filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಡಿಸೆಂಬರ್ 25/26/27 ರಂದು “ಕಾಪು ಕಡಲ ಪರ್ಬ” :vishwanews24
ಕಾಪು : ಭಾರತೀಯ ಜನತಾ ಪಾರ್ಟಿ ಕಾಪು ಮಂಡಲದ ವತಿಯಿಂದ ,ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಅಟಲ್ ಜನ್ಮಶತಾಬ್ಧಿ ಪ್ರಯುಕ್ತ ಡಿಸೆಂಬರ್ 26/27/28 ರಂದು ಕಾಪು ಕಡಲ ಪರ್ಬ ಉತ್ಸವ ಇಲ್ಲಿನ ಲೈಟ್ ಹೌಸ್ ಕಡಲ ಕಿನಾರೆ ಬಳಿ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಇಂದು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕ್ರಮದ ಲೋಗೋ ಅನಾವರಣ ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾತಾನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಈ ಕಾರ್ಯಕ್ರಮವೂ ಬೀಚ್ ಉತ್ಸವ-ಆಹಾರ ಮೇಳ-ಕ್ರೀಡೋತ್ಸವ-ಸಾಂಸ್ಕೃತಿಕ ಉತ್ಸವದ ಜತೆಗೆ ಆರೋಗ ತಪಾಸಣೆ ಶಿಬಿರವನ್ನೊಳಗೊಂಡಿದೆ ಎಂದರು.
ಇಡೀ ಅವಿಭಜಿತ ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶಹೊಂದಿದ್ದು ಕಾರ್ಯಕರ್ತರ ಶ್ರಮದಿಂದ ಇದು ಒಳಗೊಂಡಿದೆ ಎಂದರು.
ಈಗಾಗಲೇ ರಂಗತರಂಗ ಕಲಾವಿದರು ಕಾಪು ಇವರ ಹೊಸ ನಾಟಕ ಶೋಭಾಜಿ-ಖ್ಯಾತ ಸಂಗೀತ ನಿರ್ದೆಶಕ ರಘುದೀಕ್ಷಿತ್ ಅವರ ಸಂಗೀತ ರಸಮಂಜರಿ,ಹಗ್ಗಜಗ್ಗಾಟ,ವಾಲಿಬಾಲ್ , ತ್ರೋಬಾಲ್,ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳು ನಿಗದಿಯಾಗಿದ್ದು ಇನ್ನಷ್ಟು ಕಾರ್ಯಕ್ರಮವನ್ನು ಜೋಡಿಸುವ ಸಲುವಾಗಿ ಇಂದು ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದರು.
ವಿಶೇಷ ಆಹ್ವಾನಿತರಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ,ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವಿಭಜಿತ ಎರಡು ಜಿಲ್ಲೆಯ ಶಾಸಕ ಸಂಸದರು ಸೇರಿದಂತೆ ರಾಜ್ಯದ ವಿವಿಧ ನಾಯಕರು, ಸಿನಿಮಾ ತಾರೆಯರು ಭಾಗವಹಿಸಲಿದ್ದಾರೆಂದರು.
ವಿಶೇಷವಾಗಿ ಈ ಎಲ್ಲಾ ಕಾರ್ಯಕ್ರಮವೂ ಕಾಪುವಿನ ಮಾಣಿಕ್ಯ ಕೀರ್ತಿ ಶೇಷ ಕಾಪು ಲೀಲಾಧರ ಶೆಟ್ಟಿಯವರ ಹೆಸರಿನ ವೇದಿಕೆಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಜೀತೆಂದ್ರ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ,ಶರಣ್ ಮಟ್ಟು ಕಾರ್ಯಕ್ರಮನಿರೂಪಿಸಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ,ಮಾಜಿ ಶಾಸಕ ಲಾಲಾಜಿ ಮೆಂಡನ್,ಕುಯಿಲಾಡಿ ಸುರೇಶ್ ನಾಯಕ್,ಗೋಪಾಲಕೃಷ್ಣ ರಾವ್ ಮಟ್ಟು,ಶ್ರೀಕಾಂತ್ ನಾಯಕ್ ಅಲೆವೂರು,ಪುರಸಭೆ ಪ್ರಥಮ ಪ್ರಜೆ ಹರಿಣಾಕ್ಷಿ ದೇವಾಡಿಗ ಉಪಸ್ಥಿತರಿದ್ದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…