Featured

ಕಾಪು ಪುರಸಭೆ ಡಿಸೆಂಬರ್ (2024 ) ತಿಂಗಳ ಸಾಮಾನ್ಯ ಸಭೆಯ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ – vishwanews24

ಕಾಪು ಪುರಸಭೆ ಡಿಸೆಂಬರ್ (2024 ) ತಿಂಗಳ ಸಾಮಾನ್ಯ ಸಭೆಯ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾಪು; ಕಾಪು ಪುರಸಭೆಯ ಎರಡನೇ ಸಾಮಾನ್ಯ ಸಭೆಯು ಇಲ್ಲಿನ ಸಭಾಂಗಣದಲ್ಲಿ ಹರೀಣಾಕ್ಷಿ ದೇವಾಡಿಗರ ಅಧ್ಯಕ್ಷತೆಯಲ್ಲಿ ಜರುಗಿತು.
ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ಅಜೇಂಡಾ ಹಾಗೂ ಅಧ್ಯಕ್ಷರ ಅನುಮತಿ ಮೇರೆಗೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು. ಈ ಸಂಧರ್ಭದಲ್ಲಿ ಸದಸ್ಯ ಅರುಣ್ ಶೆಟ್ಟಿ ಪಾದೂರು ಅವರು ಕಾಪು ನಗರ ಪಾರ್ಕಿಂಗ್ ಅವ್ಯವಸ್ಥೆ,ಪೋಲಿಸ್ ಠಾಣೆಯ ಮುಂಭಾಗದಲ್ಲಿ ಅಫಘಾತಗೊಂಡ ವಾಹನಗಳ ತೆರವು, ಎಲ್ಲೂರು ಘನತ್ಯಾಜ್ಯದ ಘಟಕದಲ್ಲಿ ವಿವಿಧ ಪಂಚಾಯತ್ ಗಳ ಕಸ ನಿರ್ವಹಣೆ ಕುರಿತಾಗಿ ಗಂಬೀರ ಚರ್ಚೆ ನಡೆಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ” ಕಾಪು ಯೋಜನಾ ಪ್ರಾಧಿಕಾರದಲ್ಲಿ ನಡೆಯುತ್ತಿರುವ ಅವ್ಯವಹಾರ ಹಾಗೂ ಬ್ರೋಕರುಗಳ ಹಾವಳಿ, ಸೈಟ್ ವಿಸಿಟ್,ಫೈಲ್ ಪೆಂಡಿಗ್ ಕುರಿತಾಗಿ ಚರ್ಚೆ ನಡೆಸಿದರು ಇದಕ್ಕೆ ಪ್ರತಿಯಾಗಿ ಪ್ರಾಧಿಕಾರ ಅಧಿಕಾರಿ ಶ್ರುತಿ ಉತ್ತರಿಸಿ ವಾರದ ಸೋಮವಾರ,ಮಂಗಳವಾರ ಕಾಪು ಕಚೇರಿಯಲ್ಲಿ ಸಾರ್ವಜನಿಕರ ಸೇವೆಗೆ ಸಿಗಲಿದ್ದು ಆದಷ್ಟು ಶೀಘ್ರವಾಗಿ ಕಡತ ವಿಲೇವಾರಿಗೊಳಿಸಿ ಸೈಟ್ ವಿಸಿಟ್ ಮಾಡಿ ವರದಿ ಮಾಡಲಾಗುತ್ತದೆ ಮತ್ತು ಬ್ರೋಕರ್ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.

ಕುಡಿಯುವ ನೀರಿನ ಯೋಜನೆಯಿಂದ ಮನೆಮನೆಗೆ ನಳ್ಳಿ ನೀರು ಪೂರೈಕೆ ಮಾಡುವ ನೆಪದಲ್ಲಿ ಪುರಸಭೆಯ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಅಗೆದು ಹಾಕಿ ದುರಸ್ತಿ ಮಾಡದಿರುವ ಬಗ್ಗೆ ಅಧಿಕಾರಿಗಳನ್ನು ಸದಸ್ಯರಾದ ಉಮೇಶ್,ಹನೀಫ್,ಸತೀಶ್ ಮೂಳೂರು ತರಾಟೆಗೆ ತೆಗೆದುಕೊಂಡರು.
ಕಾಪು ಪುರಸಭೆಗೆ ಆಗಮಿಸುವ ರಸ್ತೆ ದುರಸ್ತಿ ಮತ್ತು ನಾಮಫಲಕ,ದಾರಿದೀಪದ ವ್ಯವಸ್ಥೆ ತುರ್ತಾಗಿ ಮಾಡುವಂತೆ ಸದಸ್ಯರ ಒಕ್ಕೊರಲ ಆಗ್ರಹಕ್ಕೆ ಮುಖ್ಯಾಧಿಕಾರಿ ಸ್ಪಂದಿಸಿ “ಈ ಬಗ್ಗೆ ಕಂದಾಯ ಇಲಾಖೆಯ ಜತೆಗೆ ಸಮನ್ವಯ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರದ ಒಂದು ಕಚೆರಿಯನ್ನು ಕಾಪು ಪುರಸಭೆಯಲ್ಲಿ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ತಿಳಿಸುವಂತೆ ಎಸ್ಡಿಪಿಐ ಸದಸ್ಯರು ಆಗ್ರಹಿಸಿದರು ಈ ಬಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ಪಂದಿಸಿದರು.

ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್ ಅನುದಾನದಿಂದ ನಿರ್ಮಸಲ್ಪಟ್ಟ ಸುಲಭ ಶೌಚಾಲಯವನ್ನು ಮೂರು ವರ್ಷಕ್ಕೆ ಟೆಂಡರ್ ನೀಡುವ ಕುರಿತು ಮಾಹಿತಿ ನೀಡಿದರು ಇದ್ದಕೆ ಸ್ಪಂದಿಸಿದ ಶಾಸಕರು ಅತ್ಯುತ್ತಮ ಗುಣಮಟ್ಟದಲ್ಲಿ ಮತ್ತು ಅನುಭವಿ ಗುತ್ತಿಗೆದಾರರಿಗೆ ನೀಡಬೇಕು ಹಾಗೂ ಸ್ವಚ್ಚತೆಯನ್ನು ವಿಶೇಷವಾಗಿ ಪರಿಗಣಿಸಬೇಕೆಂದು ತಾಕಿತ್ತು ಮಾಡಿದರು.

ಕಾಪು ಭಾರತ್ ನಗರ ವಾರ್ಡಿನಲ್ಲಿ ನಿರ್ಮಾಣವಾಗಿರುವ ಬಾಡಿಗೆ ಕೋಣೆಗಳಲ್ಲಿ ವಾಸಿಸುತ್ತಿರುವ ಬಾಡಿಗೆದಾರರು ತ್ಯಾಜ್ಯವನ್ನು ನೀರು ಹರಿಯುವ ತೋಡಿಗೆ ಬಿಸಾಡಿ ಗಲೀಜು ಮಾಡುತ್ತಿದ್ದು ಈ ಬಗ್ಗೆ ಮಾಲಿಕರಿಗೆ ನೋಟಿಸ್ ಮಾಡಿ ಕ್ರಮವಹಿಸುವಂತೆ ಸದಸ್ಯ ಸುರೇಶ್ ದೇವಾಡಿಗ ಆಗ್ರಹ ಮಾಡಿದರು.

ಸದ್ಯ ಕಂದಾಯ ಇಲಾಖೆಯಿಂದ ಎಸ್.ಟಿ.ಪಿ ಘಟಕ ನಿರ್ಮಾಣಕ್ಕೆ ಸಂಬಧಿಸಿದಂತೆ ಸರ್ಕಾರಿ ಜಾಗದ ಮಾಹಿತಿ ಬಂದಿದ್ದು ಮೂಳೂರು, ಪಡು,  ಉಳಿಯಾರಗೋಳಿ, ಮಲ್ಲಾರು ಭಾಗದಲ್ಲಿ ನೀಡಿದ್ದಾರೆ ಮುಂದಿನ ದಿನಗಳಲ್ಲಿ ಟಿಕ್ನಿಕಲ್ ತಂಡದ ಜತೆ ಚರ್ಚಿಸಿ ನಿರ್ಮಾಣಕಾರ್ಯದ ಬಗ್ಗೆ ಕಾರ್ಯಪ್ರವೃತ್ತವಾಗಬೇಕಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ” ಅನುದಾನ ಕೊರತೆಯಿದೆ ಆದರೆ ಈ ಸಭೆಯಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ, ಪುರಸಭೆಗೆ ಸಂಬಂಧಿಸಿದಂತೆ ಯಾವುದೇ ಸದಸ್ಯರ ಅವಹಾಲುಗಳ್ಳಿದ್ದರೆ ರಾಜಕೀಯ ರಹಿತವಾಗಿ ಸದಸ್ಯರಿಗೆ ಸ್ಪಂದಿಸುತ್ತೇನೆ ಮತ್ತು ಎಲ್ಲೂರು ಘನತ್ಯಾಜ್ಯ ಘಟಕದಲ್ಲಿ ಉಳಿದ ಪಂಚಾಯತ್ ಕಸವಿಲೇವಾರಿ ಕುರಿತಾಗಿ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago