Featured

ಕಾಪು ಬಿಜೆಪಿಗೆ ಯಾರು ಸೂಕ್ತ ಅಭ್ಯರ್ಥಿ….??  ಓದಿ ಮೊರಲ್ ಸರ್ವೆ ವರದಿ vishwanews24

ಕಾಪು ಬಿಜೆಪಿಗೆ ಯಾರು ಸೂಕ್ತ ಅಭ್ಯರ್ಥಿ….??

ಚುನಾವಣೆ ಇದೊಂದು ಸಾಮಾನ್ಯ ಪ್ರಕ್ರಿಯೆ ಆದರೇ ಕಾರ್ಯಕರ್ತರ‌ ಪಾಲಿಗೆ ಅದೊಂದು ಹಬ್ಬ ಅಭ್ಯರ್ಥಿಗಳಿಗೆ ಹಾವು ಏಣಿಯ ಆಟ ಸೋಲು ಮತ್ತು ಗೆಲುವಿನ‌ ರಹದಾರಿ .


ಕರಾವಳಿ ಸುಲಭವಾಗಿ ಯಾವುದೇ ‌ಚುನಾವಣೆಯನ್ನು ಸುಲಭವಾಗಿ ಬಿಟ್ಟು ಕೊಟ್ಟಿಲ್ಲ ಗ್ರಾಮ ಪಂಚಾಯತ್ ಹಿಡಿದು ಸಿ.ಎ ಬ್ಯಾಂಕ್ ಚುನಾವಣೆಯನ್ನು ಕೂಡ ಪ್ರತಿಷ್ಟಿತ ಅನ್ನುವ ರೀತಿಯಲ್ಲಿ ನಡೆಸಿಕೊಟ್ಟ ಇತಿಹಾಸದ ಪುಟವೆ ಇಲ್ಲಿದೆ ಹಾಗಾಗಿ ಚುನಾವಣೆಯೆಂದರೆ ಒಂದರ್ಥದಲ್ಲಿ ಡಿವೋರ್ಸ್ ಆದ ಕಾರ್ಯಕರ್ತರು ಕೂಡ ಮತ್ತೊಮ್ಮೆ ಮನದನ್ಮೆಯ ಮುಖ‌ನೋಡಿ ಬೆಂಬಲಿಸುವ ಪ್ರಕ್ರಿಯೆ ಇಲ್ಲಿದೆ ಕಾರಣ ಕೇಸರಿ ಅಂದರೆ “ಹಿಂದುತ್ವ”.


ಕರಾವಳಿ ಎಂದರೆ ಹಿಂದುತ್ವದ ಭದ್ರಕೋಟೆ -ಪ್ರೊಡಕ್ಷನ್ ಹೌಸ್ ಆಫ್ ಹಿಂದುಯಿಸಮ್ ಹಾಗಾಗಿ ಈ ಭಾಗದಲ್ಲಿ ಸುಲಭವಾಗಿ ಬಿಜೆಪಿಯನ್ನು ಮುಟ್ಟುವಂತಿಲ್ಲ ಯಾಕೆಂದರೆ ಪಕ್ಷ ನೋಡಿ ಬಿಜೆಪಿ ಬಂದವರಿಗಿಂತಲೂ ಸಂಘ – ಸಂಘಟನೆ ನೋಡಿ ಭಾಜಪ ಕಟ್ಟಿದ ಕ್ರೇಡರ್ ಬೇಸಿಸ್ ಕಾರ್ಯಕರ್ತರ ಪಡೆಯಿದೆ ಯಾವುದೇ ಕಾರಣಕ್ಕೂ ವ್ಯಕ್ತಿ ಬಿಟ್ಟರೂ ಪಕ್ಷ ಬಿಡದ ಕಾರ್ಯಕರ್ತರ ಸಮೂಹವೆ ಇಲ್ಲಿದೆ ಹಾಗಾಗಿ ಕರಾವಳಿ ಎಂದಿಗೂ ಇಡೀ ರಾಜ್ಯಕ್ಕೆ ಉತ್ತರ..!!


ಇಂತಹ ಕರಾವಳಿಯಲ್ಲಿಯೇ ಬರುವ ಮತ್ತೊಂದು ವಿಧಾನ ಸಭಾ ಕ್ಷೇತ್ರ ಕಾಪು ಅದು ರಕ್ಷಾಣಪುರ ಐತಿಹಾಸಿಕವಾಗಿ ಧಾರ್ಮಿಕ-ಶೈಕ್ಷಣಿಕ- ಸಾಂಸ್ಕೃತಿಕವಾಗಿ ಬೆಳೆದು ಬಂದ ಒಂದು ಸಣ್ಣ ಊರು ಇಲ್ಲಿ ಕಾಂಗ್ರೆಸ್ ಎಷ್ಟರ ಮಟ್ಟಿಗೆ ಬೆಳೆದು ನಿಂತಿದೆಯೊ ಅಷ್ಟೇ ಸರಿಸಮನಾಗಿ ಬಿಜೆಪಿ ಸೆಟೆದುನಿಂತಿದೆ ಒಂದರ್ಥದಲ್ಲಿ ಬಿಜೆಪಿ ಕಾರ್ಯಕರ್ತರು ಪೆಟ್ಟು ತಿಂದು ಮತ್ತಷ್ಟು ಗಟ್ಟಿಯಾದ ಕ್ಷೇತ್ರ ಅದು ಕಾಪು ಎಂಬುದು ಅಕ್ಷರಶಃ ಸತ್ಯ.


ಇನ್ನೂ ಇಲ್ಲಿ ಕಾಂಗ್ರೆಸ್ ಬಂಟ-ಬಿಲ್ಲವ-ಮೊಗವೀರ ಸಮಾಜದ ನಾಯಕರನ್ನು ಕಂಡರೆ ಬಿಜೆಪಿ ಮಾತ್ರ ಮೊಗವೀರ ಸಮುದಾಯ ಬಿಟ್ಟರೆ ಬೇರೆ ಯಾವುದೇ ಸಮುದಾಯದ ನಾಯಕರು ಸ್ಪರ್ಧಿಸಿದ ಇತಿಹಾಸ ವಿರಳವಾಗಿದೆ ಒಂದರ್ಥದಲ್ಲಿ ಕಾಪು ” ಮೊಗವೀರ ಕೋಟಾ” ದ ಕ್ಷೇತ್ರ ಎಂಬುದು ಬಿಜೆಪಿ ತಿಳಿದುಕೊಂಡಂತ್ತಿದೆ.


ಸದ್ಯ ಸರಳ ಸಜ್ಜನ‌ ಎಂಬ ಖ್ಯಾತಿಯನ್ನು ಜನಸಾಮಾನ್ಯರಿಂದ ಪಡೆದೋ ಅಥವಾ ಪಡೆಸಿಕೊಂಡೊ ಇರುವ ಲಾಲಾಜಿ ಆರ್ ಮೆಂಡನ್ ಶಾಸಕ ಸತತವಾಗಿ ಆರು ಬಾರಿ ಸ್ಪರ್ಧೆ ಮಾಡಿ ಮೂರು ಬಾರಿ ಗೆದ್ದ ಇತಿಹಾಸವಿದೆ ಪ್ರಸ್ತುತ ಅವರದ್ದೇ ಬಿಜೆಪಿಯ ಕಾರುಬಾರು ಎಂದರೂ ತಪ್ಪಾಗಲಾರದು.
ಆದರೇ ಸದ್ಯದ ಮಟ್ಟಿಗೆ ಪಕ್ಷ ಬೆಳೆದಿದೆ ಅದರ ಜತೆಗೆ ಕಾರ್ಯಕರ್ತರೂ ಕೂಡ ಜಾಸ್ತಿಯಾಗಿದ್ದಾರೆ ಅದರ ನಡುವೆ ಕಾಂಗ್ರೆಸ್ ಜೆಡಿಎಸ್ ನಿಂದ ಬಂದ ದೊಡ್ಡ ಬಳಗವೆ ಸೇರಿಕೊಂಡಿವೆ.


ಯಾವುದೇ ಸೊತ್ತು ರುಚಿಯಾಗಿದ್ದರೂ ಕೂಡ ವಿಪರೀತ ಆಯ್ತು ಎಂದರೆ ಅಜೀರ್ಣವಾಗುವುದು ಸಾಮಾನ್ಯ ಅದೇ ರೀತಿಯ ಪರಿಸ್ಥಿತಿ ಕಾಪುವಿಗೆ ಬಂದಿರುವಂತದ್ದು ಅದರಲ್ಲೂ ವಿಶೇಷವಾಗಿ ಅದೇ ರಾಗ ಅದೇ ತಾಳ ಎಂಬಂತ್ತೆ ಕಾಪುವಿನ ಶಾಸಕ ಲಾಲಾಜಿ ಆರ್ ಮೆಂಡನ್ ಸದ್ಯ ಒಂದಿಷ್ಟು ಜನರಿಗೆ ಅಲರ್ಜಿಯಾದರೂ ಮತ್ತೊಂದಿಷ್ಟು ಗುತ್ತಿಗೆ ಆಧಾರಿತ ಕಾರ್ಯಕರ್ತರಿಗೆ ಗಂಜಿ ಊಟದಂತೆ ಮನಸ್ಸಿದೆ, ಬಾಯಿ ರುಚಿಯಾಗದಿದ್ದರೂ ಆರೋಗ್ಯಕ್ಕೆ ಸಮಸ್ಯೆಯಾಗದು ಎಂಬ ನಿಟ್ಟಿನಲ್ಲಿ.


