Featured

ಕಾಪು ವಿಧಾನ ಸಭಾ ಕ್ಷೇತ್ರ : ಗುರ್ಮೆ-ಯಶ್ಪಾಲ್-ಶ್ರೀಶಾ-ಸುರೇಶ್ ನಾಯಕ್ ಓಕೆ ಲಾಲಾಜಿ ಯಾಕೆ…??? Vishwanews24

ಕಾಪು ವಿಧಾನ ಸಭಾ ಕ್ಷೇತ್ರ : ಗುರ್ಮೆ-ಯಶ್ಪಾಲ್-ಶ್ರೀಶಾ-ಸುರೇಶ್ ನಾಯಕ್ ಓಕೆ ಲಾಲಾಜಿ ಯಾಕೆ…???

ಪೊಲಿಟಿಕಲ್ ಬ್ಯುರೊ :
2023 ರ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ದವಾಗಿದೆ ಕರಾವಳಿ ಅತ್ಯಂತ ಕುತೂಹಲದ ಕ್ಷೇತ್ರವಾಗಿರುವ ಕಾಪುವಿಗೆ ಕಾಂಗ್ರೆಸ್ ಪಾರ್ಟಿಯಿಂದ ವಿನಯ್ ಕುಮಾರ್ ಸೊರಕೆ ಫೈನಲ್ ಆದರೆ ಬಿಜೆಪಿಗೆ ಯಾರು ಎಂಬ ಪ್ರಶ್ನೆ ಸದ್ಯ ಎದ್ದಿರುವಂತದು.

ಹಾಲಿ ಶಾಸಕರಾಗಿರುವ ಲಾಲಾಜಿ ಮೆಂಡನ್ ಗೆ ಟಿಕೆಟ್ ನೀಡಿದರೆ ಬಹಿರಂಗವಾಗಿ ಬಿಜೆಪಿಯ ವಿರುದ್ಧ ಕೆಲಸ‌ಮಾಡುವುದಾಗಿ ಹೇಳಿರುವ ವಿಚಾರವೇನು ಗುಟ್ಟಾಗಿ ಉಳಿದಿಲ್ಲ ಮತ್ತು ಭ್ರಷ್ಟಾಚಾರ-ಅಕ್ರಮ ಮರಳು ದಂಧೆ-ಕಮಿಷನ್ ಇವೆಲ್ಲವುದರ ಆರೋಪದ ಪಟ್ಟಿ ಬೆನ್ನು ಬಿದ್ದ ಬೇತಾಳನಂತೆ ಹಿಂದೆಯೇ ಬರುತ್ತಿದೆ ಹಾಗಾಗಿ ರೋಸಿ ಹೋಗಿರುವ ತಳಮಟ್ಟದ ನೈಜ ಕಾರ್ಯಕರ್ತರ ಪಡೆ ಲಾಲಾಜಿಗೆ ಟೆಕೆಟ್ ನೀಡಿದರೆ ತಟಸ್ಥರಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇನ್ನೂ ಚಾಲ್ತಿಯಲ್ಲಿರುವ ಹೆಸರಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಸುರೇಶ್ ನಾಯಕ್,ಶ್ರೀಶಾ ನಾಯಕ್ ,ಇತರೆ ಯಾರಿಗಾದರೂ ಪಕ್ಷ ಟಿಕೆಟ್ ನೀಡಿದರೆ ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ಕಾರ್ಯಕರ್ತರು ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಇಡೀ ವಿಧಾನ ಸಭಾ ಕ್ಷೇತ್ರದಲ್ಲಿ ವಿರೋಧ ಕಟ್ಟಿಕೊಂಡಿರುವ ಲಾಲಾಜಿ‌ ಗೆ ಈ ಸಲ ಟಿಕೆಟ್ ಯಾಕೆ ನೀಡಬೇಕೆಂದು ಚರ್ಚೆ ಆರಂಭವಾಗಿದೆ,

