Featured

ಕಾರ್ಕಳ: ಗೋಕಳ್ಳರನ್ನುಬಂಧಿಸಲು ವಿಫಲರಾದರೆ ಸಚಿವ ಸುನೀಲ್ ಕುಮಾರ್ ಅವರ ಕಛೇರಿ ಮುಂದೆ ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹ : ಯೋಗೀಶ್ ಆಚಾರ್ಯ ಇನ್ನಾ – Vishwanews24

ಕಾರ್ಕಳ: ಗೋಕಳ್ಳರನ್ನುಬಂಧಿಸಲು ವಿಫಲರಾದರೆ ಸಚಿವ ಸುನೀಲ್ ಕುಮಾರ್ ಅವರ ಕಛೇರಿ ಮುಂದೆ ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹ : ಯೋಗೀಶ್ ಆಚಾರ್ಯ ಇನ್ನಾ – Vishwanews24

ಕಾರ್ಕಳ: ಗೋಕಳ್ಳತನದ ಕಳ್ಳರನ್ನು ಬಂಧಿಸಲು ವಿಫಲರಾದರೆ ಸಚಿವ ಸುನೀಲ್ ಕುಮಾರ್ ಅವರ ಕಛೇರಿಯ ಮುಂಬಾಗದಲ್ಲಿ ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ನಯನ್ ಇನ್ನಾ ಎಚ್ಚರಿಕೆ ನೀಡಿದ್ದಾರೆ

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾರ್ಕಳ ನಗರದಿಂದ ಕೆಲವೇ ಕಿಲೋಮೀಟರ್ ದೂರದ ಕರಿಯಕಲ್ಲು ಎಂಬಲ್ಲಿನ ಯಶೋದಾ ಆಚಾರ್ಯ ಎನ್ನುವವರ ಹಟ್ಟಿಗೆ ನುಗ್ಗಿ 16 ಹಸುಗಳನ್ನು ಕಳ್ಳತನ ಮಾಡಲಾಗಿದ್ದು ಹೈನುಹಾರಿಕೆಯನ್ನೇ ಜೀವನಾಧಾರವಾಗಿ ನಂಬಿಕೊಂಡಿದ್ದ ಬಡ ಕುಟುಂಬವು ಇಂದು ದನಕಳ್ಳರ ಹಾವಳಿಯಿಂದಾಗಿ ದಿಕ್ಕು ತೋಚದಂತಾಗಿದೆ. ಯಶೋದಾ ಆಚಾರ್ಯರ ಮನೆಯ ಗೋಕಳ್ಳತನ ಪ್ರಕರಣವು ಬೆಳಕಿಗೆ ಬಂದ ಮರುದಿನವೇ ನಿಟ್ಟೆ ಸಮೀಪದ ಲೆಮಿನಾ ಕ್ರಾಸಿನ ರಾಜೇಶ್ ಆಚಾರ್ಯ ಎನ್ನುವವರ ಮನೆಯ ಹಟ್ಟಿಯಿಂದಲೂ 14 ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಕಾರ್ಕಳ ಕ್ಷೇತ್ರವೊಂದರಲ್ಲೇ ಕಳೆದ ಎರಡು ವರ್ಷದ ಅವಧಿಯಲ್ಲಿ ಸುಮಾರು 2000 ಸಾವಿರಕ್ಕೂ ಮಿಕ್ಕಿ ಹೈನುಗಾರರ ಗೋವುಗಳನ್ನು ಹಟ್ಟಿಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರವಿರುವಾಗ ದೇಶದ ಯಾವುದೇ ಮೂಲೆಯಲ್ಲಿ ಗೋಕಳ್ಳತನ ನಡೆದರೂ ವಿರಾವೇಷದ ಭಾಷಣ ಬಿಗಿಯುವ ಸುನೀಲ್ ಕುಮಾರ್ ಅವರು ತನ್ನದೇ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅವ್ಯಾಹತವಾಗಿ ಗೋಕಳ್ಳತನ ನಡೆಯುತ್ತಿದ್ದರೂ ಮೌವಾಗಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ, ಗೋಕಳ್ಳರಿಗೆ ಪರೋಕ್ಷವಾಗಿ ಸಚಿವ ಸುನೀಲ್ ಕುಮಾರ್ ಅವರೇ ಬೆಂಬಲಿಸುತ್ತಿದ್ದಾರೆಯೇ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು ಸುನೀಲ್ ಕುಮಾರ್ ಅವರ ಮೌನವೂ ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಕಾರ್ಕಳದ ನಿಟ್ಟೆ, ಪಳ್ಳಿ, ಬೈಲೂರು, ಬೆಳ್ಮಣ್, ರೆಂಜಾಳ, ಇರ್ವತ್ತೂರು, ಬಜಗೋಳಿ, ಮಿಯ್ಯಾರು, ಹೆಬ್ರಿ, ಅಜೆಕಾರು ಮುಂತಾದೆಡೆ ಅವ್ಯಾಹತವಾಗಿ ಗೋಕಳ್ಳತನ ನಡೆಯುತ್ತಿದ್ದ ಸಚಿವರಾದ ಸುನೀಲ್ ಕುಮಾರ್ ಅವರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖೇದಕರ. ಗೋವಿನ ಹೆಸರಿನಲ್ಲಿ ಅಧಿಕಾರವನ್ನು ಪಡೆದು ಇಂದು ಗೋವಿನ ರೋಧನವನ್ನು ಕೇಳಿಸದೇ ಆ ಬಗ್ಗೆ ತುಟಿಬಿಚ್ಚದ ಸುನೀಲ್ ಕುಮಾರ್ ಅವರ ನಡೆ ಅಚ್ಚರಿ ಮೂಡಿಸಿದೆ. ಯಶೋದಾ ಅಚಾರ್ಯ ಹಾಗೂ ರಾಜೇಶ್ ಅಚಾರ್ಯರ ಮನೆಗಳಿಂದ ಕಳವಾದ 30 ಗೋವುಗಳು ಹಾಗೂ ಕಾರ್ಕಳದ ಇನ್ನಿತರ ಭಾಗಗಳಲ್ಲಿ ನಡೆದ ಗೋಕಳ್ಳತನದ ಕಳ್ಳರನ್ನು ಬಂಧಿಸಲು ವಿಫಲರಾದರೆ ಸಚಿವ ಸುನೀಲ್ ಕುಮಾರ್ ಅವರ ಕಛೇರಿಯ ಮುಂಬಾಗದಲ್ಲಿ ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ನಯನ್ ಇನ್ನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago