ಕಾರ್ಕಳ: ನಿಟ್ಟೆ ಗುಂಡ್ಯಡ್ಕದ ಕರಿಕಲ್ಲಿನ ಕ್ವಾರೆಯಲ್ಲಿ ಕಾರ್ಮಿಕ ದಲಿತ ಯುವಕ ಬಾಗಲಕೋಟೆಯ ವೆಂಕಟೇಶ್ (32) ಸಾವಿಗೆ ಸ್ಟೋಟಕ ಕಾರಣವೆಂಬ ಮಹತ್ವದ ಅಂಶ ಪೊಲೀಸ್ ಇಲಾಖೆ ತನಿಖೆಯಲ್ಲಿ ದೃಢಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರೆ ಮಾಲಕ ಹಾಗೂ ಸ್ಫೋಟ ನಡೆಸಿದ ಬಾಲಾಜಿ ನಾಮಾಂಕಿತ ಸಂಸ್ಥೆಯ ಮೇಲೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕ್ವಾರೆಯಲ್ಲಿ ದುಡಿಯುತ್ತಿದ್ದ ಸಂದರ್ಭದಲ್ಲಿ ಸ್ಪೋಟಕ ಬಳಸಿ ಕರಿಕಲ್ಲನ್ನು ಸ್ಪೋಟಿಸಿದಾಗ ಭಾರೀ ಗಾತ್ರದ ಕರಿಕಲ್ಲು ವೆಂಕಟೇಶ್ ತಲೆ ಭಾಗಕ್ಕೆ ಬಂದೆರಗಿ ಘಟನಾ ಸ್ಥಳದಲಗಲಿಯೇ ಕುಸಿದು ಬಿದ್ದರು. ಪರಿಣಾಮವಾಗಿ ರಕ್ತಸ್ರಾವದೊಂದಿಗೆ ಮಣಿಪಾಲ ಆಸ್ಪತ್ರೆ ಗೆ ದಾಖಲಿಸಲಾಗಿತ್ತಾದರೂ ಅದಾಗಲೇ ವೆಂಕಟೇಶ್ ಜೀವತೆತ್ತದರು.
ಇನ್ನು ಕರಿಕಲ್ಲಿನ ಕ್ವಾರೆಯಲ್ಲಿ ಘಟನೆ ಸಂಭವಿಸಿದ ದಿನದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉಡುಪಿ ಜಿಲ್ಲೆಯಲ್ಲಿದ್ದು, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅದೇ ದಿನದಂದು ಕಾರ್ಕಳದಲ್ಲಿ ಸಂಭವಿಸಿದ ಘಟನೆಯಿಂದಾಗಿ ಯುವಕನೊಬ್ಬ ಮೃತ ಪಟ್ಟಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ತಮಡುಗಟ್ಟಿದ್ದು, ಸ್ಪೋಟಕದ ತೀವ್ರತೆಯನ್ನು ಪೊಲೀಸ್ ಇಲಾಖೆ ಅಂದಾಜಿದರು. ಕ್ವಾರೆ ಮಾಲಕರು ಹೇಳಿದ ಕಡ್ಲೆಪುರಿ ಕಥೆಗೆ ಇತಿಶ್ರೀ ಹಾಕಿದ ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿರುವುದಕ್ಕೆ ನಾಗರಿಕ ಸಮಾಜದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿವೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…