Featured

ಕಾರವಾರ: ಚಮನ್ ಮೀನು ವಿಷಕಾರಿ ಅನಿಲ ದುರಂತಕ್ಕೆ ಐವರು ಮೀನುಗಾರರು ಬಲಿ;  ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ – vishwanews24

ಕಾರವಾರ: ಚಮನ್ ಮೀನು ವಿಷಕಾರಿ ಅನಿಲ ದುರಂತಕ್ಕೆ ಐವರು ಮೀನುಗಾರರು ಬಲಿ;  ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಚಮನ್ ಮೀನಿನಿಂದ ಬಿಡುಗಡೆಯಾದ ವಿಷಕಾರಿ ಅನಿಲ ಸೇವಿಸಿ ಐವರು ಮೀನುಗಾರರು ಮೃತಪಟ್ಟ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಇಂತಹ ದುರ್ಘಟನೆಗಳು ಮತ್ತೆ ಸಂಭವಿಸದಂತೆ ಜಿಲ್ಲೆಯ ವಿವಿಧ ಮೀನುಗಾರಿಕಾ ಬಂದರುಗಳಲ್ಲಿ ವಿಶೇಷ ಜಾಗೃತಿ ಸಭೆಗಳನ್ನು ನಡೆಸಲಾಗಿದೆ. ಮೀನುಗಾರರ ಜೀವ ರಕ್ಷಣೆಗೆ ಮೀನುಗಾರಿಕೆ ಇಲಾಖೆ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಬೋಟ್ ಮಾಲೀಕರು ಮತ್ತು ಮೀನುಗಾರರು ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ವಾರಗಳ ಹಿಂದೆ ಚಮನ್ ಮೀನಿನಿಂದ ಬಿಡುಗಡೆಯಾದ ವಿಷಕಾರಿ ಅನಿಲಕ್ಕೆ ಐವರು ಮೀನುಗಾರರು ಪ್ರಾಣ ಕಳೆದುಕೊಂಡಿದ್ದರು. ಅಕ್ಟೋಬರ್ 27ರಂದು ಗೋಕರ್ಣದ ತದಡಿ ಬಂದರಿನಲ್ಲಿ ಮೂವರು ಮೀನುಗಾರರು ಮೃತಪಟ್ಟಿದ್ದರೆ, ಅಕ್ಟೋಬರ್ 31ರಂದು ಕಾರವಾರದ ಮುದುಗದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದರು. ಬೋಟ್‌ಗಳಲ್ಲಿ ಮೀನುಗಳನ್ನು ಸಂಗ್ರಹಿಸಿಟ್ಟಿದ್ದ ಸ್ಟೋರೇಜ್‌ನಿಂದ ಅವುಗಳನ್ನು ಹೊರತೆಗೆಯುವ ಸಂದರ್ಭದಲ್ಲಿ ಬಿಡುಗಡೆಯಾದ ವಿಷಕಾರಿ ಅನಿಲ ಸೇವನೆಯೇ ಈ ದುರಂತಗಳಿಗೆ ಕಾರಣವಾಗಿತ್ತು.

ಚಮನ್ ಮೀನು ಕೊಳೆತಾಗ ಅಮೋನಿಯಾ ಮತ್ತು ಹೈಡ್ರೋಜನ್ ಸಲ್ಫೈಡ್‌ನಂತಹ ಅಪಾಯಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಮುಚ್ಚಿದ ಟ್ಯಾಂಕ್‌ಗಳಲ್ಲಿ ಈ ಅನಿಲಗಳು ಸಂಗ್ರಹವಾಗುವುದರಿಂದ ಆಮ್ಲಜನಕದ ಕೊರತೆ ಉಂಟಾಗಿ ಉಸಿರುಗಟ್ಟಿ ಪ್ರಾಣಾಪಾಯ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ಕಾರವಾರ, ಕುಮಟಾ, ಬೈತಖೋಲ್, ಹೊನ್ನಾವರ ಸೇರಿದಂತೆ ಜಿಲ್ಲೆಯ ವಿವಿಧ ಬಂದರುಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗಿದೆ.

ಮೀನುಗಾರರು ಚಮನ್ ಮೀನು ಹಿಡಿದ ತಕ್ಷಣ ಸೂಕ್ತ ರೀತಿಯಲ್ಲಿ ಶೀತಲೀಕರಣ ಮಾಡಬೇಕು. ಮೀನುಗಳನ್ನು ಶೀಘ್ರವಾಗಿ ಬಂದರಿಗೆ ಸಾಗಿಸಬೇಕು. ಕೊಳೆತ ಮೀನು ಅಥವಾ ತ್ಯಾಜ್ಯವನ್ನು ಬೋಟ್‌ಗಳಲ್ಲಿ ಸಂಗ್ರಹಿಸಿಡಬಾರದು. ಯಾವುದೇ ಕಾರಣಕ್ಕೂ ಮೀನು ಸಂಗ್ರಹಣಾ ಟ್ಯಾಂಕ್‌ಗಳ ಒಳಗೆ ನೇರವಾಗಿ ಇಳಿಯಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಟ್ಯಾಂಕ್‌ಗಳ ಒಳಗೆ ಪ್ರವೇಶಿಸುವ ಮೊದಲು ಗ್ಯಾಸ್ ಡಿಟೆಕ್ಟರ್ ಮೂಲಕ ವಿಷಕಾರಿ ಅನಿಲಗಳ ಇರುವಿಕೆಯನ್ನು ಪರೀಕ್ಷಿಸಬೇಕು. ಸೂಕ್ತ ಗಾಳಿಯ ಸಂಚಾರ ವ್ಯವಸ್ಥೆ ಖಚಿತಪಡಿಸಿಕೊಳ್ಳಬೇಕು. ವಾಸನೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಸ್ಥಳ ಸುರಕ್ಷಿತವಾಗಿದೆ ಎಂದು ಭಾವಿಸಬಾರದು. ಉಸಿರಾಟದ ಸುರಕ್ಷತಾ ಸಾಧನಗಳಿಲ್ಲದೆ ಯಾರೂ ಒಳಗೆ ಪ್ರವೇಶಿಸಬಾರದು ಎಂದು ಸೂಚಿಸಲಾಗಿದೆ.

Vishwa News 24

Recent Posts

ಮಣಿಪಾಲ ವೇಶ್ಯಾವಾಟಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ಬಂಧನ – vishwanews24

ಮಣಿಪಾಲ ವೇಶ್ಯಾವಾಟಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ಬಂಧನ ಮಣಿಪಾಲ: ವೇಶ್ಯಾವಾಟಿಕೆ ನಡೆಸಲು ಪಶ್ಚಿಮ ಬಂಗಾಳದಿಂದ ಮಹಿಳೆಯರನ್ನು…

7 minutes ago

ಮಂಗಳೂರು: ಮಂತ್ರದೇವತೆ ಸನ್ನಿಧಿ ಶ್ರೀ  ಕ್ಷೇತ್ರ ಮಂದಾರಬೈಲು ನ.14ರಂದು ದೀಪಾಲಂಕಾರ ಸೇವೆ : Vishwanews24

ಮಂಗಳೂರು: ಮಂತ್ರದೇವತೆ ಸನ್ನಿಧಿ ಶ್ರೀ  ಕ್ಷೇತ್ರ ಮಂದಾರಬೈಲು ನ.14ರಂದು ದೀಪಾಲಂಕಾರ ಸೇವೆ  ಮಂಗಳೂರು: ಕೊಂಚಾಡಿ ದೇರೆಬೈಲ್‌ನ ಶ್ರೀ ಕ್ಷೇತ್ರ ಮಂದಾರಬೈಲು…

34 minutes ago

ಮಂಗಳೂರು: ಕೊಂಕಣ ರೈಲ್ವೆ ವಿಲೀನಕ್ಕೆ ನಾಲ್ಕು ರಾಜ್ಯಗಳ ಒಪ್ಪಿಗೆ ಅಗತ್ಯ : ಸಚಿವ ಅಶ್ವಿನಿ ವೈಷ್ಣವ್ – vishwanews24

ಮಂಗಳೂರು: ಕೊಂಕಣ ರೈಲ್ವೆ ವಿಲೀನಕ್ಕೆ ನಾಲ್ಕು ರಾಜ್ಯಗಳ ಒಪ್ಪಿಗೆ ಅಗತ್ಯ : ಸಚಿವ ಅಶ್ವಿನಿ ವೈಷ್ಣವ್ ಮಂಗಳೂರು: ಕೊಂಕಣ ರೈಲ್ವೆ…

1 hour ago

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ; ರಾಜ್ಯಾದ್ಯಂತ ಟ್ರೇಸಬಿಲಿಟಿ ಆ್ಯಪ್ ಜಾರಿ : ಸಚಿವ ಯು.ಟಿ. ಖಾದರ್ – vishwanews24

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ; ರಾಜ್ಯಾದ್ಯಂತ ಟ್ರೇಸಬಿಲಿಟಿ ಆ್ಯಪ್ ಜಾರಿ : ಸಚಿವ ಯು.ಟಿ.ಖಾದರ್ ಬೆಂಗಳೂರು : ಹೋಟೆಲ್, ರೆಸ್ಟೋರೆಂಟ್…

1 hour ago

ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ​​ಬಳಿ ಮಾನವನ ತಲೆಬುರುಡೆ ಪತ್ತೆ! vishwanews24

ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ​​ಬಳಿ ಮಾನವನ ತಲೆಬುರುಡೆ ಪತ್ತೆ! ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ…

1 hour ago

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ: ಸಿಎಂ ಡಿಕೆಶಿ ಸ್ವಾಗತ – vishwanews24

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ: ಸಿಎಂ ಡಿಕೆಶಿ ಸ್ವಾಗತ ಬೆಂಗಳೂರು: ಒಂದು ದಿನದ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ…

2 hours ago