ಉಡುಪಿ

ಕಾರ್ಕಳ: ಗೋಪೂಜೆಯ ಶುಭ ದಿನದಂದು ಅಶಕ್ತ ಕುಟುಂಬಗಳಿಗೆ ‘ಗೋ ದಾನ’ – Vishwanews24

ಕಾರ್ಕಳ: ಗೋಪೂಜೆಯ ಶುಭ ದಿನದಂದು ಅಶಕ್ತ ಕುಟುಂಬಗಳಿಗೆ ‘ಗೋ ದಾನ’ – Vishwanews24

ಕಾರ್ಕಳ: ಗೋಪೂಜೆಯ ಶುಭ ದಿನದಂದು ಅಶಕ್ತ ಹಿಂದೂ ಕುಟುಂಬಗಳನ್ನು ಸಶಕ್ತ ಮಾಡುವಲ್ಲಿ ವಿನೂತನ ಹೆಜ್ಜೆ ಇಟ್ಟಿರುವ ರವೀಂದ್ರ ಶೆಟ್ಟಿ ಬಜಗೋಳಿಯವರಿಂದ “ಗೋ ದಾನ” ಕಾರ್ಯಕ್ರಮ ನಡೆಯಿತು.

ಅಶಕ್ತ ಹಿಂದೂ ಕುಟುಂಬಗಳನ್ನು ಸಶಕ್ತ ಮಾಡುವಲ್ಲಿ ಇತರ ಹಿಂದೂ ಮುಖಂಡರಿಗೆ ಮಾದರಿಯಾಗುವಂತಹ ಕಾರ್ಯಕ್ರಮ ಇಂದು ಬಜಗೋಳಿಯಲ್ಲಿ ನಡೆಯಿತು. ಸಂಘದ ಹಿರಿಯ ಮುಖಂಡ ಗುಣವಂತೇಶ್ ಭಟ್, ಊರಿನ ಗಣ್ಯರ ಮತ್ತು ಸಂಘ ಪರಿವಾರದ ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಮೂಡಿಬಂತು. ಕರ್ನಾಟಕ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಶರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ತಮ್ಮ ಸ್ವಗೃಹದಲ್ಲಿ ಗೋಪೂಜೆ ನೆರವೇರಿಸಿದ ನಂತರ ಅಶಕ್ತ ಹಿಂದೂ ಕುಟುಂಬಗಳ ಮನೆ ಮನೆಗೆ ತೆರಳಿ ಉತ್ತಮ ತಳಿಯ, ಹೆಚ್ಚು ಹಾಲಿನ ಇಳುವರಿಯನ್ನು ಕೊಡುವ ಹಸುಗಳನ್ನು ಹಿಂದೂ ಸಾಂಪ್ರದಾಯಿಕ ವಿಧಿವಿಧಾನದ ಪ್ರಕಾರವೇ ದಾನ ಮಾಡಿದರು. ಅನಾರೋಗ್ಯ ಪೀಡಿತರಾಗಿದ್ದ ಶಿರ್ಲಾಲಿನ ಕೃಷ್ಣ ಶೆಟ್ಟಿ ದಂಪತಿಗಳು ಇದ್ದ ಮನೆಗೆ ನುಗ್ಗಿ ಮೂರು ಹಸುಗಳನ್ನು ದರೋಡೆ ಮಾಡಿದ ಕೃತ್ಯ ನಡೆದ ನಂತರ ಶಿರ್ಲಾಲಿನ ಕೃಷ್ಣ ಶೆಟ್ಟಿ ದಂಪತಿಗಳ ಬದುಕು ದುಸ್ತರವಾಗಿದ್ದನ್ನು ಸುಸ್ಥಿರವಾಗಿ ಮಾಡುವ ನಿಟ್ಟಿನಲ್ಲಿ ಹಾಲು ಕೊಡುವ ಹಸು-ಕರುವನ್ನು ದಾನ ಮಾಡಲಾಯಿತು.

ದುರ್ಗ ಬೊಂಬೇದಡ್ಕ ಎಂಬಲ್ಲಿ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಗೊತ್ತಾದ ನಂತರ ಶ್ರಮಕೋರುವ ಕೆಲಸ ಮಾಡುವ ಶಿವು ಮೇರಾ ತನ್ನ ಮಡದಿ ಮತ್ತು ತನ್ನೆರಡು ಮಕ್ಕಳ ಜೀವನದ ಬಂಡಿ ಸಾಗಿಸೋದು ಹೇಗೇ ಎಂಬ ಚಿಂತೆಯಲ್ಲಿರುವಾಗಲೇ ರವೀಂದ್ರ ಶೆಟ್ಟರು ಮಾಡಿದ ಗೋ ದಾನವು ಅವರ ಮೊಗದಲ್ಲೂ ಸಂತಸದ ಕಳೆ ಮೂಡಿಸಿತು.

ಪೆರ್ವಾಜೆ ದೇವರಗುಡ್ಡೆ ಎಂಬಲ್ಲಿ ತನ್ನ ಇಳಿವಯಸ್ಸಿನಲ್ಲೂ ಬೀಡಿ ಕಟ್ಟಿ ತನ್ನ ಸಂಸಾರದ ನೌಕೆ ಸಾಗಿಸುತ್ತಿದ್ದ ಜಯಂತಿ ಮೊಗೇರ ಎಂಬ ಮಹಿಳೆಗೆ ರವೀಂದ್ರ ಶೆಟ್ರು ನೀಡಿದ ಗೋ ದಾನವು ಆಕೆಯ ಬದುಕಿಗೆ ಭದ್ರತೆಯ ಭರವಸೆ ನೀಡಿದೆ.

Vishwa News 24

Recent Posts

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

1 hour ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

1 hour ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

2 hours ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

4 hours ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

5 hours ago

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ – vishwanews24

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…

5 hours ago