ಆರು ಬಾರಿ ಪಕ್ಷ ಅವಕಾಶ ನೀಡಿದ್ದು ಮೂರು ಸಲ ಗೆದ್ದು ಮೂರು ಸೋಲುವ ಮುಖೇನ ಜೀವನದಲ್ಲಿ ಬೇಕಾಗುವಷ್ಟು ಆರ್ಥಿಕ ಕ್ರೋಡೀಕರಿಸಿ ವ್ಯಾವಹಾರಿಕವಾಗಿಯೂ ಕೂಡ ಬಲಿಷ್ಠರಾಗಿಯೇ ಬೆಳೆದಿರುವ ಕಾರಣಕ್ಕೆ ಟಿಕೆಟ್ ನೀಡಬೇಕೆ ಅಥವಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬೆನ್ನಹಿಂದೆ ಚೂರಿ ಹಾಕಿರುವ ಕಾರಣಕ್ಕೆ ಟಿಕೆಟ್ ನೀಡಬೇಕೆ,ದೇವಾಲಯ,ಶಾಲೆಯಲ್ಲಿ ಕೂಡ ರಾಜಕೀಯ ಚಾಲಿ ಮುಂದುವರಿಸಿರುವ ಕಾರಣಕ್ಕಾಗಿ ಟಿಕೆಟ್ ನೀಡಬೇಕೆ,ಯಾವ ಕಾರಣಕ್ಕಾಗಿ ಟಿಕೆಟ್ ನೀಡ ಬೇಕು ಎಂದು ಕಾರ್ಯಕರ್ತರ ನಡುವೆ ಚರ್ಚೆ ನಡೆಯುತ್ತಿದೆ.

ಇಂತಹ ಹಲವಾರು ಕಾರಣದಿಂದಾಗಿ ಇಡೀ ವಿಧಾನಸಭಾ ಕ್ಷೇತ್ರದಲ್ಲಿ ಚಾರ್ಮ್ ಕಳೆದುಕೊಂಡಿರುವ ಶಾಸಕನಿಗೆ ಟಿಕೆಟ್ ಸಿಕ್ಕಿ ಅವಕಾಶ ದೊರೆತರೆ ಕಾಂಗ್ರೆಸ್ ಸುಲಭವಾಗಿ ಕಾಪುವಿನಲ್ಲಿ ಗದ್ದುಗೆ ಏರಲಿದೆ ಎಂಬುದು ಜನರ ಅಭಿಪ್ರಾಯ.

ಕಳೆದ ವರ್ಷ ಮಾಜಿ‌ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಭಾವ ಹಾಗೂ ಅಲ್ಪಮತಗಳಿಂದ ಸೋತ ಅಭ್ಯರ್ಥಿ ಎಂಬ ಅನುಕಂಪದಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದ ಮೆಂಡನ್ ವಿಚಲಿತರಾಗಿದ್ದಾರೆ.

ಈ ವ್ಯಕ್ತಿಯ ಮುಂಗೋಪ,ಕಾರ್ಯಕರ್ತರ ಜತೆಗಿನ ವಿರಸ,ಗುತ್ತಿಗೆದಾರಿಕೆಯಲ್ಲಿ ಮುಸ್ಲಿಂ ಪ್ರೀತಿ, ಇವೆಲ್ಲವೂ ಕೂಡ ಶಾಸಕರಿಗೆ ಮುಳುವಾಗುವ ಸಾದ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಇವೆಲ್ಲವನ್ನೂ ಮೀರಿ ಕಾಪುವಿನಲ್ಲಿ ಲಾಲಾಜಿ ಮೆಂಡನ್ ಗೆ ಬಿಜೆಪಿ ಟಿಕೆಟ್ ನೀಡಿ ಗೆದ್ದರೆ ಅದೊಂದು ಪವಾಡವೇ ಸರಿ ಅನ್ನುತ್ತಾರೆ ರಾಜಕೀಯ ವಿಶ್ಲೇಷಕರು.

Vishwa News 24

Recent Posts

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

15 hours ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

16 hours ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

16 hours ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

19 hours ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

19 hours ago

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ – vishwanews24

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…

19 hours ago