Featured

ಕಾಪು : 21ರ ಹರೆಯದ ಯುವಕನ ಕೇರಳದಿಂದ ಮದೀನಾ ಮತ್ತು ಈಜಿಪ್ಟ್ ಗೆ  ಸೈಕಲ್ ಯಾತ್ರೆ – 200 ದಿನದಲ್ಲಿ ಮದೀನಾ ತಲುಪುವ ಗುರಿ – Vishwanews24

21ರ ಹರೆಯದ ಯುವಕನ ಕೇರಳದಿಂದ ಮದೀನಾ ಮತ್ತು ಈಜಿಪ್ಟ್ ಗೆ  ಸೈಕಲ್ ಯಾತ್ರೆ ..

200 ದಿನದಲ್ಲಿ ಮದೀನಾ ತಲುಪುವ ಗುರಿ..

ಕಾಪು ತಲುಪಿದ ಹಾಫಿಲ್ ಅಹ್ಮದ್ ಸಾಬಿತ್ ಸೈಕಲ್ ಯಾತ್ರೆ..

ಕಾಪು : ಕರಾವಳಿಯಲ್ಲಿ ಹುಟ್ಟಿ, ಕೇರಳದಲ್ಲಿ ಶಿಕ್ಷಣ ಪಡೆದು, ಆಫ್ರಿಕನ್ ರಾಷ್ಟ್ರದಲ್ಲಿ ಉನ್ನತ ಶಿಕ್ಷಣದ ಕಸನು ಹೊತ್ತಿರುವ 21ರ ಹರೆಯದ ಹಾಫಿಲ್ ಅಹ್ಮದ್ ಸಾಬಿತ್ ಕೇರಳದಿಂದ ಮದೀನಾ ಮತ್ತು ಈಜಿಪ್ಟ್ವರೆಗೆ ಕೈಗೊಂಡಿರುವ ಸೈಕಲ್ ಯಾತ್ರೆ ಕಾಪು ತಾಲೂಕನ್ನು ತಲುಪಿದೆ.

ತನ್ನ ಉನ್ನತ ಶಿಕ್ಷಣಕ್ಕಾಗಿ ಈಜಿಪ್ಟ್ ಅಲ್ ಅಝರ್ ಯುನಿವರ್ಸಿಟಿಗೆ ತೆರಳುವ ಉದ್ದೇಶ ಹೊಂದಿರುವ ಹಾಫಿಲ್ ಅಹ್ಮದ್ ಸಾಬಿತ್ ಸೈಕಲ್ ಯಾತ್ರೆಯ ಮೂಲಕ ಮದೀನಾ ಪಟ್ಟಣಕ್ಕೆ ತಲುಪಿ ಪುವಾದಿಯವರ ಪುಣ್ಯ ಸಮಾದಿಯನ್ನು ಸಂದರ್ಶಿಸುವ ಉದ್ದೇಶವನ್ನೂ ಹೊಂದಿದ್ದಾರೆ. ತನ್ನ ಬಹುದಿನದ ಕನಸನ್ನು ನನಸಾಗಿಸಿಕೊಳ್ಳಲು ಅ.19 ರಂದು ಕೇರಳದ ತಿರುವನಂತಪುರಂನಿಂದ ಸೈಕಲ್ ಯಾತ್ರೆಯನ್ನು ಪ್ರಾರಂಭಿಸಿ ಯಾತ್ರೆಯುದ್ಧಕ್ಕೂ ಪ್ರವಾದಿಯವರು ಪುಪಂಚಕ್ಕೆ ಸಾರಿದ ಮಾನವೀಯ ಗುಣಗಳ ಭೋದನೆ, ಆರೋಗ್ಯ ಕಾಪಾಡುವಲ್ಲಿ ಜನರ ಪಾತ್ರ ಇತ್ಯಾದಿ ವಿಚಾರಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಪಯತ್ನಿಸುತ್ತಿದ್ದಾರೆ.

ಮಂಗಳೂರು ಬಾಂಬ್‌ ಸ್ಫೋಟ : ಹೊಣೆ ಹೊತ್ತುಕೊಂಡ ಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌ʼ ಹೆಸರಿನ ಸಂಘಟನೆ..

ಕೇರಳದ ತಿರುವನಂತಪುರದಿಂದ ಆರಂಭಗೊಂಡಿರುವ ಸುಮಾರು 200 ದಿನಗಳ ಸೈಕಲ್ ಯಾತ್ರೆಯು ಜಗತ್ತಿನ 2 ಖಂಡಗಳು, 10 ದೇಶಗಳ ಮೂಲಕ ಸುಮಾರು 15,000 ಕಿ.ಮೀ ಧಾಟಿ ಪವಿತ್ರ ಮದೀನಾಕ್ಕೆ ತಲುಪಿ ಅಲ್ಲಿಂದ ಈಜಿಪ್ಟ್ ನತ್ತ ಸಾಗಲಿದೆ. ಸುಮಾರು 200 ದಿನಗಳ ಸೈಕಲ್ ಯಾತ್ರೆಯ ದಾರಿ ಮಧ್ಯದಲ್ಲಿ ಪವಿತ್ರ ಹಜ್ ಹಾಗೂ ಉಮ್ರಾ ಯಾತ್ರೆಯನ್ನೂ ನಡೆಸುವ ಇರಾದೆ ಅವರದ್ದಾಗಿದೆ.

ಭಾರತದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ತಾನ್, ಹರ್ಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಲಡಾಖ್ ಮಾರ್ಗವಾಗಿ ಪಾಕಿಸ್ತಾನ ತಲುಪಲಿದ್ದು, ಅಲ್ಲಿಂದ ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ, ಯುಎಇ, ಒಮಾನ್, ಜೋರ್ಡನ್, ಇಸ್ರೇಲ್ ಮೂಲಕವಾಗಿ ಈಜಿಪ್ಟ್ ತಲುಪಲಿದೆ. ಈ ಹಿಂದೆ ಕೇರಳದಾದ್ಯಂತ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದ ಅದರಿಂದ ಸ್ಫೂರ್ತಿ ಪಡೆದು ಮದೀನಾ ಮತ್ತು ಈಜಿಪ್ಟ್ಗೆ ತೆರಳಲು ನಿರ್ಧರಿದ್ದೇನೆ. ಇದೊಂದು ಆಧ್ಯಾತ್ಮಿಕ ಯಾತ್ರೆಗೆ ಸೀಮಿತಗೊಳ್ಳದೆ ಶೈಕ್ಷಣಿಕ ಹಾಗೂ ಅಧ್ಯಯನ ಯಾತ್ರೆಯೂ ಆಗಿರಲಿದೆ. ಎನ್ನುತ್ತಾರೆ ಹಾಫಿಲ್ ಅಹ್ಮದ್ ಸಾಬಿತ್.

ಕಾಂತಾರ’ ವಿವಾದಾತ್ಮಕ ಹೇಳಿಕೆ .. ಚೇತನ್ ವಿರುದ್ಧದ ಎಫ್.ಐ.ಆರ್ ರದ್ದತಿಗೆ ನಿರಾಕರಿಸಿದ ಹೈಕೋರ್ಟ್ – Vishwanews24

 

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago