Featured

ಕಾರ್ಕಳ: ಜನವರಿ 18 ರಿಂದ 28 ರವರೆಗೆ ಅತ್ತೂರು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ; ಸರಳ ಆಚರಣೆ -Vishwanews24

ಕಾರ್ಕಳ: ಜನವರಿ 18 ರಿಂದ 28 ರವರೆಗೆ ಅತ್ತೂರು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ; ಸರಳ ಆಚರಣೆ

ಕಾರ್ಕಳ: ಕೋವಿಡ್-19 ಮಾರ್ಗದರ್ಶಿ ನಿಯಮಗಳ ಪ್ರಕಾರ, ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಆಚರಣೆಯು 2021 ರ ಜನವರಿ ತಿಂಗಳಿನಲ್ಲಿ ಸರಳವಾಗಿ ನೆರವೇರಲಿದೆ. ಈ ನಿಮಿತ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಭೆ ಸೇರುವುದನ್ನು ನಿಷೇಧಿಸಲಾಗಿದೆ.

ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ಜನವರಿ 17 ರಂದು ಆರಂಭಗೊಳ್ಳುವುದು. ಬೆಳಿಗ್ಗೆ 8.00 ಗಂಟೆಗೆ ಬಲಿಪೂಜೆ ಅನಂತರ ನವೇನಾ ಪ್ರಾರ್ಥನೆ. ನವೇನಾ ಪ್ರಾರ್ಥನೆಗೆ ಕೋರಿಕೆಗಳು, ಮಹೋತ್ಸವಕ್ಕೆ ಫಿರ್ಜೆಂತ್ ಹಾಗೂ ಮುಡೋಮ್ಗಳನ್ನು ಮುಂಚಿತವಾಗಿ ಕಳುಹಿಸಿಕೊಡಿ ಪುಣ್ಯಕ್ಷೇತ್ರದ ವತಿಯಿಂದ ಮನವಿ ಮಾಡಲಾಗಿದೆ.

ಪುಣ್ಯಕ್ಷೇತ್ರದಲ್ಲಿ ಜನಸಂದಣಿಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ, ಭಕ್ತಾದಿಗಳ ಆಧ್ಯಾತ್ಮಿಕ ಒಳಿತಿಗಾಗಿ ಜನವರಿ 18 ರಿಂದ ಜನವರಿ 28 ರವರೆಗೆ ಪ್ರತಿದಿನ ಐದು ಬಲಿಪೂಜೆಗಳು ನೆರವೇರಲಿರುವುವು. ದಿನದ ಪ್ರಥಮ ಬಲಿಪೂಜೆ ಬೆಳಿಗ್ಗೆ 8.00 ಗಂಟೆಗೆ ಹಾಗೂ ಅಂತಿಮ ಬಲಿಪೂಜೆ ಸಂಜೆ 5.00 ಗಂಟೆಗೆ ನೆರವೇರುವುದು.

ಮಂಗಳೂರು,: ಸ್ಮಾರ್ಟ್ ಸಿಟಿ ಯೋಜನೆ ದೋಷ ಪೂರಿತ ಕಾಮಗಾರಿಗಳಿಂದ ಕೂಡಿದ್ದು, ಸಾರ್ವಜನಿಕ ಹಣದ ದುರುಪಯೋಗ : ಅಬ್ದುಲ್ ರವೂಫ್ ಆರೋಪ -Vishwanews24

ಈ ಬಾರಿಯ ಮಹೋತ್ಸವ ಕೋವಿಚ್ ನಿಮಯಾವಳಿಯಂತ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುವುದನ್ನು ನಿಷೇಧಿಸಲಾಗಿದೆ.

ಜನಸಂದಣಿ ಕಡಿಮೆಗೊಳಿಸುವ ಸಲುವಾಗಿ ಭಕ್ತಾಧಿಗಳು ಜ. 18ರಿಂದಲೇ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವಂತೆ ವಿನಂತಿಸಲಾಗಿದೆ.

ದೇವಾಲಯದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಿ ಬಲಿಪೂಜೆಯೊಂದರಲ್ಲಿ ಪಾಲ್ಗೊಳ್ಳಲು ಕೇವಲ 200 ಭಕ್ತಾದಿಗಳಿಗೆ ಮಾತ್ರ ಅವಕಾಶವಿರುತ್ತದೆ.

ಬಸಿಲಿಕದ ವಠಾರದಲ್ಲಿ ಹಾಗೂ ವಿಶೇಷವಾಗಿ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಳ್ಳುವವರು ಮಾಸ್ಕ್ ಧರಿಸುವುದು ಖಡ್ಡಾಯವಾಗಿರುತ್ತದೆ

ಬಲಿಪೂಜೆಯ ಅಂತ್ಯದಲ್ಲಿ ಯಾಜಕರು ಭಕ್ತಾದಿಗಳ ಶಿರಗಳ ಮೇಲೆ ಕೈಗಳನ್ನಿಟ್ಟು ಪ್ರಾರ್ಥಿಸುವ ವಿದಿಯು ಇರುವುದಿಲ್ಲ. ಅಂತೆಯೇ ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ಬಹಿರಂಗ ಸನ್ಮಾನಕ್ಕಾಗಿ ಹೊರಗೆ ಇಡಲಾಗುವುದಿಲ್ಲ. ಬದಲಾಗಿ ಪ್ರತಿ ಬಲಿಪೂಜೆಯ ಅಂತ್ಯದಲ್ಲಿ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಸಂತ ಲಾರೆನ್ಸರ ಪವಿತ್ರ ಅವಶೇಷದ ಆಶೀರ್ವಾದವನ್ನು ನೀಡಲಾಗುವುದು.

ಪುಣ್ಯಕ್ಷೇತ್ರದ ವಠಾರದಲ್ಲಿ ಹರಕೆಯ ಮೇಣದ ಬತ್ತಿಗಳು ಹಾಗೂ ಧಾರ್ಮಿಕ ವಸ್ತುಗಳ ಪುಣ್ಯಕ್ಷೇತ್ರದ ಸ್ಟಾಲ್  ಹೊರತು ಇತರ ಯಾವುದೇ ಸ್ಟಾಲ್ ಇರುವುದಿಲ್ಲ. ಭಕ್ತಾದಿಗಳಿಂದ ಹರಕೆಯ ಪೂಜೆಗಳನ್ನು ಸ್ವೀಕರಿಸಲಾಗುವುದು.

ಈ ವರ್ಷ ಕಾಂಗ್ರೆಸ್ ಕಾರ್ಯಕರ್ತರಿಗೆ ಹೋರಾಟದ ವರ್ಷ : ಡಿಕೆ ಶಿವಕುಮಾರ್ -Vishwanews24

ನವೇನಾ ಹಾಗೂ ಮಹೋತ್ಸವದ ದಿನಗಳಲ್ಲಿ ಸಂಜೆಯ ಅಂತಿಮ ಪೂಜೆಯ ಬಳಿಕ, 6.30 ಗಂಟೆಯಿಂದ ಮರುದಿನ ಬೆಳಿಗ್ಗೆ 7.00 ಗಂಟೆಯವರೆಗೆ ಪುಣ್ಯಕ್ಷೇತ್ರದ ವಠಾರವು ಸಾರ್ವಜನಿಕರಿಗೆ ಮುಚ್ಚಿರುವುದು ಎಂದು ಪ್ರಕಟಣೆ ತಿಳಿಸಿದೆ.

ಈ ಬಾರಿಯ ಮಹೋತ್ಸವ ಕೋವಿಚ್ ನಿಮಯಾವಳಿಯಂತ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುವುದನ್ನು ನಿಷೇಧಿಸಲಾಗಿದೆ.

https://bit.ly/3n4zofR

ಹೊಸ ವರ್ಷಾಚರಣೆಯ ಸಂಭ್ರಮ: ಮಣಿಪಾಲದಲ್ಲಿ ಪುಂಡಾಟ ಮಾಡುತ್ತಿದ್ದ ಯುವಕರಿಗೆ ಪೊಲೀಸರಿಂದ ಲಾಠಿ ರುಚಿ

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

6 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

6 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

7 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

7 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

7 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

7 hours ago