ಕಾಪು: ಉದ್ಯಾವರದ ಪಿತ್ರೋಡಿಯಲ್ಲಿರುವ ಫಿಶ್‌ಮಿಲ್ ಆಯಿಲ್ ಕಂಪನಿಗೆ ಯಂತ್ರೋಪಕರಣಗಳ ಖರೀದಿಗೆ ಸಂಬಂಧಿಸಿ ಸೈಬರ್ ವಂಚಕರು ನಕಲಿ ಇಮೇಲ್ ಕಳುಹಿಸಿ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಶಸ್ವಿ ಫಿಶ್‌ಮಿಲ್‌ನಿಂದ ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಆರಂಭಿಸಿರುವ ಸುರಮಿ ಘಟಕಕ್ಕೆ ಬೇಕಾಗುವ 15,00,000 ಡಾಲರಿನ ಯಂತ್ರೋಪಕರಣಗಳನ್ನು ಹಾಂಗ್‌ಕಾಂಗ್ ಮೂಲದ ವಿತರಿಕನಿಂದ ಖರೀದಿ ಮಾಡುವ ಕುರಿತು 2024ರಲ್ಲಿ ಈ-ಮೇಲ್ ಮುಖಾಂತರ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಡಿ.29ರಂದು ಫಿಶ್‌ಮೀಲ್ ಕಂಪನಿಗೆ ಫೇಕ್ ಈ- ಮೇಲ್ ಐಡಿಯಿಂದ ಸಂದೇಶ ಬಂದಿದ್ದು, ಒಪ್ಪಂದದಂತೆ ಹಣವನ್ನು ಬೇರೆ ಖಾತೆಗೆ ಹಣವನ್ನು ವರ್ಗಾವಣೆ ಮಾಡುವಂತೆ ತಿಳಿಸಲಾಗಿತ್ತು.
ಅದರಂತೆ ಫಿಶ್‌ಮಿಲ್ ಕಂಪೆನಿಯವರು ಜ.23ರಂದು 2,00,000 ಡಾಲರ್ ಹಣವನ್ನು ಆ ಖಾತೆಗೆ ವರ್ಗಾಯಿಸಿದ್ದರು. ಬಳಿಕ ಈ ಬಗ್ಗೆ ಪರಿಶೀಲಿಸಿದಾಗ ಸೈಬರ್ ವಂಚಕರು ಫಿಶ್ ಮಿಲ್ ಕಂಪನಿಯ ಹಾಗೂ ಹಾಂಗ್‌ಕಾಂತ್‌ನ ವಿತರಿಕ ಕಂಪನಿಯ ಈ-ಮೇಲ್ ಐಡಿಗಳನ್ನು ಹ್ಯಾಕ್ ಮಾಡಿ ಫೇಕ್ ಈ-ಮೇಲ್ ಐಡಿ ಮೂಲಕ ಸಂಪರ್ಕ ಸಾಧಿಸಿ 2,00,000 ಡಾಲರ್ ಹಣವನ್ನು ಹಾಕಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…