Featured

ಕಾಪು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 22 ಮಂದಿಗೆ ಲಕ್ಷಾಂತರ ರೂ. ವಂಚನೆ : ಪ್ರಕರಣ ದಾಖಲು – vishwanews24

ಕಾಪು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 22 ಮಂದಿಗೆ ಲಕ್ಷಾಂತರ ರೂ. ವಂಚನೆ : ಪ್ರಕರಣ ದಾಖಲು

ಕಾಪು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 22 ಮಂದಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ವಿದೇಶದಲ್ಲಿದ್ದ ಕಾಪುವಿನ ವಸಂತ್ ಡಿ.ಪೂಜಾರಿ ಪರಿಚಯದ ಕೆಲವರಿಗೆ ವಿದೇಶಕ್ಕೆ ತೆರಳಲು ವಿಸಾ ಮಾಡಿಸಿ ಕೊಡಲು ಸುರತ್ಕಲ್ ನಿವಾಸಿ ಜೋಬಿ ಅರಂಗಸ್ಸೆರಿ ದೆವಸ್ಸಿ ಎಂಬವರನ್ನು ಸಂಪರ್ಕಿಸಿದ್ದು, ಅವರು ಚಂಡಿಗಢದಲ್ಲಿರುವ ಕಂಪನಿಯಲ್ಲಿ ವಿದೇಶಕ್ಕೆ ತೆರಳುವ ವ್ಯಕ್ತಿಗಳಿಗೆ ಕೆಲಸದ ವಿಸಾ ಕೊಡಿಸುತ್ತಾರೆ ಎಂಬುದಾಗಿ ತಿಳಿಸಿದ್ದರು.

ವಸಂತ್ 2024ರ ಎ.6ರಂದು ವಿಸಾದ ಬಗ್ಗೆ ತಿಳಿದುಕೊಳ್ಳಲು ಚಂಡಿಗಢಗೆ ಹೋಗಿದ್ದು, ಅಲ್ಲಿ ಜೋಬಿ, ವಿಜಯ್ ಸಿಂಗ್, ರಮನ್, ನಿರ್ವೈರ್ ಸಿಂಗ್ ಎಂಬವರನ್ನು ಪರಿಚಯಿಸಿದ್ದರು. ಬಳಿಕ ವಸಂತ್ ಪೂಜಾರಿ ಊರಿಗೆ ಬಂದು ಸೂರಜ್ ಹಾಗೂ ಮನೀಶ್ ಎಂಬವರನ್ನು ಅಜರಬೈಜಾನ್‌ಗೆ ಕಳುಹಿಸಿ ಕೊಡಲು ಕಂಪನಿಗೆ ತಿಳಿಸಿದ್ದು, ಕಂಪೆನಿಯವರು ಒಪ್ಪಿಕೊಂಡ ಮೇರೆಗೆ 2024ರ ಜುಲೈಯಲ್ಲಿ ಒಟ್ಟು 7,00,000ರೂ. ಹಣ ಪಾವತಿಸಿದ್ದರು.

ಬಳಿಕ ಕಂಪನಿಯವರು ಸೆ.22ರಂದು ಸೂರಜ್ ಮತ್ತು ಮನಿಶ್‌ಗೆ ಅಜರ ಬೈಜಾನ್‌ಗೆ ಕೆಲಸದ ಆಫರ್ ಮಾಡಿ ವಿಮಾನ ಟಿಕೆಟ್‌ನ್ನು ಮಾಡಿದ್ದು ಸ್ವಲ್ಪ ದಿನದ ಬಳಿಕ ಅದನ್ನು ಕ್ಯಾನ್ಸಲ್ ಮಾಡಿದ್ದರು. ಈ ಮಧ್ಯೆ 20 ಜನ ಪರಿಚಯದವರಿಗೂ ಕೆಲಸ ಕೊಡಿಸಲು ಒಟ್ಟು 56,91,824ರೂ. ಹಣವನ್ನು ಪಾವತಿಸಿದ್ದರು.

2025ರ ಜನವರಿ ಬಳಿಕ ಇವರೆಲ್ಲ ಹಲವು ಬಾರಿ ಚಂಡಿಗಡಕ್ಕೆ ಹೋಗಿ ಹಣ ವಾಪಾಸ್ಸು ನೀಡುವಂತೆ ಕೇಳಿದ್ದು, ಅದಕ್ಕೆ ಆರೋಪಿಗಳು 2025ರ ಜು.10 ಹಾಗೂ ಜು.30ಕ್ಕೆ ತಲಾ 6,00,000ರೂ. ಗಳ ಚೆಕ್‌ಗಳನ್ನು ನೀಡಿದ್ದು ಅವುಗಳನ್ನು ಬ್ಯಾಂಕಿನಲ್ಲಿ ಪರಿಶೀಲಿಸಿದಾಗ ಅವು ಕ್ಲೋಸ್ಡ್ ಅಕೌಂಟ್‌ನ ಚೆಕ್‌ಗಳು ಎಂಬುದು ತಿಳಿದುಬಂತು.

ಹೀಗೆ ಆರೋಪಿಗಳು 22 ಮಂದಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಒಟ್ಟು 63,91,824ರೂ. ಹಣವನ್ನು ಪಡೆದು ಕೊಂಡು ಕೆಲಸವನ್ನು ಕೋಡಿಸದೆ ಹಣವನ್ನು ವಾಪಾಸ್ಸು ನೀಡದೇ ಮೋಸ ಹಾಗೂ ವಂಚನೆ ಮಾಡಿರುವುದಾಗಿ ದೂರಲಾಗಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

1 day ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

1 day ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

1 day ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

1 day ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

1 day ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

1 day ago