ಕಾಪು: ಅಧಿಕಾರ ದರ್ಪವಿಲ್ಲದ ಅಪರೂಪದ ರಾಜಕಾರಣಿ ವಿನಯ ಕುಮಾರ್ ಸೊರಕೆ. ಕಾರ್ಯಕರ್ತರಿಗೆ ಅತ್ಯಂತ ಗೌರವ ಕೊಡುವ ಬಡವರ ಪರ ಕಾಳಜಿ ಇರೋ ರಾಜಕಾರಣಿ ಕಾಪು ಕ್ಷೇತ್ರಕ್ಕೆ ಸಿಕ್ಕಿದ್ದಾರೆ ಅದು ನಿಮ್ಮೆಲ್ಲರ ಭಾಗ್ಯ ಅಂತ ಕಾಂಗ್ರೆಸ್ ವಕ್ತಾರ ನಿಖಿತ್ ರಾಜ್ ಮೌರ್ಯ ಹೇಳಿದ್ದಾರೆ.
ಮುದರಂಗಡಿ ಪೇಟೆಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತೆ ಅಂತಾ ಎಲ್ಲಾ ಸಮೀಕ್ಷೆಯಲ್ಲಿ ನಿಜವಾಗಿದೆ. ಕಾಪುವಿನಲ್ಲಿ ವಿನಯಣ್ಣ ಶಾಸಕರಾದರೆ ಮಂತ್ರಿ ಆಗುತ್ತಾರೆ.
ಕಾಪು ಇನ್ನೆಂದು ಕಾಣದ ಭಾರೀ ಅಭಿವೃದ್ಧಿಯಾಗುತ್ತೆ ಅಂತಾ ನಿಖತ್ ರಾಜ್ ಮೌರ್ಯ ಹೇಳಿದ್ದಾರೆ.
ಬಿಜೆಪಿ ಸೋಲಿನ ಹತಾಶೆಯಲ್ಲಿದೆ.ಸೋಲಿನ ಭಯದಲ್ಲಿ ಪ್ರಧಾನಿಯವರನ್ನು ದಾಖಲೆ ಸಂಖ್ಯೆಯಲ್ಲಿ ರಾಜ್ಯಕ್ಕೆ ಕರೆಯಿಸಿ ಪ್ರಚಾರ ಮಾಡಿದ ಕೀರ್ತಿ ಕರ್ನಾಟಕ ಬಿಜೆಪಿಗೆ ಇದೆ ಅಂತಾ ಮೌರ್ಯ ಲೇವಡಿ ಮಾಡಿದರು.
ವಿನಯಣ್ಣ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಇರೋ ರಾಜಕಾರಣಿ. ಯಾವುದೇ ಭ್ರಷ್ಟಚಾರ, ದುರಾಡಳಿತ ಆರೋಪ ವಿನಯಣ್ಣನ ಮೇಲೆ ಇಲ್ಲ. ವಿನಯಣ್ಣನ ಕೈ ಹಿಡಿದು ಈ ಬಾರಿ ಗೆಲ್ಲಿಸುವ ಕರ್ತವ್ಯವನ್ನು ಮತದಾರರು ಮಾಡಬೇಕಿದೆ ಅಂತಾ ನಿಖಿತ್ ರಾಜ್ ಮೌರ್ಯ ಹೇಳಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಲಂಚ ಭ್ರಷ್ಟಾಚಾರದಿಂದಾಗಿ 5000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡ ಜನರನ್ನು ಶಿಕ್ಷಣ ವಂಚಿತರನ್ನಾಗಿಸುತ್ತಿದ್ದಾರೆ ಅಂತಾ ಮೌರ್ಯ ವಿಷಾದ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ , ಕಾಂಗ್ರೆಸ್ ಮುಖಂಡರಾದ ಕ್ರಷ್ಣ ಪೂಜಾರಿ,ಮೈಕಲ್ ಡಿಸೋಜ, ಅಬ್ದುಲ್ ಅಜೀಜ್, ಸೋಮನಾಥ್, ಸುನೀಲ್ ರಾಜ್ ಶೆಟ್ಟಿ, ರೋಹನ್ ,ರಮೀಜ್, ಅಜೀಜ್, ಡೇವಿಡ್ ಡಿಸೋಜ, ಜಿತೇಂದ್ರ ಫುಟಾರ್ಡೊ, ಉಪಸ್ಥಿತರಿದ್ದರು.
ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ ಅಮರಾವತಿ: ಇಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ…
ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ ಕರಾವಳಿ ಭಾಗದಲ್ಲಿ ಕರ್ನಾಟಕ…
ಬಿಟ್ ಕಾಯಿನ್ ಹಗರಣ : ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ ಬೆಂಗಳೂರು: ಬಿಟ್ ಕಾಯಿನ್…
ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳೂರು:ರಾಷ್ಟ್ರೀಯ ಹೆದ್ದಾರಿ-66ರ ವಿಸ್ತರಣೆಯ…
ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಒಬ್ಬ ನಿರಪರಾಧಿ .. ನಾಗೇಂದ್ರ ಅವರ ವಿರುದ್ಧ ಬಿಜೆಪಿ ನಡೆದುಕೊಂಡ ರೀತಿ…
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಚಿನ್ನ-ಬೆಳ್ಳಿಯ ಪ್ರಭಾವಳಿ ಅರ್ಪಿಸಿದ ರಾಜೇಶ್ ಶೆಟ್ಟಿ ದಂಪತಿ ಮಂಗಳೂರು : ಶ್ರೀ ಕ್ಷೇತ್ರ ಕಟೀಲು…