ಕಳೆದ ೫ ವರ್ಷಗಳಲ್ಲಿ ಮಕಾಡೆ ಮಲಗಿದ್ದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿಯವರಿಗೆ ವಿಧಾನಸಭಾ ಟಿಕೆಟ್ ನೀಡದೆ ವಿರಪ್ಪ ಮೊಯ್ಲಿ ದ್ರೋಹವೆಸಗಿದ್ದಾರೆ.ಇದು ಕಾರ್ಕಳದಲ್ಲಿ ಕಾಂಗ್ರೆಸನ್ನು ಮುಗಿಸುವ ಷಡ್ಯಂತ್ರ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ರು.
ಭಂಡಾರಿ ಸೋಲಿಸಿ, ಹರ್ಷನಿಗೆ ಟಿಕೆಟ್ ಪ್ಲಾನ್
ಒಂದು ವೇಳೆ ಈ ಸಲ ಉದಯ್ ಶೆಟ್ಟಿಗೆ ಟಿಕೆಟ್ ನೀಡಿದರೇ ಕಾರ್ಕಳದಲ್ಲಿ ಜಯಗಳಿಸುವುದರಲ್ಲಿ ಅನುಮಾನವಿಲ್ಲ ಮತ್ತು ಸತತವಾಗಿ ೩ ಅವಧಿ ಮುನಿಯಾಲ್ ತನ್ನ ಅಧಿಕಾರ ವಿಸ್ತರಿಸುತ್ತಾರೆಂಬ ವಿಚಾರ ಮೊಯ್ಲಿಗೆ ತಿಳಿದಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ತನ್ನ ಪುತ್ರನಿಗೆ ಕಾರ್ಕಳ ಕಾಂಗ್ರೆಸ್ ನಿಂದ ಟಿಕೆಟ್ ನೀಡಲು ಸಾಧ್ಯವಿಲ್ಲ ಅದರ ಬದಲು ಈ ಭಾರಿ ಭಂಡಾರಿಗೆ ಟಿಕೆಟ್ ನೀಡಿ ಸೋಲಿಸಿ ಮೂಲೆಗುಂಪು ಮಾಡಿದ್ದೆ ಆದಲ್ಲಿ ಮುಂದಿನ ಚುನಾವಣೆಯಲ್ಲಿ ಸುಲಭವಾಗಿ ಮಗನಿಗೆ ಟಿಕೆಟ್ ಕೊಡಿಸಬಹುದೆಂಬ ದೂರಲೋಚನೆಯು ಇರ ಬಹುದು ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಸುನೀಲ್ ಕುಮಾರ್ ಗೆ ಸರಿಸಾಟಿ ಮುನಿಯಾಲ್
ಹೌದು ಕಾರ್ಕಳದಲ್ಲಿ ಸತತವಾಗಿ ಗೆಲ್ಲುತ್ತಿರುವ ಸುನಿಲ್ ಕುಮಾರ್ ಎಂಬ ನಾಗಲೋಟದ ಕುದುರೆಗೆ ಲಗಾಮು ಹಾಕಬೇಕಾದರೆ ಮುನಿಯಾಲು ಉದಯ್ ಶೆಟ್ಟಿಯಿಂದ ಮಾತ್ರ ಸಾಧ್ಯವೆಂಬ ಅಭಿಪ್ರಾಯ ಕಾರ್ಕಳದಿಂದ ವ್ಯಕ್ತವಾಗುತ್ತಿದೆ, ಯುವ ಸಮುದಾಯ ಮತ್ತು ಮಹಿಳೆಯರು ಮುನಿಯಾಲ್ ಉದಯ್ ಶೆಟ್ಟಿ ಬೆನ್ನಹಿಂದೆ ನಿಂತಿರುವುದು ವರದಾನವಾಗಿ ಪರಿಣಮಿಸಿದೆ. ಕಾರ್ಕಳದ ಹಳ್ಳಿ ಗಲ್ಲಿಗಳಲ್ಲಿಯೂ ಉದಯ್ ಶೆಟ್ಟಿ ಹೆಸರು ಪಾದರಸದಂತೆ ಚಲಿಸುತ್ತಿರುವುದು ಸುನೀಲ್ ಕುಮಾರ್ ನಿಗೂ ನುಂಗಲಾರದ ತುತ್ತಾಗಿ ಪರಿಣಮಿಸುತ್ತು. ಆದರೇ ಮೊಯ್ಲಿಯ ಕೃಪಕಟಾಕ್ಷದಿಂದ ಸುನಿಲ್ ಕುಮಾರ್ ಗೆ ಈ ಭಾರಿ ಗಲುವು ಹಲ್ವಾ ತಿಂದಷ್ಟು ಸುಲಭವಾಗಿದೆ.
ಒಟ್ಟಾರೆಯಾಗಿ ಕಾರ್ಕಳದಲ್ಲಿ ರಾಜಕೀಯ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಯಿದೆ.ಇಲ್ಲಿಯ ಇಡೀ ರಾಜಕೀಯ ಚಿತ್ರಣ ಮುನಿಯಾಲ್ ಉದಯ್ ಶೆಟ್ಟಿಯ ನಿರ್ಧಾರದ ಮೇಲೆ ನಿಂತಿರುವುದಂತು ಸತ್ಯ.
ಉಡುಪಿ: ಸೆ. 8 ರಂದು ಕ್ರೈಸ್ತರ ಮೊಂತಿ ಫೆಸ್ತ್ ಗೆ ಸರ್ಕಾರಿ ರಜೆ ನೀಡುವಂತೆ ಸಿಎಂ ಗೆ ಕಥೊಲಿಕ್ ಸಭಾ…
ಭಾರತ್ ಜೋಡೋ ಯುವ ಸಂಘಕ್ಕೆ ನೋಂದಣಿ ಮಂಗಳೂರು,: ಯುವಜನರಲ್ಲಿ ಕ್ರೀಡೆ, ಸಂಸ್ಕøತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು…
ಉಡುಪಿ: ಬಹು ಸಂಖ್ಯಾತ ಹಿಂದೂಗಳಿಗೆ ಈ ಸರ್ಕಾರದಲ್ಲಿ ರಕ್ಷಣೆಯೇ ಇಲ್ಲ : ಯಶ್ಪಾಲ್ ಸುವರ್ಣ ಆಕ್ರೋಶ ಉಡುಪಿ: ರಾಜ್ಯ ಕಾಂಗ್ರೆಸ್…
ನೇಪಾಳ ಪ್ರವಾಹ : ಮಾನಸ ಸರೋವರ ಯಾತ್ರೆಗೆ ತೆರಳಿದ್ದ ನಾಲ್ವರು ಕನ್ನಡಿಗರು ನಾಪತ್ತೆ ; ಕಲಬುರಗಿಯ ಇಬ್ಬರು ಸುರಕ್ಷಿತ ಬೆಂಗಳೂರು: ನೇಪಾಳ-ಟಿಬೆಟ್…
ಸುಳ್ಯ: ನಿಲ್ಲಿಸಿದ್ದ ಟಿಟಿ ವಾಹನದ ಮೇಲೆ ಲಾರಿ ಪಲ್ಟಿ ; ಮೂವರಿಗೆ ಗಂಭೀರ ಗಾಯ ಸುಳ್ಯ :ಅರಂತೋಡಿನ ದೇವರಕೊಲ್ಲಿ ಬಳಿ…
ಬೆಳ್ತಂಗಡಿ: ಸೌಜನ್ಯಾ ಮನೆಗೆ ಡಾ| ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳದ ಸೌಜನ್ಯಾ ಮನೆಗೆ ಆರ್‌ಸ್ಎಸ್…