ಕಾಪು ಮಂಥನ್ ಬೀಚ್ ರೆಸಾರ್ಟ್ ಬಳಿ ಮಹಾಸತ್ಸಂಗಕ್ಕೆ ಫೈನಲ್ ಟಚ್ – ಸಂಪೂರ್ಣ ಸಿದ್ದತೆಗೊಂಡ ವೇದಿಕೆ ಆಸನದ ವ್ಯವಸ್ಥೆ :vishwanews24
ಫೆ. 20 ರಂದು ಸಂಜೆ 4 ರಿಂದ 8 ಗಂಟೆಯವರೆಗೆ ರವಿಶಂಕರ್ ಗುರೂಜಿ ಅವರಿಂದ ಆನಂದ ಲಹರಿ ಮಹಾಸತ್ಸಂಗ
ಕಾಪು : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಆರ್ಟ್ ಆಫ್ ಲೀವಿಂಗ್‌ನ ಸಂಸ್ಥಾಪಕ, ಪದ್ಮವಿಭೂಷಣ ಗುರುದೇವ್ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಫೆ. 20 ರಂದು ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ಜ್ಞಾನ, ಧ್ಯಾನ ಹಾಗೂ ಗಾಯನಗಳನ್ನೊಳಗೊಂಡಿರುವ ಆನಂದ ಲಹರಿ – ಸುಮಧುರ ಸಂಜೆ ಕಾರ್ಯಕ್ರಮ ನಡೆಯಲಿದೆ.
ಉಡುಪಿ ಜಿಲ್ಲೆಯ ಕಾಪು ಮಂಥನ್ ಬೀಚ್ ರೆಸಾರ್ಟ್ ಬಳಿಯ ಸಮುದ್ರ ಕಿನಾರೆಯಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಮನುಷ್ಯನ ಸಂಪೂರ್ಣ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಸಫಲವಾಗಿರುವ ಜೀವನ ಕಲೆ ಹಾಗೂ ಸುದರ್ಶನ ಕ್ರಿಯಾಯೋಗದ ಆನಂದ ಲಹರಿ ಮಹಾಸತ್ಸಂಗ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ.
ಆನಂದ ಲಹರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಮೂಳೂರು ಸಾಯಿರಾಧಾ ಹೆರಿಟೇಜ್ ಬಳಿ, ಕಾಪು ಓಶಿಯನ್ ಬೀಚ್ ರೆಸಾರ್ಟ್ ಬಳಿ, ಕಾಪು ಪಡು ಸರಕಾರಿ ಶಾಲೆ ಬಳಿ, ಮಂಥನ್ ಬೀಚ್ ರೆಸಾರ್ಟ್ ಬಳಿಯ ನಾಲ್ಕು ಕಡೆಗಳಲ್ಲಿ ಸೂಕ್ತ ರೀತಿಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮ ಸಂಯೋಜಕರಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಸಹೋದರರಾದ ಹರೀಶ್ ಪಿ. ಶೆಟ್ಟಿ ಗುರ್ಮೆ, ಸತೀಶ್ ಪಿ. ಶೆಟ್ಟಿ ಗುರ್ಮೆ ನೇತೃತ್ವದಲ್ಲಿ ಎಲ್ಲಾ ಸಮಾಜ ಬಾಂಧವರು ಮತ್ತು ಆರ್ಟ್ ಆಫ್ ಲೀವಿಂಗ್ ಬಳಗದವರ ನೇತೃತ್ವದಲ್ಲಿ ಕಾರ್ಯಕ್ರಮದ ಪೂರ್ವ ತಯಾರಿಗಳು ಪೂರ್ಣಗೊಂಡಿದ್ದು ಮಂಗಳವಾರ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ರೆಸಾರ್ಟ್ ಸುತ್ತ ಪೊಲೀಸ್ ಸರ್ಪಗಾವಲು
ಸೋಮವಾರ ರಾತ್ರಿ ಮಂಗಳೂರು ಕಾರ್ಯಕ್ರಮ ಮುಗಿಸಿ ಕಾಪು ಮಂಥನ್ ರೆಸಾರ್ಟ್ ಗೆ ಆಗಮಿಸಲಿರುವ ಗುರೂಜಿಯ ಭದ್ರತೆ ದೃಷ್ಟಿಯಿಂದ ರೆಸಾರ್ಟ್ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಬಂದಿಳಿದ ಸಾವಿರಾರು ಡಿವೋಟಿಸ್
ನಾಳೆಯ ಕಾಪುವಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ದೂರದೂರಿನಿಂದ ಗುರೂಜಿಯ ಭಕ್ತರು- ಅಭಿಮಾನಿಗಳು ನಗರ ಸುತ್ತಲಿನ ಮಠ-ರೂಂಗಳಲ್ಲಿ ತಂಗಿದ್ದಾರೆ.
ತುಳುನಾಡ ಸಂಪ್ರದಾಯದಲ್ಲಿ ಸ್ವಾಗತ
ಗುರೂಜಿ ಆಗಮನದ ಸಮಯದಲ್ಲಿ ತುಳುನಾಡಿನ ಶೈಲಿಯ ಕೊಂಬುವಾದ್ಯ-ಚೆಂಡೆವಾದನ- ನಾಗಸ್ವರ- ವಾದ್ಯಗೋಷ್ಠಿಯಿಂದ ಕಲಾವಿದರು ಸ್ವಾಗತಿಸಲಿದ್ದಾರೆ.
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…
ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…
ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್ ವಾಹನ ಡಿಕ್ಕಿ : ಐವರು ದುರ್ಮರಣ ಕೊಪ್ಪಳ: ಗೂಡ್ಸ್ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…