ಕಾಪು: ಕಾಪು ಪಂಚಾಯತ್ ವ್ಯವಸ್ಥೆಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಕಾಪು ಪುರಸಭೆ ಬಂದ ಒಟ್ಟು ಅನುದಾನ ಲೆಕ್ಕಚಾರದ ಹಿಂದೆ ವಿಶ್ವನ್ಯೂಸ್೨೪ ತನಿಖಾ ವರದಿ ರಚಿಸಿದೆ. ಇದರನ್ವಯ ಸರಿ ಸುಮಾರು ಐದು ವರ್ಷದಲ್ಲಿ ಪುರಸಭೆಯ ೨೩ ವಾರ್ಡಿನ ಅಭಿವೃದ್ದಿಗಾಗಿ ಕಾಂಗ್ರೇಸ್ ಸರ್ಕಾರ- ವಿನಯ್ ಕುಮಾರ್ ಸೊರಕೆಯ ಅವಧಿಯಲ್ಲಿ ಹೆಚ್ಚು ಅನುದಾನ ಬಂದಿರುವುದು ಮೇಲ್ನೊಟಕ್ಕೆ ತೋರುತ್ತದೆ.
ಕಳೆದ ಐದು ವರ್ಷದ ಅವಧಿಯಲ್ಲಿ ಪುರಸಭೆಗೆ ಒಟ್ಟು ಬಂದಿರುವ ಅನುದಾನ 3035.76 ಲಕ್ಷ ರೂಪಾಯಿ ( ಮೂವತ್ತು ಕೋಟಿ ಮೂವತೈದು ಲಕ್ಷ ರೂಪಾಯಿ) ಇದರಲ್ಲಿ 20 ಕೋಟಿಗೂ ಅಧಿಕ ಅಂದರೆ ಮೂರು ವರ್ಷದಲ್ಲಿ ವಿನಯ್ ಕುಮಾರ್ ಸೊರಕೆಯ ಅವಧಿಯಲ್ಲಿ ಬಂದಿರುವ ಅನುದಾನ ಎಂಬುದು ದಾಖಲೆಗಳಲ್ಲಿ ಕಂಡು ಬರುವ ಸತ್ಯ ವಿಚಾರ.
ಇನ್ನೂ ಬಿಜೆಪಿ ಅವಧಿಯಲ್ಲಿ ಅಂದರೆ ಲಾಲಾಜಿ ಆರ್ ಮೆಂಡನ್ ಶಾಸಕ ಆದ ನಂತರ ಪುರಸಭೆಗೆ ಮೂರುವರೇ ವರ್ಷದ ಅವಧಿಯಲ್ಲಿ ಬಂದಿರುವ ಅನುದಾನ ದಾಖಲೆಗಳ ಪ್ರಕಾರ 10 ಕೋಟಿ ಚಿಲ್ಲರೆಯಾಗಿದೆ ಇದು ಕೇವಲ ಕಾಪು ಪುರಸಭೆಗೆ ಸಂಬಧಿಸಿದ ಅನುದಾನಗಳ ಲೆಕ್ಕಚ್ಚಾರ.
ಇನ್ನೂ ವಾರ್ಡ್ ಪೈಕಿ ಲೆಕ್ಕಚಾರ ಹಾಕುವುದಾರೆ ವಾರ್ಡ್ ನಂಬರ್ 23 ಅಹಮ್ಮದಿ ಮೊಹಲ್ಲದಲ್ಲಿ ಶ್ರೀಮತಿ ಲೀಲಾ ಕೋಟ್ಯಾನ್ ಸದಸ್ಯೆಯಾಗಿದ್ದ ಸಂಧರ್ಭದಲ್ಲಿ 256.45 ಲಕ್ಷ ರೂಪಾಯಿ ಅತಿ ಹೆಚ್ಚು ಅನುದಾನ ಬಂದಿರುವ ವಾರ್ಡ್, ಅತೀ ಕಡಿಮೆ ಅನುದಾನ ವಿನಿಯೋಗ ಆಗಿರುವ ಪೈಕಿ ವಾರ್ಡ್ ಸಂಖ್ಯೆ ೪-ಪೊಲಿಪು ಗುಡ್ಡೆ ಕೇವಲ ಹದಿನೈದು ಲಕ್ಷದ ಇಪ್ಪತೊಂಭತ್ತು ಸಾವಿರ ರೂಪಾಯಿ ಆಗಿದೆ.
ಪೊಲಿಟಿಕಲ್ ಬ್ಯೂರೋ ವಿಶ್ವನ್ಯೂಸ್೨೪
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…