ಕಾಪು: ಇಲ್ಲಿನ ಪೊಲಿಪು ಜಾಮಿಯಾ ಮಸೀದಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ “ಪಿಜೆಎಂ” ಆ್ಯಪ್ ಬಿಡುಗಡೆಗೊಳಿಸುವ ಮೂಲಕ ಜಮಾತ್ ಬಾಂಧವರಿಗೆ ಜಮಾತಿನ ಸಂಪೂರ್ಣ ಮಾಹಿತಿ ಸುಲಭವಾಗಿ ತಿಳಿದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಪಿ.ಬಿ.ಅಹಮ್ಮದ್ ಮುಸ್ಲಿಯಾರ್ ( ಕಾಪು ಉಸ್ತಾದ್) ಹಾಗೂ ಪೊಲಿಪು ಜುಮಾ ಮಸೀದಿ ಖತೀಬರಾದ ಇರ್ಷಾದ್ ಸಹದಿ ಅವರು ಆ್ಯಪ್ ಬಿಡುಗಡೆಗೊಳಿಸಿದರು.ಜಮಾಅತಿಗೆ ಒಳಪಟ್ಟ 255 ಮನೆಗಳಿದ್ದು, ಜಮಾಅತಿನ ಪ್ರತಿಯೊಂದು ಯೋಜನೆ,ಸಮಿತಿ ಹಾಗೂ ಸಿಬ್ಬಂದಿ ವಿವರ ಮತ್ತು ಸಂಪರ್ಕ ಸಂಖ್ಯೆ, ಸಮಯ,
ಹಿಜರಿ ದಿನ ಹಾಗೂ ಮಸೀದಿ ಕೇಂದ್ರೀಕರಿಸಿ ಐದು ವಕ್ತ್ ನಮಾಝಿನ ಸಮಯ ಸೇರಿದಂತೆ ಜಮಾತಿನ ಎಲ್ಲ ವಿವರ ಪಿಜೆಎಂ ಆ್ಯಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದು ಉಪಾಧ್ಯಕ್ಷ ಅಮೀರ್ ಹಂಝ ವಿವರಿಸಿದ್ದಾರೆ.ಮುಂದಿನ ದಿನದಲ್ಲಿ ಈ ಆ್ಯಪ್‍ನ್ನು ಮತ್ತಷ್ಟು ವಿನ್ಯಾಸಗೊಳಿಸಿ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದು ಅಪ್ಲಿಕೇಶನ್ ವಿನ್ಯಾಸಗಾರ ಫಾರೂಕ್ ಉಚ್ಚಿಲ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್, ಕೋಶಾಧಿಕಾರಿ ಶೇಖ್ ನಝೀರ್ ಕಾಪು,ಸದಸ್ಯರಾದ ಅಬ್ದುಲ್ಲ ಹಾಗೂ ಕಂಪ್ಯೂಟರ್ ಇನ್ ಚಾರ್ಜ್ ಇಮ್ತಿಯಾಝ್ ಅಹಮದ್ ಕಾಪು ಉಪಸ್ಥಿತರಿದ್ದರು
2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…
ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…
ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…
ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…
ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…
ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…