Featured

ಕಾರಿಂಜೇಶ್ವರ ಸನ್ನಿಧಿಯ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಿಷೇಧ : ಸರಕಾರ ಅದೇಶ – Vishwanews24

ಹಿಂದೂ ಜಾಗರಣಾ ವೇದಿಕೆಯ ಹೋರಾಟಕ್ಕೆ ಜಯ

ಕಾರಿಂಜೇಶ್ವರ ಸನ್ನಿಧಿಯಲ್ಲಿ ಅಕ್ರಮ ಗಣಿಗಾರಿಕೆ ನಿಷೇಧ – ಸರಕಾರ ಅದೇಶ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಾರಿಂಜೇಶ್ವರ ಸನ್ನಿಧಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ನಿಷೇಧ ಮಾಡಿ ಸರಕಾರ ಅದೇಶ ಹೊರಡಿಸಿದೆ.

ಈ ಮೂಲಕ ಹಿಂದೂ ಜಾಗರಣಾ ವೇದಿಕೆಯ ಹೋರಾಟಕ್ಕೆ ಜಯ ಸಿಕ್ಕಿದೆ.

ಕಾರಿಂಜ ದೇವಾಲಯದ ಸುತ್ತಮುತ್ತ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದರಿಂದ ದೇವಸ್ಥಾನಕ್ಕೆ ಹಾನಿಯಾಗುತ್ತಿದೆ ಎಂಬುದು ಅರೋಪವಾಗಿದ್ದು, ಇದರ ವಿರುದ್ಧ ಪ್ರತಿಭಟನೆಗಳು ಹೋರಾಟಗಳು ನಿರಂತರವಾಗಿ ನಡೆದಿತ್ತು.

 

ಅದರೆ ಇದೀಗ ಸರಕಾರ ಗಣಿಗಾರಿಕೆಗೆ ನಿಷೇಧದ ಅದೇಶ ಮಾಡಿದೆ.

ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 8(3) ರಲ್ಲಿ ಪ್ರದವಾಗಿರುವ ಅಧಿಕಾರವನ್ನು ಚಲಾಯಿಸಿ ಸರ್ಕಾರವು ದಕ್ಷಿಣ ಕನ್ನಡ ಜಿಲೆ, ಬಂಟ್ವಾಳ ತಾಲೂಕು, ಕಾವಳಮುರು ಗ್ರಾಮದ ವ್ಯಾಪ್ತಿಯ ಶ್ರೀ ಕಾರಿಂಜೇಶ್ವರ ದೇವಸ್ಥಾನದ 02 ಕಿಲೋ ಮೀಟರ್ ಸುತ್ತಳತೆಯ ಪ್ರದೇಶವನ್ನು ಧಾರ್ಮಿಕ ಚಟುವಟಿಕೆಗಳ ಉದ್ದೇಶಕ್ಕಾಗಿ ಕಾಯಿರಿಸಿ, ಸದರಿ ಸ್ಥಳದ 02 ಕಿಲೋ ಮೀಟರ್ ಸುತ್ತಳತೆ ವ್ಯಾಪ್ತಿಯಲ್ಲಿ, ಎಲ್ಲಾ ರೀತಿಯ ಗಣಿಗಾರಿಕ ಮತ್ತು ಕಲ್ಲುಪುಡಿ (ಕುವ‌ ಚಟುವಟಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತ ಹಾಗೂ ಮುಂದಿನ ಆದೇಶದವರೆಗೆ ನಿಷೇಧಿಸಿದೆ. ಎಂಬ ಅದೇಶ ಹೊರಡಿಸಿದೆ.

ಅಕ್ರಮ ಗಣಿಗಾರಿಕೆಯ ವಿರುದ್ದ ಹಿಂದೂ ಜಾಗರಣ ವೇದಿಕೆ ವತಿಯಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿತ್ತು.

ಗಣಿಗಾರಿಕೆ ಯನ್ನು ನಿಲ್ಲಿಸಲು ಪ್ರತಿಭಟನೆ , ಸಹಿತ ಅನೇಕಹೋರಾಟಗಳು ನಡೆದ ಪರಿಣಾಮ ಹಾಗೂ ಇವರ ಹೋರಾಟದ ಜೊತೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ನೀಡಿದ ಬೆಂಬಲದಿಂದ ಗಣಿಗಾರಿಕೆ ಬಂದ್ ಆಗಿದೆ.

ಈ ಬಗ್ಗೆ ಹಿಂದೂ ಜಾಗರಣಾ ವೇದಿಕೆಯವರ ಹೋರಾಟದ ಬಗ್ಗೆ ಶಾಸಕರು ಮುಖ್ಯಮಂತ್ರಿ ಅವರಿಗೆ ಗಣಿಗಾರಿಕೆಯನ್ನು ನಿಲ್ಲಿಸುವ ಅದೇಶ ಮಾಡುವಂತೆ ಮನವಿ ಮಾಡಿದ್ದರು.

ಇದೀಗ ಸರಕಾರದ ಅದೇಶ ಹೊರಡಿಸಿದ್ದು, ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

Vishwa News 24

Recent Posts

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ -vishwanews24

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…

12 hours ago

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

17 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

18 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

19 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

19 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

19 hours ago