Featured

ಕಾಪು : ಮಾರ್ಚ್ 23 ಸುಗ್ಗಿ ಮಾರಿಪೂಜೆಯಂದು ಶಿಲಾಸೇವೆ ಸಮರ್ಪಣಾ ಸಮಾರಂಭ: ಕೆ ವಾಸುದೇವ ಶೆಟ್ಟಿ -Vishwanews24

ಕಾಪು : ಮಾರ್ಚ್ 23 ಸುಗ್ಗಿ ಮಾರಿಪೂಜೆಯಂದು ಶಿಲಾಸೇವೆ ಸಮರ್ಪಣಾ ಸಮಾರಂಭ: ಕೆ ವಾಸುದೇವ ಶೆಟ್ಟಿ -Vishwanews24

ಕಾಪು: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಶಿಲಾಮಯ ದೇಗುಲದ ಪುನರ್‌ನಿರ್ಮಾಣಕ್ಕೆ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯು ಈಗಾಗಲೇ ನೀಲಿನಕಾಶೆ ತಯಾರಿಸಿದ್ದು. ಲೋಕೋಪಯೋಗಿ ಇಲಾಖೆಯಿಂದ ದೇವಿಯ ಗರ್ಭಗುಡಿ ಮತ್ತು ಉಚ್ಚಂಗಿ ಗುಡಿಯ ಟೆಂಡರ್ ಕರೆದು, ಟೆಂಡರ್ ಪ್ರಕ್ರಿಯೆ ಮುಗಿದು, ಕಾಮಗಾರಿಯು ಭರದಿಂದ ಸಾಗುತ್ತಿದೆ. ಎರಡು ಗುಡಿಗಳನ್ನು ಬಾಗಲಕೋಟೆ ಜಿಲ್ಲೆಯ ಇಲ್ಕಲ್‌ನ ಕೆಂಪು ಶಿಲೆಯಿಂದ ಕೆತ್ತನೆ ಕೆಲಸವು ಸಾಗುತ್ತಿದೆ. ಮಲ್ಲಾರ್ ಗ್ರಾಮದಲ್ಲಿ ದೇವಸ್ಥಾನದ 4 ಎಕ್ರೆ ಜಾಗದಲ್ಲಿ ಕಲ್ಲಿನ ಕೆಲಸಕ್ಕಾಗಿ ಕಾರ್ಖಾನೆಯನ್ನು ತೆರೆಯಲಾಗಿದೆ ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರ್ಥಿಕ ಕ್ರೋಡಿಕರಣಕ್ಕಾಗಿ ಭಕ್ತರಿಂದ ಶೀಲಾಸೇವೆಯ ದೇಣಿಗೆಯನ್ನು ಸ್ವೀಕರಿಸಲಾಗುತ್ತಿದೆ. ಒಂದು ಶಿಲಾಸೇವೆಗೆ ರೂ.999/-, 9 ಶಿಲಾಸೇವೆಗೆ ರೂ.9999/-, 99 ಶಿಲಾಸೇವೆಗೆ ರೂ.99,999/- ನಿಗದಿಪಡಿಸಲಾಗಿದೆ. ಶಿಲಾಸೇವೆ ನೀಡುವ ಭಕ್ತರು ಸನ್ನಿಧಾನಕ್ಕೆ ಬಂದು ಶಿಲಾಸೇವೆ ನೀಡಿ ರಶೀದಿ ಮತ್ತು ಪ್ರಸಾದ ಪಡೆಯಬಹುದಾಗಿದೆ. ಅಥವಾ ಸಮಿತಿಯ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಸಮಿತಿಯು ದೇಣಿಗೆ ಸಂಗ್ರಹಣೆಗೆ ಆರ್ಥಿಕ ಸಮಿತಿಯ ಸದಸ್ಯರನ್ನು ಬಿಟ್ಟು ಯಾರನ್ನೂ ಎಲ್ಲಿಯೂ ನೇಮಿಸಿಲ್ಲ ಹಾಗಾಗಿ ಯಾರು ಮೋಸಹೋಗಬಾರದು. ಪ್ರತಿಯೊಬ್ಬರೂ ತಮ್ಮ ತಮ್ಮ ಹೆಸರಿನಲ್ಲಿ ಕನಿಷ್ಠ 1 ಶಿಲಾಸೇವೆಯನ್ನಾದರೂ ಅಮ್ಮನಿಗೆ ನೀಡಿ ಕೃತಾರ್ಥರಾಗಬೇಕಾಗಿ ವಿನಂತಿಸಿದರು.

