ಕಾರ್ಕಳ: ವ್ಯಕ್ತಿಯೊಬ್ಬರು ಆನ್‌ಲೈನ್ ವಂಚನೆಯಿಂದ 7.63 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ವಂಚನೆಗೊಳಗಾದವರು ಕಾರ್ಕಳದ ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್‌ಗಳಲ್ಲಿ ಎಸ್‌ಬಿ ಖಾತೆಗಳನ್ನು ಹೊಂದಿದ್ದಾರೆ.
ಫೆಲಿಕ್ಸ್ ಡಯಸ್ ಎಂಬ ಫೇಸ್‌ಬುಕ್ ಖಾತೆದಾರನು ಫೆಬ್ರವರಿ 4ರಂದು ಕಾರ್ಕಳ ಮೂಲದ ವ್ಯಕ್ತಿಗೆ ಪರಿಚಯವಾಗಿದ್ದ. ಅವನು ಯುರೋಪ್‌ನ ಸೈಪ್ರಸ್‌ನಲ್ಲಿ ಇದ್ದಾನೆ ಎಂದು ನಂಬಿಸಿದ್ದ. ಅಲ್ಲದೆ, ವ್ಯಾಲೆಂಟೈನ್ ಡೇಗೆ ಉಡುಗೊರೆಯಾಗಿ ಸಂತ್ರಸ್ತರಿಗೆ ಪಾರ್ಸೆಲ್‌ಗಳನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದಾನೆ. ವಂಚಕನು ಫೆಬ್ರವರಿ 13ರಂದು ಸಂತ್ರಸ್ತೆಯ ವಾಟ್ಸ್ ಆ್ಯಪ್ ಸಂಖ್ಯೆಗೆ ಪಾರ್ಸೆಲ್‌ಗಳ ಫೋಟೋವನ್ನು ಕಳುಹಿಸಿದ್ದ.
ಈ ನಡುವೆ, ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿಯಂತೆ ಅಪರಿಚಿತ ವ್ಯಕ್ತಿ 9870189535 ಸಂಖ್ಯೆಯಿಂದ ದೂರವಾಣಿ ಕರೆ ಮಾಡಿ ಪಾರ್ಸೆಲ್ ಗ್ರೌಂಡ್ ಪಾಸ್‌ಗಾಗಿ ರೂ 47,000 ರೂ. ಪಾವತಿಸುವಂತೆ ಸೂಚಿಸಿದ್ದ. ಇದನ್ನು ನಂಬಿದ ವ್ಯಕ್ತಿ ವಂಚಕ ತಿಳಿಸಿದ ಖಾತೆಗೆ ಹಣ ವರ್ಗಾಯಿಸಿದ್ದರು. ಬಳಿಕ ವಂಚಕ ವಿವಿಧ ಕಾರಣಗಳನ್ನು ನೀಡಿ ಹಣ ಕಳುಹಿಸುವಂತೆ ಒತ್ತಡ ಹಾಕುತ್ತಿದ್ದ ಎಂದು ತಿಳಿದುಬಂದಿದೆ. ಹೀಗೆ ವಂಛಕನ ಒತ್ತಡಕ್ಕೆ ಮಣಿದು ಬರೋಬ್ಬರಿ 7.63 ಲಕ್ಷ ರೂ. ವರ್ಗಾಯಿಸಿದ ಬಳಿಕ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಇದೀಗ ವಂಚನೆ ಪ್ರಕರಣದ ಕುರಿತಂತೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…