ಸರಿ‌ ಮುಂದಿನದು ಕಥೆ ಕಾಪು ಶಾಸಕರ ಲಾಲಾಜಿ ಮೆಂಡನ್ ಅವರ ಅವಧಿಯಲ್ಲಿ ರಸ್ತೆ ನೀರು ದಾರಿ ದೀಪ ಬಿಟ್ಟರೆ ಹೊಸ ಪ್ರಾಜೆಕ್ಟ್ ಅಥವಾ ಯುವಕರಿಗೆ ಆಸರೆಯಾಗುವ ಯಾವುದೇ ಭವಿಷ್ಯದ ಯೋಜನೆ ಬಂದಿರುವ ಅಥವಾ ತಂದಿರುವ ಬಗ್ಗೆ ಇತಿಹಾಸ ಕಡಿಮೆ..ಒಂದರ್ಥದಲ್ಲಿ ಅಂದೊಮ್ಮೆ ವಿನಯ್ ಕುಮಾರ್ ಸೊರಕೆ ಶಾಸಕರಾಗಿರದೆ ಇದ್ದಿದ್ದರೆ ಇಂದಿಗೂ ಕಾಪು ಎಂಬ ಊರು ಗ್ರಾಮವಾಗಿಯೇ ಉಳಿದು ಬಿಡುತ್ತಿತ್ತು ತಾಲೂಕು ಎಂಬ ಮಾತು ಕನಸು ಬಿಡಿ…ಯಾಕೆಂದರೆ ಜನ ಅರ್ಥಮಾಡಿಕೊಂಡರೆ ಸರಿ‌ ಗ್ರಾಮಪಂಚಾಯತ್ ಎಲ್ಲಾ ಕಡೆಯೂ ಇದೆ ಆದರೇ ಪುರಸಭೆಯಾದರೆ ಮಾತ್ರ ಆ ಊರಿನ ಘನತೆ ಗೌರವಕ್ಕೊಂದು ಬೆಲೆ ಮತ್ತು ಆ ಭಾಗದ ಜನರ ಕೀರ್ತಿ ಮೌಲ್ಯವೂ ಕೂಡ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ವಿನಯ್ ‌ಕುಮಾರ್ ಸೊರಕೆಯ ಮುತುವರ್ಜಿಯಿಂದ ಪುರಸಭೆಯಾಗಿ ತಾಲೂಕಾಗಿ ಮಾರ್ಪಾಡುಗೊಂಡು ಇಂದು ಕಾಪು ಎಂದರೆ ಅದೊಂದು ತಾಲ್ಲೂಕು ‌ಮಟ್ಟದ ಊರು ಎಂಬತ್ತೆ ಬಿಂಬಿತವಾಗಿದೆ, ರಾಜಕೀಯ ಮೇಲಾಟಗಳ‌ ಬಗ್ಗೆ ಇಲ್ಲಿ ಚರ್ಚೆ ಅಲ್ಲ ಆದರೇ ವಿಚಾರ ಸತ್ಯ ಅಷ್ಟೇ.


ಈ‌ ನಡುವೆ ಪುರಸಭೆಯ ಬಗ್ಗೆ ಪುನರ್ ವಿಮರ್ಷೆಯಾಗಬೇಕು ಅದರ ಜತೆ ಜತೆಗೆ ಈ‌ ವ್ಯವಸ್ಥೆಯನ್ನೆ ರದ್ದುಗೊಳಿಸಿ ಪುನಃ ಪಂಚಾಯತ್ ವ್ಯವಸ್ಥೆಯಾಡಾಳಿತ ತರುವುದಾಗಿ ಹೇಳಿಯೆ ಲಾಲಾಜಿ ಕಳೆದ ವರ್ಷ ಗೆದ್ದು ಬಿಟ್ಟರು ಆದರೇ ಇವತ್ತಿನವರೆಗೂ ಅದು ಕನಸಾಗಿಯೇ ಉಳಿದಿದೆ ಸೋ “ಬಾಲಿಶ ಸ್ಟೇಟ್ ಮೆಂಟ್ ” ಅಷ್ಟೇ.


