Featured

ಕಾಪು ಸುಗ್ಗಿ ಮಾರಿಪೂಜೆ- ಅನ್ಯಮತಿಯರಿಗೆ ವ್ಯಾಪರ ವಹಿವಾಟಿಗೆ ಅವಕಾಶ ನೀಡಬೇಡಿ  ಮನವಿ ಮಾಡಲು ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರ ಜತೆ ವ್ಯವಸ್ಥಾಪನ ಸಮಿತಿ ಗರಂ:vishwanews24

ಕಾಪು ಸುಗ್ಗಿ ಮಾರಿಪೂಜೆ- ಅನ್ಯಮತಿಯರಿಗೆ ವ್ಯಾಪರ ವಹಿವಾಟಿಗೆ ಅವಕಾಶ

ನೀಡಬೇಡಿ  ಮನವಿ

ಮಾಡಲು ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರ ಜತೆ ವ್ಯವಸ್ಥಾಪನ

ಸಮಿತಿ ಗರಂ:vishwanews24

 

ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನದಲ್ಲಿ ಮನವಿ ನೀಡಲು ಅವಕಾಶವಿಲ್ಲವೇ ಎಂದು ಬೇಸರ ವ್ಯಕ್ತಪಡಿಸಿದ ಸಂಘಟನೆ ಕಾರ್ಯಕರ್ತರು

ಕಾಪು: ತುಳುನಾಡಿನ ಇತಿಹಾಸ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕಾಪು ಸುಗ್ಗಿ ಮಾರಿಪೂಜೆಯ ಜಾತ್ರೆಯಲ್ಲಿ ದೇವಸ್ಥಾನದ ವಠಾರದಲ್ಲಿ ಹಿಂದೂಯೇತರರಿಗೆ ವ್ಯಾಪರ ವಹಿವಾಟಿಗೆ ಅವಕಾಶ ನೀಡಬಾರದೆಂದು ಜಿಲ್ಲೆಯ ಹಿಂದೂ ಸಂಘಟನೆಯ ಪ್ರಮುಖರು ಇಂದು ಮನವಿ ನೀಡಲು ಬಂದಾಗ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯ ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತಿನ ಚಕಾಮಕಿ ನಡೆಸಿದ ಘಟನೆ ನಡೆಯಿತು.

ಸಂಘಟನೆಯವರು ಕೇವಲ ಕಾಪುವಿನ ಮಾರಿಪೂಜೆ ಸಮಯಲ್ಲಿ ಮನವಿ ಮಾಡುತ್ತೀರಿ ಉಳಿದ ದೇವಸ್ಥಾನಗಳ ಜಾತ್ರೆಯ ಸಮಯದಲ್ಲಿ ಎಲ್ಲಿ ಹೋಗಿರುತ್ತೀರಿ ನಮ್ಮನ್ನು ಇಲ್ಲಿ ಬೇರೆ ಸಮುದಾಯವರು ಪ್ರಶ್ನೆ ಮಾಡುತ್ತಾರೆ, ಕೋರ್ಟ್ ದೇವಸ್ಥಾನಕ್ಕೆ ನೋಟಿಸ್ ಕೂಡ ಮಾಡಿದೆ ಆವಾಗ ಯಾವ ಸಂಘಟನೆಯೂ ಇಲ್ಲಿ ಬರಲ್ಲ ದೇವಸ್ಥಾನದೊಳಗೆ ಏನು ಮಾಡಬೇಕೆಂದು ನಮಗೆ ಗೊತ್ತಿದೆ ನಾವೂ ಕೂಡ ಹಿಂದುಗಳು ಆರ್ ಎಸ್ ಎಸ್ ನಿಂದ ಬೆಳೆದು ಬಂದವರು ಹಿಂದೂಯೇತರರಿಗೆ ಅವಕಾಶ ಕಳೆದ ವರ್ಷವೂ ನೀಡಿಲ್ಲ ಮತ್ತು ಹಿಂದು ಸಂಘಟನೆಯವರು ಪ್ರತಿವರ್ಷ ಬಂದು ಮನವಿ ಮಾಡುವ ಅಗತ್ಯವಿಲ್ಲ ಎಂದು ಗುಡುಗಿದರು.

ಈ ವಿಚಾರಕ್ಕೆ ಸಂಬAಧಿಸಿದAತೆ ಸಂಘಟನೆಯ ಕಾರ್ಯಕರ್ತರು ಬೇಸರ ವ್ಯಕ್ತ ಪಡಿಸಿ ಸರ್ಕಾರದ ಅಧೀನದ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನದಲ್ಲಿ ಮನವಿ ಮಾಡಲು ಕೂಡ ಅವಕಾಶವಿಲ್ಲವೇ ಬಂದವರನ್ನು ಈ ರೀತಿಯಾಗಿ ಹೀಯಾಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಸಮಾಧಾನ ಹೊರ ಹಾಕಿ ಮನವಿ ಪತ್ರ ಅಧ್ಯಕ್ಷರಿಗೆ ಸಲ್ಲಿಸಿ ಹೊರನಡೆದರು.

 

Vishwa News 24

Recent Posts

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

2 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

2 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

3 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

3 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

3 hours ago

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು  – vishwanews24

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …

4 hours ago