Featured

ಕಾಪು ಬಾಡಿಗೆಯಲ್ಲಿದ್ದ ಫ್ಲ್ಯಾಟ್ ನ ನಿವಾಸಿಗಳ ಚಿನ್ನಾಭರಣ ಕಳವು ಮಾಡಿದ ವಾಜೀದ್ ಹಾಗೂ ಸ್ನೇಹಿತೆ ಶಹನಾಜ್ ಹೆಡೆಮುರಿ ಕಟ್ಟಿದ ಕಾಪು ಪೊಲೀಸರು:vishwanews24

ಕಾಪು ಬಾಡಿಗೆಯಲ್ಲಿದ್ದ ಫ್ಲ್ಯಾಟ್ ನ ನಿವಾಸಿಗಳ ಚಿನ್ನಾಭರಣ ಕಳವು ಮಾಡಿದ ವಾಜೀದ್ ಹಾಗೂ

ಸ್ನೇಹಿತೆ ಶಹನಾಜ್ ಹೆಡೆಮುರಿ ಕಟ್ಟಿದ ಕಾಪು ಪೊಲೀಸರು:vishwanews24

ಉಡುಪಿ: ಮೂಳೂರು ಎಸ್ ಎಸ್ ರೋಡ್ ಶ್ರೀ ಸಾಯಿ ವಾರ್ಚರ್ ಫ್ಲ್ಯಾಟ್ ನಿಂದ ಚಿನ್ನಾಭರಣ ಹಾಗೂ ಇತರೇ ಸೊತ್ತುಗಳನ್ನು ಕಳವು ಮಾಡಿದ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮೂಳೂರು ನಿವಾಸಿ ವಾಜೀದ್ ಜೆ (25) ಮತ್ತು ಕಡಿಯಾಳಿ ನಿವಾಸಿ ಶಹನಾಜ್ (32) ಎಂದು ಗುರುತಿಸಲಾಗಿದೆ.

ವಾಜೀದ್ ಎನ್ನುವ ಆರೋಪಿ ಮೂಲತಃ ಬಜ್ಪೆಯವನಾಗಿದ್ದು ಉಡುಪಿಯ ಉದ್ಯಾವರ ಕಾಫು ಮೂಳೂರು ಬಾಡಿಗೆ ಮನೆಕೊಂಡಿದ್ದ ಈತ ಕಳವು ಮಾಡಿತ ಆಭರಣಗಳನ್ನು ಈತನ ಸ್ನೇಹಿತೆ ಉಡುಪಿ ಕಡಿಯಾಳಿಯ ನಿವಾಸಿ ಶಹನಾಜ್ ಎಂಬಕೆಗೆ ನೀಡಿ ಆಕೆ ಬ್ಯಾಂಕ್ನಲ್ಲಿ ಅಡಮಾನ ಹಾಕಿ ಈತನಿಗೆ ಹಣ ಪೂರೈಕೆ ಮಾಡುತ್ತಿದ್ದಳು.

ಬಂಧಿತ ಆರೋಪಿಗಳಿಂದ ಚಿನ್ನಾಭರಣ, ವಾಹನ ಸೇರಿದಂತೆ ಒಟ್ಟು 3.38 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ವಾಜೀದ್ ವಿರುದ್ದ ಈ ಹಿಂದೆ ಹಾಸನ ಜಿಲ್ಲೆಯ ಆಲೂರು, ಅರಸಿಕೆರೆ ಗ್ರಾಮಾಂತರ, ಅರೆಹಳ್ಳಿ, ಗಂಡಸಿ, ಪಣಂಬೂರು, ಸುರತ್ಕಲ್, ಮುಲ್ಕಿ, ಕಾರವಾರದ ಮಂಕಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ.

ಬಂಧನ ಕಾರ್ಯಾಚರಣೆಯಲ್ಲಿ ಹಾಕೆ ಅಕ್ಷಯ್ ಮಚೀಂದ್ರಾ ಪೊಲೀಸ್ ಅಧೀಕ್ಷಕರು ಉಡುಪಿ ಮತ್ತು ಎಸ್‌.ಟಿ ಸಿದ್ಧಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ರವರ ನಿರ್ದೇಶನದಂತೆ, ವಿಜಯ ಪ್ರಸಾದ್ ಪೊಲೀಸ್ ಉಪಾಧೀಕ್ಷಕರು, ಕಾರ್ಕಳ, ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ಕೆ., ಪೂವಯ್ಯ ವೃತ್ತ ನಿರೀಕ್ಷಕರು ಕಾಪು ರವರ ನೇತೃತದಲ್ಲಿ, ಕಾರ್ಯಾಚರಣೆ ನಡೆಸಿದ್ದು, ಶೈಲ ಡಿ ಮುರಗೋಡ ಪಿ.ಎಸ್‌.ಐ (ಕಾಸು), ಕಾಪು ಠಾಣೆ ಮುಂದಾಳತದಲಿ.. ಪ್ರೊ ಪಿಎಸ್ಐ ಮಹಾಂತೇಶ ಜಾಬಗೌಡ, ಕಾಪು ಠಾಣೆ ಹಾಗೂ ಕಾಪು ವೃತ್ತ ನಿರೀಕ್ಷಕರ ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್‌, ರಾಜೇಶ್‌, ನಾರಾಯಣ, ಹೇಮರಾಜ್, ಸಂದೇಶ ಮತ್ತು, ಕಾಪು ಠಾಣೆಯ ಸ್ವಾಮೀ ಡಿ.ಎಸ್, ಗಣೇಶ್‌ ಶೆಟ್ಟಿ, ಚಾಲಕ ಜಗದೀಶ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್‌ ಮೊದಲಾದವರು ಕಾರ್ಯಾಚರಣೆಯಲಿ, ಭಾಗವಹಿಸಿರುತ್ತಾರೆ.

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

3 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

4 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

4 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

4 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

4 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

1 day ago