Featured

ಕಾರ್ಕಳ : ಜ.26 ರಿಂದ 30 ರ ವರೆಗೆ ಅತ್ತೂರು ಜಾತ್ರೆ – Vishwanews24

ಕಾರ್ಕಳ: ಜ.26-30ರ ವರೆಗೆ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ಮಹೋತ್ಸವ-2025

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ಮಹೋತ್ಸವ-2025 ಜನವರಿ 26ರಿಂದ 30ರ ವರೆಗೆ ಜಗಲಿರುವುದು. “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” ಎಂಬುವುದು ಮಹೋತ್ಸವದ ವಿಷಯವಾಗಿದೆ.

ಜನವರಿ 26ರ ಬೆಳಿಗ್ಗೆ 10.30ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನಡೆಯಲಿದೆ. ಉಡುಪಿ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಪ್ರಧಾನ ಯಾಜಕರಾಗಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ.

ಜನವರಿ 27ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ಜರಗಲಿದ್ದು, ಉಡುಪಿ ಶೇಷ್ಠ ಧರ್ಮಗುರು ಅ.ವಂ.ಫರ್ಡಿನಾಂಡ್ ಗೋನ್ಸಾಲ್ವಿಸ್ ನೆರವೇರಿಸಲಿದ್ದಾರೆ.

ಜನವರಿ 28ರಂದು ಸಾಯಂಕಾಲ 5.30ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಲಿದೆ. ಬೆಳ್ತಂಗಡಿ ಧರ್ಮಾಧ್ಯಕ್ಷ ಪರಮಪೂಜ್ಯ ಲೋರೆನ್ಸ್ ಮುಕ್ಕುಝೀ ನೆರವೇರಿಸಲಿದ್ದಾರೆ.

ಜನವರಿ 29ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಲಿದೆ. ಮಂಗಳೂರು ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಅಲೋಶಿಯಸ್ ಪಾವ್ಲ್ ಸೊಜ್ ನೆರವೇರಿಸಲಿದ್ದಾರೆ.

 

ಜನವರಿ 30ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಲಿದೆ. ಬಾರುಯಿಪುರ್ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಸಾಲ್ವದೊರ್ ಲೋಬೋ ನೆರವೇರಿಸಲಿದ್ದಾರೆ,*ಸಂತ ಲೋರೆನ್ಸರ ಗೌರವಾರ್ಥ ನವೇನ ಪ್ರಾರ್ಥನೆಯು ಜನವರಿ 17ರಿಂದ ಆರಂಭಗೊಳ್ಳಲಿದೆ. ಬೆಳಿಗ್ಗೆ 9 ಗಂಟಗೆ ಆರಾಧನೆ, 9.30ಕ್ಕೆ ಬಲಿಪೂಜೆ ನವೇನಕ್ಕೆ ಕೋರಿಕೆಗಳು, ಮಹೋತ್ಸವಕ್ಕೆ ಫಿರ್ಜೆಂತ್ ಹಾಗೂ ಮುಡ್ದಮ್ ಸೂಕ್ತ ಸಮಯದಲ್ಲಿ ಕಳುಹಿಸಬಹುದು.

ಜನವರಿ 26ರಂದು ರವಿವಾರ ಮಕ್ಕಳಿಗೋಸ್ಕರ ವಿಶೇಷ ಬಲಿಪೂಜೆ ಇರುವುದು. ಆ ದಿನದ ಪ್ರಥಮ ಪೂಜೆ ಬೆಳಿಗ್ಗೆ 7.30ಕ್ಕೆ ಕೊನೆಯ ಪೂಜೆ ರಾತ್ರಿ 8ಗಂಟಗೆ ನೆರವೇರಲಿರುವುದು.

ಜನವರಿ 27ರಂದು ಸೋಮವಾರ ಬೆಳಿಗ್ಗೆ 10.00 ಗಂಟಗೆ ಮಧ್ಯಾಹ್ನ 3 ಗಂಟೆಗೆ ಹಾಗೂ ಸಂಜೆ 6.00 ಗಂಟಗೆ ದಿವ್ಯಬಲಿಪೂಜೆ ಇರುವುದು. ಆ ಸಿನದಂದು ರೋಗಿಗಳಿಗಾಗಿ ವಿಶೇಷ ಪೂಜೆ ಹಾಗೂ ಆ ದಿನ ಮಾತ್ರ ರೋಗಿಗಳ ವಾಹನಗಳನ್ನು ಇಗರ್ಜಿಯ ವಠಾರಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಹಬ್ಬದ ಬೇರೆ ದಿನಗಳಲ್ಲಿ ವಾಹನಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

ಜನವರಿ 28ರಂದು ಹಾಗೂ ಜನವರಿ 29ರಂದು ಪ್ರಥಮ ಪೂಜೆ ಬೆಳಿಗ್ಗೆ 8.00 ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 10.00ಗಂಟೆಗೆ ನೆರವೇರಲಿದೆ.

ಜನವರಿ 30ರಂದು ಪ್ರಥಮ ಪೂಜೆ ಬೆಳಿಗ್ಗೆ 8.00ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 8.30ಕ್ಕೆ ನೆರವೇರಲಿದೆ.

ಪುಣ್ಯಕ್ಷೇತ್ರದ ವಠಾರದಲ್ಲಿ ಹರಕೆಯ ಮೊಂಬತ್ತಿ ಹಾಗೂ ಧಾರ್ಮಿಕ ವಸ್ತುಗಳು ಪುಣ್ಯಕ್ಷೇತ್ರದ ಸ್ಟಾಲ್‌ನಲ್ಲಿ ಸಿಗುವುದು. ಹರಕೆಯ ಪೂಜೆಗಳನ್ನು ಸ್ವೀಕರಿಸುವ ವ್ಯವಸ್ಥೆ ಇರುವುದು. ನವೇನದ ದಿನಗಳಲ್ಲಿ ಹಾಘೂ ಹಬ್ಬದ ದಿನಗಳಲ್ಲಿ ಭಕ್ತಾದಿಗಳಿಗೆ ವಿಶೇಷ ಪಾಪ ನಿವೇದನೆಯ ವ್ಯವಸ್ಥೆ ಇರುವುದು ಎಂದು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ, ಸಂತ ಲೋರೆನ್ಸ್ ಬಸಿಲಿಕಾ ಆಡಳಿತ ಸಮಿತಿಯ ರೆಕ್ಟರ್ ಅ.ವಂ.ಅಲ್ಬನ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago