ಉಡುಪಿ

ಕಾರ್ಕಳದಲ್ಲಿ ಮುನಿಯಾಲು ಬಂಡಾಯ ಅಭ್ಯರ್ಥಿಯಾದರೇ ಭಂಡಾರಿಗೆ ಸೋಲು ಕಟ್ಟಿಟ್ಟ ಬುತ್ತಿ..!

ಕಾರ್ಕಳ: ಹೌದು ಕಾರ್ಕಳದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಕಾಂಗ್ರೇಸ್ ಟಿಕೆಟ್ ಕಡೆಗೂ ಮಾಜಿ ಶಾಸಕ ಗೋಪಾಲ ಭಂಢಾರಿ ಮುಡಿಗೇರಿದೆ. ಆದರೆ ಈ ಸಲದ ಮಟ್ಟಿಗೆ ಮಾತ್ರ ಈಡೀ ಯುವ ಸಮಾಜ ಗೋಪಾಲ ಭಂಡಾರಿ ಬದಲು ಉದಯ್ ಶೆಟ್ಟಿ ಬೆನ್ನ ಹಿಂದೆ ನಿಂತಿದೆ. ಕಾರ್ಕಳ ಕಾಂಗ್ರೇಸ್‍ನಲ್ಲಿ ತಲ್ಲಣಮೂಡಿಸಿದ್ದ ಉದಯ್ ಶೆಟ್ಟಿ ಗೆ ಟಿಕೆಟ್ ಸಿಗುವುದು ಖಚಿತವೆನ್ನುವಷ್ಟು ಕಾರ್ಯಕರ್ತರು ಹುಮ್ಮಸಿನಲ್ಲಿದರು ಅದರೆ ಶೆಟ್ರಿಗೆ ಟಿಕೆಟ್ ಮಿಸ್ ಆಗಿರುವುದು ಬೆಂಬಲಿಗರ ಅಸವiಧಾನಕ್ಕೆ ಕಾರಣವಾಗಿದೆ.
ಗೋಪಾಲ ಭಂಡಾರಿ ಕಳೆದೆರಡು ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದರೂ ಕೂಡ ಮತ್ತೆ ಈ ಸಲದ ಟಿಕೆಟ್ ಗೋಪಾಲರಿಗೆ ನೀಡಿರುವುದು ಕಾಂಗ್ರೇಸ್ ತನ್ನ ಸೋಲನ್ನ ತಾನೇ ಒಪ್ಪಿಕೊಂಡಂತೆ ಎಂಬ ಮಾತು ಕೇಳಿ ಬರುತ್ತಿದೆ.


ಮುನಿಯಾಲ್ ಹವಾ
ಹೌದು ಮೂರು ನಾಲ್ಕು ವರ್ಷದಿಂದ ಕ್ಷೇತ್ರದಾದ್ಯಂತ ಸಂಚರಿಸಿ ಪ್ರತಿಯೊಂದು ಮನೆ ಮನೆಯಲ್ಲೂ ಉದಯ್ ಶೆಟ್ಟಿ ಹೆಸರನ್ನ ಅಚ್ಚು ಹಾಕಿ ಬಂದವರು, ಯುವ ಸಮುದಾಯವಂತೂ ಉದಯ್ ಶೆಟ್ಟಿಯ ಬೆನ್ನೆಲುಬಾಗಿ ಸಹಕರಿಸುತ್ತಿದ್ದು ಮಾತ್ರವಲ್ಲದೆ, ಮನೆಮನೆ ಕಾಂಗ್ರೇಸ್ ಅಭಿಯಾನದಲ್ಲಿ ಮುಂಚೂನಿಯಲ್ಲಿ ಕಾರ್ಯ ನಿರ್ವಹಿಸಿದ ಶೆಟ್ಟಿ ಅಶಕ್ತರ, ಧೀನ ದಲಿತರ,ಬಡವರ ಪರ ತೋರುತ್ತಿದ್ದ ಕಾಳಜಿ ಶಾಲಾ ಮಕ್ಕಳಿಗೆ ಸಹಾಯಧನ ವಿತರಣೆ, ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ಸಹಕರಿಸುತ್ತಿದ್ದುದು ಜನ ಮೆಚ್ಚುವಂತಿತ್ತು.

 

ಶೆಟ್ರು ಬಂಡಾಯ ಅಭ್ಯರ್ಥಿಯಾದರೇ, ಭಂಡಾರಿ ಸೋಲು
ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ 24 ರ ಒಳಗಡೆ ಟಿಕೆಟ್ ಗೊಂದಲ ಸರಿ ಮಾಡದೆ ಹೋದಲ್ಲಿ, ಬಲಿಷ್ಟ ಯುವ ಪಡೆಯನ್ನ ಹೊಂದಿರುವ ಮತ್ತು ಆರ್ಥಿಕ-ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಉದಯ್ ಶೆಟ್ಟಿ ಬೆಂಬಲಿಗರ ಒತ್ತಾಯಕ್ಕೆ ಮಣಿದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಕಾರ್ಕಳದಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ ಉದಯ್ ಮತ್ತು ಸುನಿಲ್ ಕುಮಾರ್ ಎದುರಿಗೆ ಡೆಪಾಸಿಟ್ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂಬ ಮಾತು ಕೂಡ ಕಾರ್ಕಳ ವಲಯದಿಂದ ಕೇಳಿಬರುತ್ತಿದೆ.

 

ಸುನೀಲ್ ಎದುರಿಸಲು ಉದಯ್ ಶೆಟ್ಟಿ ಫಿಟ್
ಹೌದು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸುನೀಲ್ ಕುಮಾರ್ ಪ್ರಸ್ತುತ ಶಾಸಕರಾಗಿರುವುದರಿಂದ ಅವರ ಹವಾ ಜೋರಾಗಿಯೇ ಇದೆ , ಆದರೇ ಸುನಿಲ್ ಕುಮಾರನನ್ನು ಎದುರಿಸಲು ಸರಿಯಾದ ಅಭ್ಯರ್ಥಿ ಉದಯ್ ಶೆಟ್ಟಿ ಎಂಬ ಮಾತು ಹೊರವಲಯದಿಂದ ಕೇಳಿಬರುತ್ತಿದೆ.
ಬಿಜೆಪಿ ಅಭ್ಯರ್ಥಿ ಸುನಿಲ್‍ಗೆ ಇರುವಷ್ಟೇ ಬೆಂಬಲಿಗರು ಕಾರ್ಕಳದಲ್ಲಿ ಉದಯ್ ಶೆಟ್ಟಿ ಬೆನ್ನ ಹಿಂದೆ ಇರುವುದು ಇವರಿಗೆ ವರದಾನವಾಗಿದೆ.

Vishwa News 24

Recent Posts

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ – vishwanews24

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…

13 hours ago

ಕಾರವಾರ – ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ – vishwanews24

ಕಾರವಾರ - ಮಡಗಾಂವ್  ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…

13 hours ago

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ: ರಾಜಣ್ಣ ಖಡಕ್ ಹೇಳಿಕೆ – vishwanews24

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…

14 hours ago

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ – vishwanews24

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ…

16 hours ago

ಉಡುಪಿ : ಯುವಕ ನಾಪತ್ತೆ – vishwanews24

ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…

16 hours ago

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ – vishwanews24

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…

16 hours ago