ಸೋ ಮುಂದಿನ‌ ಕಥೆ ಕಾಪು ಎಂದರೆ ಒಂದು ಕಾಲದಲ್ಲಿ ಹಿಂದುತ್ವದ ಕೊಂಡಿ ಅದು ಕಾಪುವಿಗೆ ಬಿಜೆಪಿ ಶಾಸಕ ಎಂಟ್ರಿಯಾಗುತ್ತಿರುವಾಗಲೇ ಸಂಘಟನೆಗಳು ಛಿದ್ರಗೊಂಡು ಚೆಲ್ಲಾಪಿಲ್ಲಿಯಾದರೂ ಕೂಡ ಏಕತೆಯ ಕಾರ್ಯಕರ್ತರ ಪಡೆಯಂತೂ ಅಂದಿಗಿಂತಲೂ ಇಂದಿಗೆ ಬಲಿಷ್ಠವಾಗಿಯೇ ಇದೆ.


ನಂತರದ ದಿನಗಳಲ್ಲಿ ಬಿಜೆಪಿ ಈ ಭಾಗದಲ್ಲಿ ಏಳುಬೀಳು ಕಂಡರೂ ಕೂಡ ಆಯಾ ಕಾಲದ ಕ್ಷೇತ್ರಾಧ್ಯಕ್ಷರ ಅವಧಿಯಲ್ಲಿ ಮತ್ತಷ್ಟು ಬಲಿಷ್ಠವಾಯಿತು ಅದರಲ್ಲೂ ವಿಶೇಷವಾಗಿ ಕುಯಿಲಾಡಿ ಸುರೇಶ್ ನಾಯಕ್ (ಪ್ರಸ್ತುತ ಉಡುಪಿ‌ ಬಿಜೆಪಿ ಜಿಲ್ಲಾಧ್ಯಕ್ಷ) ಅವರ ಅವಧಿಯಲ್ಲಂತೂ ಇಡೀ ಕಾಪುವಿಗೆ ಕಾಪು ಕ್ಷೇತ್ರ ಒಗ್ಗೂಡಿಸಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ ಕೀರ್ತಿ ಸಲ್ಲಬೇಕಾಗಿದೆ ಅದೂ ಸತ್ಯವೂ ಕೂಡ ಆ ವ್ಯಕ್ತಿ ಅಧ್ಯಕ್ಷತೆಯಲ್ಲಿ ಗೆಲುವಿನ ನಾಗಲೋಟದಲ್ಲಿ ಸೋಲು ಎಂಬುದು ವಿಳಾಸವಿಲ್ಲದೆ ಓಡಿಹೋಗಿತ್ತು ಅಂತಹ ಸಂಘಟನೆ ಕಾಪು ಕ್ಷೇತ್ರದಲ್ಲಿ ನಡೆದುಹೋಗಿತ್ತು.
ಯಾವುದೇ ಜಾತಿ ಕುಲ ಗೋತ್ರವಿಲ್ಲದ ರಾಜಕೀಯ ಮಾಡಿದವರ ಪೈಕಿಯಲ್ಲಿ ಸುರೇಶ್ ನಾಯಕ್ ಅಲ್ಟಿಮೇಟ್ ಲೀಡರ್ ಎಂಬ ಮಾತು ಇಂದಿಗೂ ನೆನೆಸಿಕೊಂಡು ಕಾಪು ಕಚೇರಿಗೆ ಆಗಮಿಸುವ ವೇಳೆ ಭೇಟಿಗೆ ಬರುವ ಕಾರ್ಯಕರ್ತರೇ ಇದಕ್ಕೆ ಸಾಕ್ಷಿ.


ಸದ್ಯ ಕಾಪು ಬೆಳೆದಿದೆ ಸಂಘಟನೆ ಗಟ್ಟಿಯಾಗಿದೆ ಕಾರ್ಯಕರ್ತರು ಯುದ್ಧ ಯಾವಾಗ ನಡೆದರೂ ಕೂಡ ಸೈ ಅನ್ನುವ ರೀತಿಯಲ್ಲಿ ಸನ್ನಧರಾಗಿದ್ದಾರೆ ಅಂತಹ ಕಾಪುವಿಗೆ 2023 ರಲ್ಲಿ ಸಾರಥಿ ಯಾರೆಂಬುದು ಸದ್ಯವಿರುವ ಪ್ರಶ್ನೆ….????


