ಕಾಪು: ಸಮಗ್ರ ಜೀರ್ಣೋದ್ಧಾರದೊಂದಿಗೆ ಕಂಗೊಳಿಸುತ್ತಿರುವ, ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಇನ್ನು ಮುಂದೆ ಅಯೋಧ್ಯೆ ಮಾದರಿಯ ಬೃಹತ್ ಘಂಟೆಯ ನಾದ ಮೊಳಗಲಿದೆ.
ಕಾಪು ಮಾರಿಯಮ್ಮ ದೇವಿಯ ಭಕ್ತರಾದ ಮುಂಬಯಿಯ ಅಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ರಿಯಲೇರ್ ಪ್ರೈ. ಲಿ. ನ ಸಿಎಂಡಿ ಅರವಿಂದ್ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಸಮರ್ಪಿಸಲಿರುವ ಸುಮಾರು 1,500 ಕೆಜಿ ತೂಕದ ಬೃಹತ್ ಗಂಟೆಯು ಭಾರತದ ಎರಡನೇ ಅತೀ ದೊಡ್ಡ ಮತ್ತು ಕರ್ನಾಟಕದ ಪ್ರಥಮ ದೊಡ್ಡ ಘಂಟೆಯಾಗಿ ಗುರುತಿಸಲ್ಪಡಲಿದೆ.
1,500 ಕೆಜಿ ತೂಕ ಮತ್ತು 5 ಫೀಟ್ ಎತ್ತರದ ಸಂಪೂರ್ಣ ಕಂಚಿನಿಂದ ನಿರ್ಮಾಣಗೊಂಡಿರುವ ಈ ಘಂಟೆಯು ಆಂಧ್ರಪ್ರದೇಶದ ಬಿ.ಎಸ್.ಎಂ. ಫೌಂಡ್ರೀಸ್ ಕಾರ್ಖಾನೆಯಲ್ಲಿ ಸಿದ್ಧಗೊಂಡಿದೆ. ಶುಕ್ರವಾರ ಕಾಪುವಿಗೆ ತಲುಪುವ ಬೃಹತ್ ಗಂಟೆಯು ಫೆ. 9ರಂದು ಸ್ವರ್ಣ ಗದ್ದುಗೆ, ರಜತ ರಥ ಸಹಿತ ಸ್ವರ್ಣಾಭರಣಗಳ ಪುರಪ್ರವೇಶ ಶೋಭಾಯಾತ್ರೆಯ ಜತೆಗೂಡಿ ಕಾಪು ಮಾರಿಗುಡಿಗೆ ಆಗಮಿಸಲಿದೆ.
ದೇಶದ ಅತಿ ದೊಡ್ಡ ಗಂಟೆ ಅಯೋಧ್ಯೆಯಲ್ಲಿಈವರೆಗಿನ ದಾಖಲೆಯೆಂಬಂತೆ ದೇಶದ ಅತಿ ದೊಡ್ಡದಾದ ಸುಮಾರು 2,200 ಕಿ. ಗ್ರಾಂ ತೂಕದ ಬೃಹತ್ ಘಂಟೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿದೆ. ಮಾರಿಗುಡಿಗೆ ಸಮರ್ಪಿಸುವ ಘಂಟೆ ದೇಶದ 2ನೇ ಮತ್ತು ರಾಜ್ಯದ ಪ್ರಥಮ ಘಂಟೆಯಾಗಿ ದಾಖಲೆ ಬರೆಯಲಿದೆ.
ವಿಶೇಷತೆಗಳೇನು
ಮಾರಿಗುಡಿಯಲ್ಲಿ ಅಳವಡಿಸಲಾಗುವ ಬೃಹತ್ ಘಂಟೆ ಯನ್ನು ಅಷ್ಟಧಾತುವನ್ನು ಬಳಸಿ ನಿರ್ಮಿಸಲಾಗಿದೆ. ಇದು 5 ಅಡಿ ಎತ್ತರ, 4 ಅಡಿ ಅಗಲ ಹೊಂದಿದ್ದು, ಇದರ ಸದ್ದು ಕೆಲವು ಕಿಲೋ ಮೀಟರ್ ದೂರದವರೆಗೂ ಕೇಳಲಿದೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…