ಕಾಪು : ಆರೋಗ್ಯವಂತ ವ್ಯಕ್ತಿಯು ಕನಿಷ್ಠ ೩-೪ ತಿಂಗಳಿಗೊಮ್ಮೆ ರಕ್ತವನ್ನು ನೀಡಬಹುದಾಗಿದೆ. ಪ್ರತೀ ಒಂದು ಯುನಿಟ್ ರಕ್ತವು ಕನಿಷ್ಠ ಮೂರು ಮಂದಿಯ ಜೀವ ಉಳಿಸಬಲ್ಲದು. ಶಿಬಿರಗಳಲ್ಲಿ ಅಥವಾ ದಾನಿಗಳಿಂದ ಪಡೆಯುವ ರಕ್ತವನ್ನು ಜಿಲ್ಲಾಸ್ಪತ್ರೆಯಲ್ಲಿ ಮಾರುವುದಿಲ್ಲ. ಅಗತ್ಯವುಳ್ಳವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಕೊಂಡೊಯ್ಯುವ ಸಂದರ್ಭದಲ್ಲಿ ಅದರ ತಪಾಸಣಾ ವೆಚ್ಚವನ್ನು ಮಾತ್ರ ಸಂಬಂಧಪಟ್ಟವರಿಂದ ಪಡೆದುಕೋಳ್ಳಲಾಗುತ್ತದೆ ಎಂದು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಽ ಕೇಂದ್ರದ ಮುಖ್ಯಸ್ಥೆ ಡಾ| ವೀಣಾ ಕುಮಾರಿ ಹೇಳಿದರು.
ಆ. 23 ರಂದು ಕಾಪು ಜೇಸಿಐ ಭವನದಲ್ಲಿ ಜೇಸಿಐ ಕಾಪು, ಯುವವಾಹಿನಿ ಕಾಪು, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ, ರಕ್ಷಣಾಪುರ ಬೀದಿಬದಿ ವ್ಯಾಪಾರಸ್ಥರ ಸಂಘ ಕಾಪು, ಯಾರ್ಡ್ ಫ್ರೆಂಡ್ಸ್ ಉಳಿಯಾರಗೋಳಿ ಹಾಗೂ ಕಲ್ಯ ಜವನೆರ್ ಜಂಟಿ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಽ ಕೇಂದ್ರದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಶಿಬಿರವನ್ನು ಉದ್ಘಾಟಿಸಿದ ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಮಾತನಾಡಿ, ರಕ್ತದ ಕೊರತೆ ಮತ್ತು ಅಗತ್ಯತೆಯನ್ನು ಮನಗಂಡು ಕಾಪುವಿನ ಸಮಾನ ಮನಸ್ಕ ಸಂಘಟನೆಗಳು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ತರಬೇತಿಯ ಮೂಲಕವಾಗಿ ಯುವಜನರನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿರುವ ಜೇಸಿಐ ಸಂಸ್ಥೆಯು ಜನರ ಆರೋಗ್ಯದ ದೃಷ್ಠಿಯಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇದಕ್ಕೆ ಸರ್ವರ ಸಹಕಾರದ ಅಗತ್ಯತೆಯಿದೆ ಎಂದರು.
ಕಾಪು ಜೇಸಿಐನ ಅಧ್ಯಕ್ಷೆ ಅನಿತಾ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಪು ಪುರಸಭೆಯ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ವಿದ್ಯಾಲತಾ ಸುವರ್ಣ, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯದ ಅಧ್ಯಕ್ಷ ಸಚಿನ್ ಕುಮಾರ್, ನಿಯೋಜಿತ ಅಧ್ಯಕ್ಷ ಸಂತೋಷ್ ಕಾಪು, ಕಾಪು ರಕ್ಷಣಾಪುರ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಉದಯ್ ಜಿ., ಉಳಿಯಾರಗೋಳಿ ಯಾರ್ಡ್ ಫ್ರೆಂಡ್ಸ್ ಅಧ್ಯಕ್ಷ ಸೂರ್ಯನಾರಾಯಣ್ ಸುವರ್ಣ, ಕಾಪು ಯುವವಾಹಿನಿ ಪ್ರತಿನಿಧಿ ಸುನೀಲ್ ಕುಮಾರ್, ಕಲ್ಯ ಜವನೆರ್ ಪ್ರತಿನಿಧಿ ರಂಜಿತ್ ದೇವಾಡಿಗ, ಕಾರ್ಯಕ್ರಮ ಸಂಘಟಕ ಸುಜಿತ್ ಶೆಟ್ಟಿ ಪಾದೂರು ಉಪಸ್ಥಿತರಿದ್ದರು.
ಶಿಬಿರದಲ್ಲಿ 45 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಕಾಪು ಮೆಸ್ಕಾಂನ ಲೈನ್‌ಮ್ಯಾನ್ ಉದಯ್ ಪೂಜಾರಿ ಅವರನ್ನು ಸೆಲ್ಯುಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಕಾಪು ಜೇಸಿಐನ ಪೂರ್ವಾಧ್ಯಕ್ಷ ರಾಕೇಶ್ ಕುಂಜೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಶ್ರುತಿ ಎಸ್. ಶೆಟ್ಟಿ ವಂದಿಸಿದರು.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…