ಕಾರ್ಕಳ : ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೂ ಈ ಬಾರಿ ಸುಪ್ರೀಂ ಕೋರ್ಟ್ ನಿಯಮದ ಬಿಸಿ ತಟ್ಟಿದೆ. ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸದಂತೆ ಅತ್ತೂರು ಚರ್ಚ್ ಪಾಲನಾ ಸಮಿತಿಯವರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.
ಹೀಗಾಗಿ ಬಹುವರ್ಷಗಳಿಂದ ಹಗಲಿರುಳು 5 ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತಿದ್ದ ಸರ್ವಧರ್ಮೀಯರ ಪುಣ್ಯ ಕ್ಷೇತ್ರ ಅತ್ತೂರಿನ ಜಾತ್ರೆ ಸಡಗರಕ್ಕೂ ತಡೆಯಾಗಿದೆ. ಮುಖ್ಯವಾಗಿ ವ್ಯಾಪಾರ, ವ್ಯವಹಾರಕ್ಕೆ ತೊಡಕಾಗಿದೆ. ಈ ಬಾರಿ ಅತ್ತೂರು ಸುತ್ತಮುತ್ತ ಸುಮಾರು 400 ಸ್ಟಾಲ್‌ಗಳು ಬಾಡಿಗೆ ಆಧಾರ ಮೇಲೆ ತೆರೆದಿದೆ. ಅಮ್ಯೂಸ್‌ಮೆಂಟ್ ಸೇರಿದಂತೆ ಮನೋರಂಜನೆಗಾಗಿ ಒಂದಷ್ಟು ಕೇಂದ್ರಗಳಿವೆ. ರಾತ್ರಿ 10 ಗಂಟೆಯ ಬಳಿಕ ಪೊಲೀಸರು ಧ್ವನಿವರ್ಧಕಕ್ಕೆ ಬ್ರೇಕ್ ಹಾಕುವುದರಿಂದ ಸ್ಟಾಲ್‌ಗಳನ್ನು ಬಾಡಿಗೆಗೆ ಪಡೆದವರು ವ್ಯಾಪಾರ ಕುಂಠಿತದಿಂದಾಗಿ ಕಂಗಾಲಾಗಿದ್ದಾರೆ.
ಅತ್ತೂರು ಜಾತ್ರೆಯು ಜ. 26ರಂದು ಪ್ರಾರಂಭಗೊಂಡು ಜ. 30ರವರೆಗೆ ನಡೆಯಲಿದ್ದು, ಈ ಹಿಂದೆ ಮುಂಜಾನೆವರೆಗೂ ಅಂದರೆ ಜನ ವಿರಳವಾಗುವಲ್ಲಿ ತನಕ ಅಂಗಡಿ ಮುಂಗಟ್ಟುಗಳು ತೆರೆದಿರುತ್ತಿದ್ದವು.
ಮೆನ್ ಕಡಿತ
ಅತ್ತೂರಿನ ಬರುವ ಭಕ್ತರ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಈ ಹಿಂದಿನ ಬಾರಿಯೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗುತ್ತಿತ್ತು. ಡಿವೈಎಸ್‌ಪಿ, ಸಿಪಿಐ, 8 ಪಿಎಸ್‌ಐ, 200 ಮಂದಿ ಸಿವಿಲ್ ಪೊಲೀಸ್, 100 ಡಿಎಆರ್ ತುಕಡಿ, 50 ಮಂದಿ ಗೃಹ ರಕ್ಷಕ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ಸುಮಾರು 64 ಕಡೆ ಸಿಸಿಟಿವಿ ಅಳವಡಿಸಲಾಗುತ್ತಿತ್ತು. ಆದರೆ ಈ ಬಾರಿ ಕೇವಲ 30 ಮಂದಿ ಪೊಲೀಸರು, 50 ಸೆಕ್ಯೂರಿಟಿ ಗಾರ್ಡ್ ಮತ್ತು 40 ಹೋಂ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಅದು ಕೂಡ ಪಾವತಿ ಆಧಾರ ಮೇಲೆಯೇ ಎನ್ನುವುದು ವಿಶೇಷ.
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…
ಮಂಗಳೂರಿನಲ್ಲಿ ಹಜ್ ಭವನ, ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯ ಒದಗಿಸುವಂತೆ ಎಸ್‌ಡಿಪಿಐ ಆಗ್ರಹ ಮಂಗಳೂರು: ಮಂಗಳೂರಿನಲ್ಲಿ ಹಜ್ ಭವನ…
ಕಟಪಾಡಿ : ಶೀಘ್ರ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಮುಕ್ತ ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಕಾಮಗಾರಿ ವೇಗದಲ್ಲಿ ನಡೆಯುತಿದ್ದು,…