Featured

SDPI ಬೆಂಬಲಿತ ಕಾಪು ಪುರಸಭಾ ಸದಸ್ಯೆ ಬಿಜೆಪಿ ಸೇರ್ಪಡೆ – vishwanews24

ಕಾಪು ಪುರಸಭಾ ಸದಸ್ಯೆ ಬಿಜೆಪಿ ಸೇರ್ಪಡೆ

ಕಾಪು: ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾಳಜಿಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕಾರ್ಯ ವೈಖರಿ, ಜನಪರ ಕಾಳಜಿಯನ್ನು ಮೆಚ್ಚಿ ಎಸ್.ಡಿ.ಪಿ.ಐ (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಬೆಂಬಲಿತ ಕಾಪು ಪುರಸಭಾ ಸದಸ್ಯೆ ಸರಿತಾ ಹಾಗೂ ಅವರ ಪತಿ ಶಿವಾನಂದ್ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ಅವರು ಭಾರತೀಯ ಜನತಾ ಪಕ್ಷದ ಬಾವುಟವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್, ಕೋಶಾಧಿಕಾರಿಗಳಾದ ಮನೋಹರ್ ಕಲ್ಮಾಡಿ, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು, ಜಿಲ್ಲಾ ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಕಾಪು ಪುರಸಭೆಯ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Vishwa News 24

Recent Posts

ಆರ್‌ಎಸ್‌ಎಸ್​ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ – vishwanews24

ಆರ್‌ಎಸ್‌ಎಸ್​ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…

16 hours ago

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ – vishwanews24

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…

17 hours ago

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…

17 hours ago

ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ – vishwanews24

ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ ಚೆನ್ನೈ: ಸಿಎಂ ಸಿ.…

17 hours ago

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ – vishwanews24

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…

21 hours ago

ಆರೆಸ್ಸೆಸ್ ಅನ್ನು ಹಿಂದೂ ಧರ್ಮಕ್ಕೆ ಹೋಲಿಸಿರುವುದು ಖಂಡನೀಯ: ಬಿ.ಕೆ. ಹರಿಪ್ರಸಾದ್ – vishwanews24

"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…

22 hours ago