ಕಾರ್ಕಳ ; ಕಾರ್ಕಳ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಉದಯಕುಮಾರ್ ಶೆಟ್ಟಿ ಮುನಿಯಾಲು ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿ ಮಾಜಿ ಶಾಸಕ ಗೋಪಾಲ ಭಂಡಾರಿ ಕೈಸೇರಿರುವುದಕ್ಕೆ ಉದಯಕುಮಾರ್ ಶೆಟ್ಟಿ ಬೆಂಬಲಿಗರು ಇತ್ತೀಚೆಗಷ್ಟೇ ಎರಡು ದಿನಗಳ ಕಾಲ ಕಾರ್ಕಳ ನಗರ ಹಾಗೂ ಹೆಬ್ರಿಯಲ್ಲಿ ಉಗ್ರ ಪ್ರತಿಭಟನೆ ನಡೆಸಿದ ಬಳಿಕವೂ ಪಕ್ಷದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಗೋಪಾಲ ಭಂಡಾರಿಯವರ ಮನೆಗೂ ತೆರಳಿದ ಉದಯಕುಮಾರ್ ಶೆಟ್ಟಿ ಬೆಂಬಲಿಗರು ಗೋಪಾಲ ಭಂಡಾರಿಯವರಿಗೆ ಚುನಾವಣೆಯಿಂದ ಹಿಂದೆ ಸರಿಯಿರಿ ಎಂಬ ಒತ್ತಡವನ್ನೂ ಹೇರಿದ್ರು ಆದ್ರೂ ಅದು ಸಫಲವಾಗದ ಹಿನ್ನಲೆಯಲ್ಲಿ ಇದೀಗ ಉಡುಪಿಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಮುತ್ತಿಗೆಯನ್ನೂ ಹಾಕಲಾಯಿತು.
ಹೇಗಾದ್ರೂ ಉದಯಕುಮಾರ್ ಶೆಟ್ಟಿವರಿಗೆ ಈ ಬಾರಿ ಟಿಕೆಟ್ ಸಿಗಬೇಕು ಎಂದು ಹಠಕ್ಕೆ ಬಿದ್ದಿರುವ ಉದಯ್ ಬೆಂಬಲಿಗರು ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ನಮ್ಮ ಬೆಂಬಲ ಉದಯಕುಮಾರ್ ಶೆಟ್ಟಿಯವರಿಗೆ ಎಂಬಂತೆ ಸಹಿ ಸಂಗ್ರಹ ಮಾಡಿ ಉದಯಕುಮಾರ್ ಶೆಟ್ಟಿಯವರಿಗೆ ಬಿಫಾರಂ ನೀಡುವಂತೆ ಒತ್ತಾಯಿಸಿ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆಯವರಿಗೆ ಮನವಿ ಸಲ್ಲಿಸಲಾಯಿತು. ಅಲ್ಲದೆ ಒಂದು ವೇಳೆ ಪಕ್ಷ ಉದಯ ಕುಮಾರ್ ಶೆಟ್ಟಿಯವರಿಗೆ ಬಿಫಾರಂ ನೀಡದೇ ಇದ್ದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಉದಯಕುಮಾರ್ ಅವರನ್ನು ನಿಲ್ಲಿಸಲಾಗುವುದು ಎಂಬ ಎಚ್ಚರಿಕೆಯನ್ನು ಬೆಂಬಲಿಗರು ನೀಡಿದ್ದಾರೆ.
ಇನ್ನು ಕಾರ್ಯಕರ್ತರ ಮುತ್ತಿಗೆ ಘಟನೆಗೆ ಸಂಬಂಧಿಸಿದಂತೆ ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ ಮಾತನಾಡಿ, ಕಾರ್ಯಕರ್ತರು ಉದಯಕುಮಾರ್ ಅವರನ್ನೇ ಅಭ್ಯರ್ಥಿ ಮಾಡಿ, ಉದಯಕುಮಾರ್ ಅವರಿಗೆ ಬಿಫಾರಂ ಕೊಡಿ ಎಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ ಈ ಮನವಿಯನ್ನು ಕೆಪಿಸಿಸಿ ಗೆ ಕಳುಹಿಸಲಾಗುವುದು ಸಚಿವ ರಮಾನಾಥ ರೈ ಕೂಡ ಉದಯಕುಮಾರ್ ಹಾಗೂ ಅವರ ಬೆಂಬಲಿಗರನ್ನು ಸಮಾಧಾನ ಪಡಿಸಲಿದ್ದಾರರ, ಉದಯಕುಮಾರ್ ಅವರು ಬಂಡಾಯ ಆಗ್ಲಿ, ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದಿಲ್ಲ ಎಂಬ ಭರವಸೆ ಇದೆ ಎಂದ್ರು.
ಗೋಪಾಲ ಭಂಡಾರಿ ಕಣ್ಣೀರಿಟ್ಟ ಘಟನೆಗೆ ಉದಯಕುಮಾರ್ ಶೆಟ್ಟಿ ಬೆಂಬಲಿಗ ತಾರನಾಥ್ ಕೂಡ, ಪ್ರತಿಕ್ರಿಯೆ ನೀಡಿದ್ದಾರೆ, ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ತಾರನಾಥ್, ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾಪಂಚಾಯತ್, ಎಪಿಎಂಸಿ ನಲ್ಲಿ ಕಾಂಗ್ರೆಸ್ ಸೋತಾಗ ಕಣ್ಣೀರು ಬಂದಿಲ್ಲ, ಸೋತರೂ ಕಾರ್ಯಕರ್ತರ ಸಭೆ ಮಾಡಿಲ್ಲ, ಕಾರ್ಯಕರ್ತರ ಮನಸ್ಸಿನ ನೋವು ಕೇಳದ ಗೋಪಾಲ ಭಂಡಾರಿ ಅಳುವ ಸನ್ನಿವೇಶ ಇಲ್ಲ, ನಾವು ಯಾವ ಬೆದರಿಕೆ ಹಾಕಿಲ್ಲ, ಪರ್ಯಾಯ ನಾಯಕ ಇದ್ದಾಗ ಅವಕಾಶ ಕೊಡಿ ಎಂದು ಕೇಳಿದ್ದೇವೆ, ದಾಕ್ಷಿಣ್ಯ ಸೃಷ್ಟಿ ಮಾಡಲು ಕಣ್ಣೀರಾಕಿದ್ದಾರೆ ಹೊರತು ಕಾರ್ಯಕರ್ತರ ಒಲವಿಗಾಗಿ ಅಲ್ಲ ಎಂದು ತಿರುಗೇಟು ನೀಡಿದ್ರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…