ಸರಳ ಸಜ್ಜಣಿಕೆಯ ಲಾಲಾಜಿ‌ ಮೆಂಡನ್ ಇವರಿಗೆ ಈ ಬಾರಿಯೂ ಸ್ಪರ್ದಿಸಬೇಕೆಂಬ ಹಪಾಹಪಿ ಇರಬಹುದು ಆದರೇ ಕೋಸ್ಟಲ್ ಬೆಲ್ಟ್ ತಿರುಗಿ ನಿಂತಿದೆಂಬುದು ಕೆಲವು ತಿಂಗಳ ಹಿಂದೆ ನಡೆದ ಪುರಸಭೆಯ ಚುನಾವಣೆಯಲ್ಲಿ ದಿಟವಾಗಿದೆ ಹಾಗಾಗಿ ಕಳೆದ ಚುನಾವಣೆಯ ಪರ್ವಕ್ಕೆ ಹೊಲಿಸಿದರೆ ಈ ಬಾರಿ‌ ಮೆಂಡನ್ ವರ್ಚಸ್ಸು ಕುಸಿದಿದೆ ಆದರೂ ಲಾಲಾಜಿ ಆರ್ ಮೆಂಡನ್ ಮಾತ್ರ “ಸರಳ ಸಜ್ಜಣಿಕೆಯ ಶಾಸಕ” ಎಂಬುದು ಸದ್ಯದ ವಾಸ್ತವ.
ಈ‌ಗ ಸಿಟ್ಟಿಂಗ್ ಎಂ ಎಲ್ ಎ ಅಥವಾ ಬಿಎಸ್ ವೈ ಟೀಂ ಎಂಬ ಕಾರಣಕ್ಕಾದರೂ ಈ ಸಲ ಟಿಕೆಟ್ ಆಕಾಂಕ್ಷಿಯಾಗಿರುವ ಲಾಲಾಜಿ‌ ಮೆಂಡನ್ ಪರ ಹೈಕಮಾಂಡ್ ಬ್ಯಾಟಿಂಗ್ ಮಾಡುವ ಲಕ್ಷಣಗಳು ವಿರಳ ಎಂಬ ಮಾತು ಕೇಳುತ್ತಿದೆ ಇಡೀ ಉಡುಪಿಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಮುಖೇನ ಮುಂದಿನ ಹದಿನೈದು ವರ್ಷಗಳ ಕಾಲ ಪಕ್ಷ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಬುಡ ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಇರಾದೆ ರಾಜ್ಯ ಬಿಜೆಪಿಯದ್ದಾಗಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ ಆದರೇ ಮತ್ತೊಂದು ‌ಕಡೆಯಲ್ಲಿ ಇವರನ್ನು ಹೊರತು ಪಡಿಸಿ ಹೊಸ‌ಮುಖಗಳಿಗೆ ಮಣೆಹಾಕಿದರೆ ಪರಿಸ್ಥಿತಿ ಬಿಗಡಾಯಿಸಿತು ಎಂಬ ಅಲೋಚನೆ ಕೂಡ ಹಿರಿಯರ ಮುಂದಿದೆ ಆದರೇ ಕಾರ್ಯಕರ್ತರ ಸರ್ವೆಯ ಪ್ರಕಾರ ಹೊಸ ಮುಖ ಬೆಟರ್, ಸರಳತೆಗೆ ಲಾಲಾಜಿ ಓಕೆ ಅನ್ನುವ ಮಾತು ಕೇಳಿಬಂದಿದೆ.

ಇದನ್ನೂ ಓದಿ: ಮಂಗಳ ಕಾರ್ಯಗಳಿಂದ ಶುಭ..ನೋಡಿ ಇಂದಿನ ದಿನ ಭವಿಷ್ಯ..ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಇನ್ನೂ ಕಾಪುವಿಗೆ ಹೊಸ ಟಿಕೆಟ್ ಆಕಾಂಕ್ಷಿಗಳ‌ ಪಟ್ಟಿ ಉದ್ದವಾಗಿಯೇ ಇದೆ ಒಂದೆಡೆ ಸಮಾಜಪರ ಕಾಳಜಿ‌ ಮತ್ತು ಕಳೆದ ಬಾರಿ ಟಿಕೆಟ್ ವಂಚಿತರಾಗಿದ್ದ ಗುರ್ಮೆ ಸುರೇಶ್ ಶೆಟ್ಟಿ ,ಮೀನುಗಾರರ ಸಮುದಾಯದ ಮುಖಂಡ ಯಶ್ಪಾಲ್ ಸುವರ್ಣ, ಸೇರಿದಂತೆ ಜಾತಿ ಬಿಟ್ಟು ಪಕ್ಷದ ನೆಲೆಗಟ್ಟಿನ ಲೀಡರ್ ಕುಯಿಲಾಡಿ ಸುರೇಶ್ ನಾಯಕ್,ಸದ್ಯ ರೇಸಿನಲ್ಲಿರುವ ಕುದುರೆಗಳು ಕಾದು ನೋಡ ಬೇಕಿದೆ

ಕಾಪುವಿನಲ್ಲಿ ಈಡೇರದ ಭರವಸೆಗಳ‌ ಗೊಂದಲದ ಗೂಡಾಗಿರುವ ಇಲ್ಲಿ ಅಭಿವೃದ್ಧಿಯ ಮಂತ್ರದ ಜಪದ ಸೊರಕೆ‌ ಎಂಬ ಅಶ್ವಮೇಧ ಯಾಗದ ಕುದುರೆಯನ್ನು ಹಿಡಿದು ಯುದ್ಧ ಗೆಲ್ಲುವ ಸಮರ್ಥ ನಾಯಕ ಯಾರು ಎಂಬದು ಸದ್ಯ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಯಕ್ಷ ಪ್ರಶ್ನೆಯಾಗಿದೆ.
ವಿನಯ್ ಕುಮಾರ್ ಸೊರಕೆಯನ್ನು ಮೀರಿಸಲು ಜಾತಿ ಎಂಬ ಭ್ರಮೆಯಿಂದ ಹೊರಗಿರುವ ನಾಯಕರ ಅಗತ್ಯವಿದೆ ಎಂಬ ಮಾತಿದೆ ಸಮಾನ‌ಮನಸ್ಕ ನಾಯಕರು ಕಾಪುವಿನಲ್ಲಿ ಯಾರಗಲಿದ್ದಾರೆಂದು ಕಾದು‌ ನೋಡಿ..!!

ಪೊಲಿಟಿಕಲ್ ಬ್ಯುರೋ ವಿಶ್ವನ್ಯೂಸ್24

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ :ಜಿಲ್ಲಾಧಿಕಾರಿ – Vishwanews24

Vishwa News 24

Recent Posts

ಬ್ರಹ್ಮಾವರ: ಖಾಸಗಿ ಬಸ್ ಬೆಂಕಿಗಾಹುತಿ ; ಅದೃಷ್ಟವಶಾತ್ ಪ್ರಯಾಣಿಕರು ಪಾರು -vishwanews24

ಬ್ರಹ್ಮಾವರ: ಖಾಸಗಿ ಬಸ್ ಬೆಂಕಿಗಾಹುತಿ ; ಅದೃಷ್ಟವಶಾತ್ ಏಳು ಪ್ರಯಾಣಿಕರು ಪಾರು ಉಡುಪಿ: ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು…

1 hour ago

ಸುರತ್ಕಲ್ : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಆರೋಪ: ವ್ಯಕ್ತಿಯ ಬಂಧನ -vishwanews24

ಸುರತ್ಕಲ್ : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಆರೋಪ: ವ್ಯಕ್ತಿಯ ಬಂಧನ 1.206 ಕೆ.ಜಿ. ಗಾಂಜಾ, KTM ಮೋಟಾರ್ ಸೈಕಲ್…

1 hour ago

ಸಕಲೇಶಪುರ–ಸುಬ್ರಹ್ಮಣ್ಯ  ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಪರಿಶೀಲನೆ -vishwanews24

ಸಕಲೇಶಪುರ–ಸುಬ್ರಹ್ಮಣ್ಯ  ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಪರಿಶೀಲನೆ ಕಡಬ : ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ನಡೆದ…

2 hours ago

ಉಡುಪಿ : ಆ. 20 ರಂದು ನೇರ ಸಂದರ್ಶನ -vishwanews24

ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…

17 hours ago

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ -vishwanews24

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…

17 hours ago

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ -vishwanews24

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…

17 hours ago