ಕಾಪು : ಕರಾವಳಿಯಲ್ಲಿ ಹುಟ್ಟಿ, ಕೇರಳದಲ್ಲಿ ಶಿಕ್ಷಣ ಪಡೆದು, ಆಫ್ರಿಕನ್ ರಾಷ್ಟ್ರದಲ್ಲಿ ಉನ್ನತ ಶಿಕ್ಷಣದ ಕಸನು ಹೊತ್ತಿರುವ 21ರ ಹರೆಯದ ಹಾಫಿಲ್ ಅಹ್ಮದ್ ಸಾಬಿತ್ ಕೇರಳದಿಂದ ಮದೀನಾ ಮತ್ತು ಈಜಿಪ್ಟ್ವರೆಗೆ ಕೈಗೊಂಡಿರುವ ಸೈಕಲ್ ಯಾತ್ರೆ ಕಾಪು ತಾಲೂಕನ್ನು ತಲುಪಿದೆ.
ತನ್ನ ಉನ್ನತ ಶಿಕ್ಷಣಕ್ಕಾಗಿ ಈಜಿಪ್ಟ್ ಅಲ್ ಅಝರ್ ಯುನಿವರ್ಸಿಟಿಗೆ ತೆರಳುವ ಉದ್ದೇಶ ಹೊಂದಿರುವ ಹಾಫಿಲ್ ಅಹ್ಮದ್ ಸಾಬಿತ್ ಸೈಕಲ್ ಯಾತ್ರೆಯ ಮೂಲಕ ಮದೀನಾ ಪಟ್ಟಣಕ್ಕೆ ತಲುಪಿ ಪುವಾದಿಯವರ ಪುಣ್ಯ ಸಮಾದಿಯನ್ನು ಸಂದರ್ಶಿಸುವ ಉದ್ದೇಶವನ್ನೂ ಹೊಂದಿದ್ದಾರೆ. ತನ್ನ ಬಹುದಿನದ ಕನಸನ್ನು ನನಸಾಗಿಸಿಕೊಳ್ಳಲು ಅ.19 ರಂದು ಕೇರಳದ ತಿರುವನಂತಪುರಂನಿಂದ ಸೈಕಲ್ ಯಾತ್ರೆಯನ್ನು ಪ್ರಾರಂಭಿಸಿ ಯಾತ್ರೆಯುದ್ಧಕ್ಕೂ ಪ್ರವಾದಿಯವರು ಪುಪಂಚಕ್ಕೆ ಸಾರಿದ ಮಾನವೀಯ ಗುಣಗಳ ಭೋದನೆ, ಆರೋಗ್ಯ ಕಾಪಾಡುವಲ್ಲಿ ಜನರ ಪಾತ್ರ ಇತ್ಯಾದಿ ವಿಚಾರಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಪಯತ್ನಿಸುತ್ತಿದ್ದಾರೆ.
ಮಂಗಳೂರು ಬಾಂಬ್ ಸ್ಫೋಟ : ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ʼ ಹೆಸರಿನ ಸಂಘಟನೆ..
ಕೇರಳದ ತಿರುವನಂತಪುರದಿಂದ ಆರಂಭಗೊಂಡಿರುವ ಸುಮಾರು 200 ದಿನಗಳ ಸೈಕಲ್ ಯಾತ್ರೆಯು ಜಗತ್ತಿನ 2 ಖಂಡಗಳು, 10 ದೇಶಗಳ ಮೂಲಕ ಸುಮಾರು 15,000 ಕಿ.ಮೀ ಧಾಟಿ ಪವಿತ್ರ ಮದೀನಾಕ್ಕೆ ತಲುಪಿ ಅಲ್ಲಿಂದ ಈಜಿಪ್ಟ್ ನತ್ತ ಸಾಗಲಿದೆ. ಸುಮಾರು 200 ದಿನಗಳ ಸೈಕಲ್ ಯಾತ್ರೆಯ ದಾರಿ ಮಧ್ಯದಲ್ಲಿ ಪವಿತ್ರ ಹಜ್ ಹಾಗೂ ಉಮ್ರಾ ಯಾತ್ರೆಯನ್ನೂ ನಡೆಸುವ ಇರಾದೆ ಅವರದ್ದಾಗಿದೆ.
ಭಾರತದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ತಾನ್, ಹರ್ಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಲಡಾಖ್ ಮಾರ್ಗವಾಗಿ ಪಾಕಿಸ್ತಾನ ತಲುಪಲಿದ್ದು, ಅಲ್ಲಿಂದ ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ, ಯುಎಇ, ಒಮಾನ್, ಜೋರ್ಡನ್, ಇಸ್ರೇಲ್ ಮೂಲಕವಾಗಿ ಈಜಿಪ್ಟ್ ತಲುಪಲಿದೆ. ಈ ಹಿಂದೆ ಕೇರಳದಾದ್ಯಂತ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದ ಅದರಿಂದ ಸ್ಫೂರ್ತಿ ಪಡೆದು ಮದೀನಾ ಮತ್ತು ಈಜಿಪ್ಟ್ಗೆ ತೆರಳಲು ನಿರ್ಧರಿದ್ದೇನೆ. ಇದೊಂದು ಆಧ್ಯಾತ್ಮಿಕ ಯಾತ್ರೆಗೆ ಸೀಮಿತಗೊಳ್ಳದೆ ಶೈಕ್ಷಣಿಕ ಹಾಗೂ ಅಧ್ಯಯನ ಯಾತ್ರೆಯೂ ಆಗಿರಲಿದೆ. ಎನ್ನುತ್ತಾರೆ ಹಾಫಿಲ್ ಅಹ್ಮದ್ ಸಾಬಿತ್.
ಕಾಂತಾರ’ ವಿವಾದಾತ್ಮಕ ಹೇಳಿಕೆ .. ಚೇತನ್ ವಿರುದ್ಧದ ಎಫ್.ಐ.ಆರ್ ರದ್ದತಿಗೆ ನಿರಾಕರಿಸಿದ ಹೈಕೋರ್ಟ್ – Vishwanews24
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…