ಇದನ್ನೂ ಓದಿ : ಇನ್ನು ಮುಂದೆ ಎಂದೂ ಚುನಾವಣೆಗೆ ನಿಲ್ಲಲ್ಲ , ರಾಜಕೀಯದಿಂದ ನಿವೃತ್ತಿಯಾಗುತ್ತೇನೆ : ಕಣ್ಣೀರಿಟ್ಟ ಶಾಸಕ ಸಾ.ರಾ. ಮಹೇಶ್ -Vishwanews24

ಮಾರ್ಚ್ ತಿಂಗಳ 23ನೇ ಮಂಗಳವಾರ ಅಮ್ಮನ ಬಹುದೊಡ್ಡ ಜಾತ್ರೆ ಸುಗ್ಗಿ ಮಾರಿಪೂಜೆ ಸಂಭ್ರಮದಲ್ಲಿಯೇ ಬೆಳಿಗ್ಗೆ 9.59ಕ್ಕೆ ಸರಿಯಾಗಿ ಶಿಲಾಸೇವೆ ಸಮರ್ಪಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ.ಆರ್.ಮೆಂಡನ್ ವಹಿಸಿಕೊಳ್ಳಲಿದ್ದು ಹಿಂದುಳಿದ ವರ್ಗದ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ಎಲ್.ಭೋಜೇಗೌಡ, ಕಾಪು ಪುರಸಭಾ ಅಧ್ಯಕ್ಷ ಶ್ರೀ ಅನಿಲ್ ಕುಮಾರ್, ಉಡುಪಿ ಜಿಲ್ಲಾಧಿಕಾರಿ ಶ್ರೀ ಜಿ.ಜಗದೀಶ್, ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರೂ ಮಾಜಿ ನಗರಾಭಿವೃದ್ಧಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಡಾ||ಎಂ.ಎನ್.ರಾಜೇಂದ್ರ ಕುಮಾರ್, ವಿ.ಕೆ.ಗ್ರೂಪ್ ಕಂಪನಿ ಮುಂಬೈ, ಇದರ ಆಡಳಿತ ನಿರ್ದೇಶಕರಾದ ಶ್ರೀ ಕೆ.ಎಮ್. ಶೆಟ್ಟಿ ಇವರೆಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ : ಉಡುಪಿ: ಅಜ್ಜರಕಾಡಿನಲ್ಲಿ 10 ದಿನಗಳ ಸೇನಾ ನೇಮಕಾತಿ ರ‍್ಯಾಲಿಗೆ ಚಾಲನೆ -Vishwanews24

ಸಮಿತಿಯ ಗೌರವಾಧ್ಯಕ್ಷರಾದ : ಡಾ॥ಬಿ.ಆರ್.ಶೆಟ್ಟಿ ಬಾವುಗುತ್ತು, ಶ್ರೀ ಸುಧಾಕರ ಹೆಗ್ಡೆ ತುಂಗಾ, ಶ್ರೀ ಸುಂದರ ಶೆಟ್ಟಿ ಸಾಯಿಪ್ಯಾಲೇಸ್, ಶ್ರೀ ಪ್ರಕಾಶ್ ಶೆಟ್ಟಿ ಎಮ್.ಆರ್.ಜಿ ಗ್ರೂಪ್, ಶ್ರೀ ರಾಜಶೇಖರ ಕೋಟ್ಯಾನ್ ಅಧ್ಯಕ್ಷರು ಬಿಲ್ಲವರ ಮಹಾಮಂಡಲ ಮುಲ್ಕಿ, ಶ್ರೀ ಸುಧೀರ್‌.ವಿ.ಶೆಟ್ಟಿ ಚರೀಷ್ಮಾ ಬಿಲ್ಡರ್ ಮುಂಬೈ, ಶ್ರೀ అనిಲ್ ಬಲ್ಲಾಳ್ ಕಾಪು ಬೀಡು. ಇವರು ಮುಖ್ಯ ರಾಮ ಶ್ರೀಯಾನ್, ಶ್ರೀಯಾನ್ ಸದನ ಕಾಪು, ಶ್ರೀ ರಾಘವೇಂದ್ರ ತಂತ್ರಿ ವಿದ್ವಾನ್ ಕೊರಂಗ್ರಪಾಡಿ, ಶ್ರೀ ವಿಕ್ರಂ ಅಧ್ಯಕ್ಷರು, ಬಿಲ್ಲವ ಸಂಘ ಕಾಪು, ಶ್ರೀ.ಡಾ| ಪ್ರಭಾಕರ ಶೆಟ್ಟಿ, ಕಾಪು.ಇವರೆಲ್ಲರೂ ಸಭೆಯಲ್ಲಿ ಭಾಗವಹಿಸುವರು. ಸಮಾರಂಭದಲ್ಲಿ ಭಾಗವಹಿಸುವ ಭಕ್ತರೆಲ್ಲರೂ ತಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಬರಬೇಕು. ಸರತಿ-ಸಾಲಿಗಾಗಿ ಉತ್ತಮ ವ್ಯವಸ್ಥೆ ಮಾಡಿದ್ದು, ಎಲ್ಲರೂ ಸಮಾಜಿಕ ಅಂತರ ಕಾಯಬೇಕಾಗಿದೆ. ಸುರಕ್ಷತೆ ನಾಮಫಲಕವನ್ನು ಅಲ್ಲಲ್ಲಿ ಹಾಕಲಾಗಿದ್ದು, ಸಾನಿಟೈಸರನ್ನು ಬೇರೆ-ಬೇರೆ ಜಾಗದಲ್ಲಿ ಇರಿಸಲಾಗಿದೆ.ಭಕ್ತರು ಸರಾಗವಾಗಿ ದೇವಿಯ ದರ್ಶನ, ನಿಧಿಕುಂಭ ದರ್ಶನ, ಶಿಲಾಸೇವೆ ಅರ್ಪಣೆಯ ಮುಖಾಂತರ ಪುಷ್ಪಾರ್ಚನೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ನವದುರ್ಗೆಯರ ಹೆಸರಿನಲ್ಲಿ 9 ಕೌಂಟರ್‌ಗಳನ್ನು ರಚಿಸಲಾಗಿದ್ದು ಭಕ್ತರು ಆ ಕೌಂಟರ್‌ನಿಂದ ಶಿಲಾಸೇವೆಯ ರಶೀದಿಯನ್ನು ಪಡೆಯಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ,ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯಾ,ಯೋಗಿಶ್ ಶೆಟ್ಟಿ ಕಾಪು,ಬೆಳಪು ದೇವಿಪ್ರಸಾದ್ ಶೆಟ್ಟಿ,ಗಂಗಾಧರ ಸುವರ್ಣ,ಮಾಧವ ಪಾಲನ್ ,ಹರೀಶ್ ನಾಯಕ್ ಕಾಪು,ನಡಿಕೆರೆ ರತ್ನಾಕರ ಶೆಟ್ಟಿ,ಹಾಗೂ ವ್ಯವಸ್ಥಾಪನ‌ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕೋವಿಡ್ 2ನೇ ಅಲೆ : ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬೇಡಿ, ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿ, ಲಸಿಕೆ ಹಾಕಿಸಿಕೊಳ್ಳಿ : ಪ್ರಧಾನಿ ಮೋದಿ -Vishwanews24

Vishwa News 24

Recent Posts

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

4 hours ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

4 hours ago

ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ – vishwanews24

   ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಶಾಂಭವಿ ಹೋಟೇಲ್ ಎದುರು ರಸ್ತೆಯಲ್ಲಿ…

4 hours ago

ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ ; ಅರ್ಜಿ ಆಹ್ವಾನ – vishwanews24

ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ ಉಡುಪಿ, : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನ ಆರ್ಥಿಕವಾಗಿ…

4 hours ago

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  – vishwanews24

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  ವಿನಯ್ ಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ…

4 hours ago

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

19 hours ago