Featured

ಕಾಪು ಬೀಚ್ ನಲ್ಲಿ‌ ಪ್ರವಾಸಿಗರಿಗೆ ಕಿರಿಕಿರಿ ಎನಿಸಿದ ಬೀದಿ ನಾಯಿಗಳ ಹಾವಳಿ…!

ಕಾಪು ಬೀಚ್ ನಲ್ಲಿ‌ ಪ್ರವಾಸಿಗರಿಗೆ ಕಿರಿಕಿರಿ ಎನಿಸಿದ ಬೀದಿ ನಾಯಿಗಳ ಹಾವಳಿ…!

ಕಾಪು: ಪ್ರವಾಸೋದ್ಯಮ ತಾಣವಾಗಿ ಮೈಲಿಗಲ್ಲು ಏರುತ್ತಿರುವ ಕಾಪು ಲೈಟ್ ಹೌಸ್ ಬೀಚ್ ಇದೀಗ ಬೀದಿ ನಾಯಿಗಳ‌ ಹಾವಳಿಯಿಂದಾಗಿ ಪ್ರವಾಸಿಗರಿಗೆ ಕಿರಿ ಕಿರಿ ಅನುಭವಿಸುವಂತಾಗಿದೆ. ಕಾಪು ಪುರಸಭೆ ವ್ಯಾಪ್ತಿಯ ಅಡಿಯಲ್ಲಿ‌ ಬರುವ ಈ‌ ಬೀಚ್‌ ಪ್ರವಾಸಿಗರಿಗೆ ಆಕರ್ಷಕ ತಾಣವಾಗಿದ್ದು ಪ್ರತಿ ದಿನ ಸಾವಿರಕ್ಕೂ ಅಧಿಕ ಪ್ರವಾಸಿಗರು, ಶಾಲಾ ಮಕ್ಕಳು ಭೇಟಿ ನೀಡುತ್ತಾರೆ. ಸಣ್ಣ ಸಣ್ಣ ಮಕ್ಕಳು ಬೀಚ್ ಬದಿಯ ಮಣ್ಣಿನಲ್ಲಿ ಆಟವಾಡುವ ಸಮಯದಲ್ಲಿ ನಾಯಿಗಳು ಗುರಾಯಿಸುತ್ತಾ ,ಪ್ರವಾಸಿಗರ ಲಗೇಜುಗಳ‌ ಮೇಲೆ ಮೂತ್ರ ಮಾಡುವುದರಿಂದ ಪ್ರವಾಸಿಗರು ಸಂಕಟ ಅನಯಭವಿಸುವಂತಾಗಿದೆ. ಹಲವಾರು ಭಾರಿ ಟವೇಲ್, ಬಟ್ಟೆಗಳನ್ನು ನಾಯಿಗಳು ಹರಿದು ಹಾಕಿದ ಉದಾಹರಣೆಗಳು‌ ಇದೆ ಅದ್ದರಿಂದ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪ್ರವಾಸಿಗರಿಗೆ ವಿನಂತಿಸುತ್ತಿದ್ದಾರೆ.

ನಾಯಿಗಳಿಂದಾಗಿ ಬೀಚ್ನಲ್ಲಿ ಸುತ್ತಾಡಲು ಭಾರಿ ಸಮಸ್ಯೆಯಾಗುತ್ತಿದೆ,ನಮ್ಮನ್ನ‌ಬ ಅಟ್ಟಾಡಿಕೊಂಡು ಕೈಯಲ್ಲಿರುವ ತಿಂಡಿಯನ್ನ ಸಹ ಕಸಿದು ಮಕ್ಕಳ‌ಮೇಲೆ ಗುರಾಯಿಸುತ್ತದೆ ಮಾತ್ರವಲ್ಲದೆ ನಮ್ಮ‌ ಬ್ಯಾಗ್ ಲಗೇಜುಗಳ ಮೇಲೆ ಮೂತ್ರ ಮಾಡಿ‌ ಭಾರಿ ಕಿರಿ ಕಿರಿ‌ ಉಂಟು ಮಾಡುತ್ತಿದೆ ಸಂಬಂಧಿಸಿದ ಇಲಾಖೆ ಕ್ರಮ‌ಕೈಗೊಂಡರೆ ಉತ್ತಮ

             ” ನಿಖಿತಾ ಅಲ್ಮೇಡ ಬೆಂಗಳೂರು ”

ಬೀದಿ ನಾಯಿಗಳ‌ ಸಮಸ್ಯೆಯ ಬಗ್ಗೆ ನಾವು ಪ್ರತಿಯೊಂದು ಸಭೆಯಲ್ಲೂ ಮುಖ್ಯಾಧಿಕಾರಿಗಳ‌ ಗಮನಕ್ಕೆ‌ ತರುತ್ತಿದ್ದೇವೆ,ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸಲು ಟೆಂಡರ್ ಸಹ ಕರೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ ಶೀಘ್ರವಾಗಿ ಸಮಸ್ಯೆ ಪರಿಹಾರ ಮಾಡುವ ಭರವಸೆ ಇದೆ.”

ಅರುಣ್ ಶೆಟ್ಟಿ ಪಾದೂರು,ಕಾಪು ಪುರಸಭೆ,ವಿಪಕ್ಷ ನಾಯಕ

ಪ್ರವಾಸೋದ್ಯಮ ತಾಣವಾಗಿ ಬೆಳೆಯುತ್ತಿರುವ ಕಾಪು ಬೀಚ್ನಲ್ಲಿ ಈ ರೀತಿ ಬೀದಿನಾಯಿಗಳ ಸಮಸ್ಯೆ ಆಗುತ್ತಿರುವ ಬಗ್ಗೆ ವಿಷಾದವಿದೆ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಭಂದ ಪಟ್ಟ ಇಲಾಖೆಯ ಗಮನ ತರುತ್ತೆನೆ.” ಮನೋಹರ್ ಶೆಟ್ಟಿ ಅಧ್ಯಕ್ಷರು ,ಅಭಿವೃದ್ಧಿ ಸಮಿತಿ ಕಾಪು

ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸಲು ಬೆಂಗಳೂರಿನ NGO ಸಂಸ್ಥೆಗೆ ಆದೇಶ ಮಾಡಿದ್ದೆವೆ.ಆದ್ರೆ ಆ ಸಂಸ್ಥೆ ಸಕಾರಾತ್ಮಕವಾಗಿ ನಮಗೆ ಸ್ಪಂದಿಸುತ್ತಿಲ್ಲ, ಖುದ್ದಾಗಿ ಭೇಟಿಯಾಗಿ‌ ಕೆಲಸ ಮಾಡುವಂತೆ ಹೇಳುತ್ತೇವೆ.”

ರಾಯಪ್ಪ ಮುಖ್ಯಾಧಿಕಾರಿ ಕಾಪು ಪುರಸಭೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

6 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

6 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

6 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

6 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

6 days ago