ಉಡುಪಿ

ಕಾಪು : ಭರ್ಜರಿ ಮೀನಿನ‌ ಬೇಟೆ :ಮಟ್ಟು ಕಡಲತೀರದಲ್ಲಿ ಮೀನುಗಾರರ ಬಲೆಗೆ ಬಿದ್ದ ರಾಶಿ ರಾಶಿ ಮೀನುಗಳು -Vishwanews24

ಕಾಪು : ಭರ್ಜರಿ ಮೀನಿನ‌ ಬೇಟೆ :ಮಟ್ಟು ಕಡಲತೀರದಲ್ಲಿ ಮೀನುಗಾರರ ಬಲೆಗೆ ಬಿದ್ದ ರಾಶಿ ರಾಶಿ ಮೀನುಗಳು -Vishwanews24

ಕಾಪು : ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನುಗಳನ್ನು ದಡಕ್ಕೆ ಎಳೆಯಲು ಮೀನುಗಾರರು ಬಹಳಷ್ಟು ಶ್ರಮಪಡುತ್ತಿದ್ದರು. ಭಾರೀ ಪ್ರಮಾಣದ ಮೀನಿನಿಂದಾಗಿ ಕೈರಂಪಣಿಯ ಬಲೆ ಹರಿದು, ಮೀನು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ತೀರದಲ್ಲಿ ಮೀನುಗಳು ಮೇಲಕ್ಕೆ ಚಿಮ್ಮುತ್ತಿ ರುವ ದೃಶ್ಯಗಳು ಕಂಡುಬರುತ್ತಿದ್ದವು. ಮಟ್ಟು ಕಡಲತೀರದಲ್ಲಿ ಕೈರಂಪಣಿ ಬೆಲೆಗೆ ರಾಶಿ ರಾಶಿ ಮೀನುಗಳು ಸಿಲುಕಿದ್ದು, ಮೀನುಗಾರರಿಗೆ ಬಂಪರ್ ಡ್ರಾ ಹೊಡೆದಂತಾಗಿದೆ.

ಕರಾವಳಿ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾದಾಗ ಕಡಲಿನಲ್ಲಿ ಬಿರುಗಾಳಿ ಏಳುತ್ತೆ, ಅಲೆಗಳು ಮೇಲೆ ಕೆಳಗೆ ಆಗಿ ರಾಶಿ ರಾಶಿ ಮೀನುಗಳು ಕಡಲ ತೀರಕ್ಕೆ ಬರುತ್ತವೆ. ಇದನ್ನೇ ಎದುರು ನೋಡುವ ನಾಡದೋಣಿಯವರು ಕೈರಂಪಣಿ ಎಂಬ ಬಲೆ ಬೀಸಿ ಭರ್ಜರಿ ಮೀನಿನ‌ ಬೇಟೆಯಾಡುತ್ತಾರೆ.

ಕಳೆದ ಎರಡು ದಿನಗಳಿಂದ ಮಟ್ಟು ಕಡಲತೀರದಲ್ಲಿ ರಾಶಿರಾಶಿಯಾಗಿ ಮೀನುಗಳು ಕಂಡುಬರುತ್ತಿದ್ದು. ಕೈರಂಪಣಿ ಬಲೆಗೆ ಸಿಕ್ಕಿಬಿದ್ದ ಭಾರೀ ಪ್ರಮಾಣದ ಮೀನುಗಳನ್ನು ತೀರಕ್ಕೆ ಎಳೆದು ತರಲು ಮೀನುಗಾರರು ಹರ ಸಾಹಸಪಟ್ಟರು.

ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನುಗಳನ್ನು ದಡಕ್ಕೆ ಎಳೆಯಲು ಸಂದರ್ಭ ಕೈರಂಪಣಿಯ ಬಲೆ ಹರಿದು, ಮೀನು ಚೆಲ್ಲಾಪಿಲ್ಲಿಯಾಯಿತ್ತೆನ್ನಲಾಗಿದೆ. ಹೀಗೆ ಬಲೆಯಿಂದ ಹೊರಗೆ ಬಂದು ಒದ್ದಾಡುತ್ತಿದ್ದ ಮೀನುಗಳು ಸಾರ್ವಜನಿಕರ ಪಾಲಾದವು. ಹೀಗೆ ತೀರದಲ್ಲಿ ಮೀನಿಾಗಿ ಜನಸ್ತೋಮವೇ ನೆರೆದಿತ್ತು.

ಬಂಗುಡೆ, ಬೊಳಿಂಜಿರ್, ಕಲ್ಲೂರು, ಬೂತಾಯಿ, ಕೊಂತಿ, ಎಟ್ಟಿಯಂತಹ ಮೀನುಗಳು ಭಾರೀ ಪ್ರಮಾಣದಲ್ಲಿ ಬಲೆಗೆ ಬಿದ್ದಿವೆ. ಒಟ್ಟಾರೆಯಾಗಿ ಇಲ್ಲಿ ಮೀನುಗಾರರ ಬಲೆಗೆ ಸುಮಾರು ಐದು ಟನ್‌ಗಳಷ್ಟು ಮೀನು ಸಿಕ್ಕಿದೆ. ಹೀಗಾಗಿ ಈ ಪರಿಸರದ ಮತ್ಸ್ಯಪ್ರಿಯರಂತೂ ಫುಲ್ ಖುಷಿಯಾಗಿದ್ದರು.

Vishwa News 24

Recent Posts

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

1 hour ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

1 hour ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

2 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

2 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

2 hours ago

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago