Featured

ಕಾರ್ಕಳದಲ್ಲೊಂದು ಬಲು ಅಪರೂಪದ ಮದುವೆ ‌- ಸಪ್ತಪದಿ ತುಳಿದ ವಿಶೇಷ ಜೋಡಿ – Vishwanews24

ಬಲು ಅಪರೂಪದ ಮದುವೆಗೆ ಸಾಕ್ಷಿಯಾದ ಕಾರ್ಕಳ ‌- ಸಪ್ತಪದಿ ತುಳಿದ ವಿಶೇಷ ಜೋಡಿ

ಇದು ಬಾಲ್ಯ ವಿವಾಹವಲ್ಲ, ಬದಲಿಗೆ ಇದೊಂದು ಅಪರೂಪದ ಮದುವೆ..

ಉಡುಪಿ:ವಿವಾಹ ಅನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಅನ್ನೋದು ಹಿರಿಯರ ವಾಡಿಕೆಯಾಗಿದೆ. ಜೋಡಿ ಸರಿಯಾಗಿದ್ದರೆ ಜೀವನವೇ ಸ್ವರ್ಗವಾಗುತ್ತದೆ. ಅಂತಹ ಅಪರೂಪದ ಜೋಡಿ ಜೋಡಿಯ ವಿವಾಹ ನೆರವೇರಿದೆ.

ಉಡುಪಿಯ ಕಾರ್ಕಳ ತಾಲೂಕಿನ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಈ ಅಪರೂಪದ ಜೋಡಿಯ ವಿವಾಹ ನಡೆದಿದೆ. ಈ ಮದುವೆಯಲ್ಲಿ ವರನ ಎತ್ತರ ಕೇವಲ 4 ಅಡಿ, ವಧುವಿನ ಎತ್ತರ ಕೂಡಾ ಹೆಚ್ಚುಕಡಿಮೆ ಅಷ್ಟೇ. ಆದರೆ ಇದು ಬಾಲ್ಯ ವಿವಾಹವಲ್ಲ, ಬದಲಿಗೆ ಇದೊಂದು ಅಪರೂಪದ ಮದುವೆ.

ಈ ಮುದ್ದಾದ ಜೋಡಿಯ ವರನ ಹೆಸರು ಹರ್ಷಿತ್‌ ಕುಮಾರ್, ಈತ ಮಾಣಿಯ ಸಿಂಧ್ಯಾ ಚಂದ್ರೋಜಿ ರಾವ್ ಅವರ ಪುತ್ರನಾಗಿದ್ದಾನೆ ಹಾಗೂ ವಧುವಿನ ಹೆಸರು ಶ್ರೀಕೃತಿ, ಈಕೆ ಹಿರಿಯಡ್ಕ ಓಂತಿಬೆಟ್ಟು ದಿ.ಶ್ರೀನಿವಾಸ್ ನಾಯ್ಕ ಅವರ ಪುತ್ರಿಯಾಗಿದ್ದಾಳೆ. ಹಿರಿಯರೇ ನಿಶ್ಚಯಿಸಿ ನಡೆಸಿದ ವಿವಾಹ ಇದಾಗಿದ್ದು, ಮದುವೆ ಮನೆಯಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಎರಡೂ ಕಡೆಯ ಸಂಬಂಧಿಕರು ವಿವಾಹ ಮಂಟಪದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಎಲ್ಲರಿಗೂ ವಿಶೇಷ ಆಕರ್ಷಣೆಯಾಗಿ ಕಂಡ ಈ ವಧು-ವರರನ್ನು ನೆಂಟರಿಷ್ಟರು, ಮನದುಂಬಿ ಹರಸಿ ಹಾರೈಸಿದರು.

ಈ ಮದುವೆಯ ವಿಶೇಷ ಅಂದರೆ, ಕುಳ್ಳ ದೇಹದ ಜೋಡಿಯೊಂದು ಸತಿಪತಿಗಳಾಗಿ ವೈವಾಹಿಕ ಜೀವನವನ್ನು ಆರಂಭಿಸಿದ್ದು. ವರ ಹರ್ಷಿತ್ ಖಾಸಗಿ ಉದ್ಯೋಗಿಯಾಗಿದ್ದನು ಹಾಗೂ ವಧು ಶ್ರೀಕೃತಿ ಕೂಡ ಇಷ್ಟು ದಿನ ಖಾಸಗಿ ಉದ್ಯೋಗಿಯಾಗಿದ್ದು, ಇತ್ತೀಚಿಗಷ್ಟೇ ಕೆಲಸ ಬಿಟ್ಟಿದ್ದಾಳೆ. ಈಕೆ ಡ್ಯಾನ್ಸ್‌ ಕೊರಿಯೋಗ್ರಫಿ ಅನುಭವ ಕೂಡ ಹೊಂದಿದ್ದು ಅತ್ಯಂತ ಪ್ರತಿಭಾನ್ವಿತೆಯಾಗಿದ್ದಾರೆ.

ಕುಳ್ಳರಾಗಿದ್ದರಿಂದ ಈ ಇಬ್ಬರಿಗೂ ಬಂದ ಸಂಬಂಧ ಯಾವುದು ಕೂಡಿ ಬರುತ್ತಿರಲಿಲ್ಲ. ಈ ಹಿಂದೆ ಹಲವು ಸಂಬಂಧಗಳು ಬಂದಿತ್ತಾದರೂ ಅವರಲ್ಲಿ ಎತ್ತರದವರೇ ಆಗಿದ್ದರು. ಹೀಗಾಗಿ ನಿರಾಕರಿಸುತ್ತಲೇ ಬಂದಿದ್ದಾರೆ. ಕೊನೆಗೂ ಇಬ್ಬರಿಗೂ ಸರಿಸಮಾನತೆಯಂತೆ ಸೂಕ್ತ ಜೋಡಿಗಳೇ ಆದರೂ. ಶ್ರೀಕೃತಿ ಹಾಗೂ ಹರ್ಷಿತ್ ಈ ಮದುವೆಯಿಂದ ಬಹಳ ಸಂತೋಷವಾಗಿದ್ದಾರೆ ಎಂದು ಬಂಧುಗಳು ತಿಳಿಸಿದ್ದಾರೆ. ಏನೇ ಆಗಲಿ ಈ ಬಲು ಅಪರೂಪದ ಜೋಡಿ ನೋಡಲು ಬಂದವರು ಖುಷಿಯಿದ ಹರಸಿ ಹಾರೈಸಿ, ಬಲು ಅಪರೂಪದ ಜೋಡಿಯೆಂದು ಸಂತೋಷಪಟ್ಟರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago