಉದಯ ಆರ್ ಶೆಟ್ಟಿ,ಶ್ರೀನಾಥ,ಅರವಿಂದ ಶೆಟ್ಟಿ,ರಶೀದ್,ಅಲ್ತಾಫ್,ಶಂಸುದ್ದೀನ್, ಸನವರ್, ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು .
Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

25 minutes ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

37 minutes ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

52 minutes ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

4 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

4 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

4 hours ago