ಕಾರ್ಕಳ : “ರಾಜ್ಯದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಯಲಿದೆ. ರಾಜ್ಯದಲ್ಲಿ ಒಟ್ಟು 15 ಲಕ್ಷ ಹೆಕ್ಟೇರ್ ಪ್ರದೇಶವು ಡೀಮ್ಡ್ ಫಾರೆಸ್ಟ್ ಒಳಗೊಂಡಿದ್ದು, ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್ ಡೀಮ್ಡ್ ಫಾರೆಸ್ಟ್‌ನಲ್ಲಿದೆ. ಅದನ್ನು ಮುಕ್ತ ಮಾಡುವುದು ಸರಕಾರದ ಬದ್ಧತೆಯಾಗಿದೆ. ಕುಮ್ಕಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರದ ಮುಂದಿಡಲಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರದ ಇದರ ಬಗ್ಗೆ ನಿರ್ಲಕ್ಷ ತೋರಿತ್ತು” ಎಂದು ಧಾರ್ಮಿಕ ದತ್ತಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಡಜನರಿಗೆ ನಿವೇಶನ-ಮನೆ, ನೀರು, ವಿದ್ಯುತ್, ರಕ್ಷಣೆ ಸೇರಿದಂತೆ ಮೂಲ ಸೌಕರ್ಯ ಒದಗಿಸುವುದು ಸರಕಾರದ ಜಬಾವ್ದಾರಿಯಾಗಿದೆ. ಆದರೆ ಡೀಮ್ಡ್ ಫಾರೆಸ್ಟ್‌ನಿಂದಾಗಿ ಅದರ ಸೌಲಭ್ಯ ಒದಗಿಸಲು ಸಾಧ್ಯವಾಗರುವುದನ್ನು ವಿವರಿಸಿದರು.
ಗೋರಕ್ಷಣೆಗೆ ಸರಕಾರ ಬದ್ಧ:
“ಗೋರಕ್ಷಣೆಯ ಉದ್ದೇಶದಿಂದ ರಾಜ್ಯದಲ್ಲಿ ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆಯಲಾಗುವುದು. ಪ್ರಥಮ ಹಂತದಲ್ಲಿ 30 ಗೋಶಾಲೆಗಳು ನಿರ್ಮಾಣವಾಗಲಿದೆ. ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಳಗಳ ವತಿಯಿಂದಲೂ ರಾಜ್ಯದಲ್ಲಿ 50 ಗೋಶಾಲೆಯನ್ನು ನಡೆಸಲಾಗುವುದು. ಆ ಮೂಲಕ ಬಿಜೆಪಿ ಕಾರ್ಯಕರ್ತರ ಅಭಿಲಾಷೆಯನ್ನು ಸರಕಾರ ಈಡೇರಿಸಿದಂತಾಗುತ್ತದೆ” ಎಂದರು.
ಸಪ್ತಪದಿಗೆ ಮತ್ತೇ ಚಾಲನೆ:
“ಕೊರೊನಾದಿಂದ ಸ್ಥಗಿತಗೊಂಡ ಸಾಮೂಹಿಕ ವಿವಾಹ ಸಪ್ತಪದಿಗೆ ಸರಕಾರ ಮತ್ತೇ ಚಾಲನೆ ನೀಡಲಿದೆ. ಪ್ರತಿ ಜೋಡಿಗೆ ಸುಮಾರು 55 ಸಾವಿರ ರೂ. ಖರ್ಚು ಭರಿಸಲಿದೆ” ಎಂದು ಹೇಳಿದರು.
ದೇವಳಗಳಲ್ಲಿ ಅನ್ನದಾನ:
ದೇವಸ್ಥಾನಗಳು ಈಗಾಗಲೇ ತೆರದುಕೊಂಡಿವೆ. ಶೀಘ್ರವೇ ದೇವಳದ ಸೇವಗೆಳು ಹಾಗೂ ಅನ್ನದಾನ ಸೇವೆ ಆರಂಭವಾಗಲಿವೆ. ಪ್ರಸಿದ್ಧ ಶ್ರೀ ಕೇತ್ರಗಳಲ್ಲಿ ನೂಕುನುಗ್ಗಲು ಆಗುವುದರಿಂದ ಸೂಕ್ತ ಕ್ರಮಗಳನ್ನು ಅನುಸರಿಸಬೇಕಾಗಿದೆ. ಕೊರೊನಾ ಇದೀಗ ಶೇ.5ಕ್ಕಿಂತ ಕಡಿಮೆಯಿದ್ದು, ಒಂದುವೇಳೆ ಅದಕ್ಕಿಂತ ಹೆಚ್ಚಾದಲ್ಲಿ ಮತ್ತೇ ಲಾಕ್‌ಡೌನ್ ಅನಿವಾರ್ಯವಾಗಬಹುದೆಂಬ ಮುನ್ಸೂಚನೆ ನೀಡಿದರು.
ಪಕ್ಷದ ಕಚೇರಿಯೇ ಬಿಜೆಪಿಕಾರ್ಯಕರ್ತರ ತಳಹದಿ:
“ಆಡಳಿತ್ಮಾಕ ಸುಧಾರಣೆಯನ್ನು ಕಾರ್ಯಕರ್ತರಿಗೆ ತಿಳಿಸಲು ಹಾಗೂ ಪಕ್ಷದ ಸಂಘಟನೆ ಜನಾಭಿಪ್ರಾಯ ಕ್ರೋಡೀಕರಣ ಉದ್ದೇಶ ಇದಾಗಿದೆ. ಪಕ್ಷದ ಕಚೇರಿಯೇ ಬಿಜೆಪಿ ಕಾರ್ಯಕರ್ತರ ತಳಹದಿಯಾಗಿದೆ. ಕಾರ್ಯಕರ್ತರನ್ನು ಸಂಪರ್ಕವು ಪ್ರತಿಕೇತ್ರದಲ್ಲಿ ನಡೆಯಲಿದೆ” ಎಂದರು.
ಆರ್‌ಎಸ್‌ಎಸ್ ಮುಖಂಡ ಬೋಳ ಪ್ರಭಾಕರ ಕಾಮತ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಗೇರು ಬೀಜ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ರವೀಂದ್ರ ಕುಮಾರ್, ಸವಿತಾ ಕೋಟ್ಯಾನ್, ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ನಗರಾಧ್ಯಕ್ಷ ರೆವೀಂದ್ರ ಮೊಯಿಲಿ ಸ್ವಾಗತಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…