ಉಡುಪಿ : ಕಾಪು ಕೊಪ್ಪಲಂಗಡಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ನೂತನವಾಗಿ ನಿರ್ಮಾಣಗೊಂಡಿರುವ ಸರ್ವಸುಸಜ್ಜಿತ ಹಾಗೂ ಆಧುನಿಕ ಸೌಲಭ್ಯಗಳಿಂದ ಕೂಡಿದ ಭವ್ಯ ಸಭಾಂಗಣ ‘ಇನಾಸನ್ ಆಡಿಟೋರಿಯಂ’ ಸೆ.7 ರಂದು ಬೆಳಗ್ಗೆ 11.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಈ ಸಭಾಂಗಣದ ಮುಖ್ಯ ಹಾಲ್‌ನಲ್ಲಿ 1,500 ಮಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಇನ್ನೂ 1,500 ಮಂದಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಬಾಲ್ಕನಿ ವ್ಯವಸ್ಥೆ ಮಾಡಲಾಗಿದೆ. ಇದು ಈ ಸಭಾಂಗಣದ ವೈಶಿಷ್ಟ್ಯವಾಗಿದೆ. 4,000 ಚದರ ಅಡಿ ವಿಸ್ತೀರ್ಣದ ಭವ್ಯವಾದ ಪ್ರವೇಶ ದ್ವಾರ, ಆತ್ಮೀಯ ಕೂಟಗಳಿಗೆ ಅನುಕೂಲವಾಗುವ ರೀತಿಯ 300 ಮಂದಿಗೆ ಕುಳಿತುಕೊಳ್ಳಲು ಸಾಮರ್ಥ್ಯ ಇರುವ ಮಿನಿ ಹಾಲ್, ಚರ್ಚೆಗಳಿಗೆ ಅನುಕೂಲವಾದ ಕಾನ್ಸರೆನ್ಸ್ ರೂಂಗಳು ಕೂಡ ಇವೆ.
ಒಟ್ಟು 30,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಎರಡು ಭೋಜನ ಭವನಗಳು, ಪೂರ್ಣಸಜ್ಜಿತ ಅಡುಗೆ ಮನೆಗಳು, ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ನಮಾಜ್ ಕೊಠಡಿಗಳು, ಹೈ-ಕ್ಯಾಪಾಸಿಟಿ ಲಿಫ್ಟ್‌ಗಳು ಹಾಗೂ 250 ವಾಹನಗಳಿಗೆ ಅನುಕೂಲವಾಗುವ ಪಾರ್ಕಿಂಗ್ ವ್ಯವಸ್ಥೆಗಳನ್ನು ಈ ಸಭಾಂಗಣ ಒಳಗೊಂಡಿದೆ.
ಈ ಸೌಲಭ್ಯಗಳು ಇಂದಿನ ಅಗತ್ಯಗಳನ್ನು ಮಾತ್ರವಲ್ಲ, ಮುಂದಿನ ತಲೆಮಾರುಗಳಿಗೂ ಸೇವೆ ಮಾಡಲು ನಿರ್ಮಿಸ ಲಾಗಿದೆ. ಮುಂದೆ ಇನ್ನಷ್ಟು ಸೌಲಭ್ಯಗಳನ್ನು – ಮುಕ್ತಾಂಗಣ, ಈಜುಕೊಳ ಮತ್ತು ವಸತಿ ಕೊಠಡಿ ವ್ಯವಸ್ಥೆ ಅಭಿವೃದ್ಧಿ ಪಡಿಸುವ ಯೋಜನೆ ಕೂಡ ಇದೆ ಎಂದು ಇನಾಸನ್ ಆಡಿಟೋರಿಯಂ ಅಧ್ಯಕ್ಷ ಮುಹಮ್ಮದ್ ಸಾದಿಕ್ ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡರಾದ ಅಸ್ಲಂ ಕಾಜಿ, ಅಬ್ದುಲ್ ಜಲೀಲ್, ಮುಸ್ತಫಾ ಅಸಾದಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಎಸ್‌ಡಿಪಿಐ ಅಧ್ಯಕ್ಷ ಆಸಿಫ್ ಕೋಟೇಶ್ವರ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ಶೆಟ್ಟಿ ಭಾಗವಹಿಸಲಿರು ವರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಶುಭ ಹಾರೈಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…