Featured

ಕಾರ್ಕಳ: ಡಿ.27 ರಿಂದ ಡಿ.29 ರವರೆಗೆ ಕಾರ್ಲೋತ್ಸವ- 2024 – vishwanews24

ಕಾರ್ಕಳ: ಡಿ.27 ರಿಂದ ಡಿ.29 ರವರೆಗೆ ಕಾರ್ಲೋತ್ಸವ- 2024

ಕಾರ್ಕಳ : ಕಾರ್ಕಳ ಟೈಗರ್ಸ್‌-ಬೋಳ ಪ್ರಶಾಂತ್‌ ಕಾಮತ್‌ ಅಭಿಮಾನಿ ಬಳಗ ಮತ್ತು ಬಾಯ್‌ಝೋನ್ ಅಕಾಡೆಮಿ ವತಿಯಿಂದ ಡಿ. 27,‌ 28 ಮತ್ತು 29ರಂದು ಕಾರ್ಕಳದ ಸ್ವರಾಜ್‌ ಮೈದಾನದಲ್ಲಿ ಕಾರ್ಲೋತ್ಸವ ನಡೆಯಲಿದೆ. ಕಾರ್ಯಕ್ರಮದಂಗವಾಗಿ ಆಹಾರ ಮೇಳ, ಬೋಟಿಂಗ್‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಡಿ. 27ರ ಶುಕ್ರವಾರ
ಸಂಜೆ 5 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಉದ್ಘಾಟಿಸಲಿರುವರು. ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್‌ ಪೂಜಾರಿ, ಶಾಸಕ ವಿ. ಸುನಿಲ್‌ ಕುಮಾರ್‌ ಹಾಗೂ ಉದ್ಯಮಿ ಬೋಳ ಶ್ರೀನಿವಾಸ್‌ ಕಾಮತ್‌ ಗೌರವ ಉಪಸ್ಥಿತರಿರಲಿದ್ದು, ಉದ್ಯಮಿ ಬೋಳ ಪ್ರಶಾಂತ್‌ ಕಾಮತ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಈಶ್ವರ್‌ ಮಲ್ಪೆ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ – ಪೃಥ್ವಿ ಅಂಬರ್‌ ಭಾಗಿ
ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದ್ದು, ಸಂಸ್ಕೃತಿಯನ್ನು ಬಿಂಬಿಸುವ ಹುಲಿವೇಷ, ವಾಯೋಲಿನ್‌ ಚೆಂಡೆ, ಭರತ ನಾಟ್ಯ ಹಾಗೂ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬರ್‌ ಭಾಗಿಯಾಗಲಿದ್ದಾರೆ.

ಡಿ. 28ರ ಶನಿವಾರ
ಸಂಜೆ 5ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ, ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಗೌರವ ಉಪಸ್ಥಿತರಿರಲಿದ್ದು, ಬೋಳ ಪ್ರಶಾಂತ್‌ ಕಾಮತ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ
ಎನ್.ಎಂ.ಎ.ಎಂ. ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ನಿಟ್ಟೆ ಇದರ ಟೀಮ್‌ ತಾಲೀಮ್‌ ನಿಟ್ಟೆ ಇವರಿಂದ ಕಪಟಾಕ್ಷ ಪೌರಾಣಿಕ ನಾಟಕ ಅಕ್ಷಾಯಾಂಬರ ಪ್ರದರ್ಶನಗೊಳ್ಳಲಿದೆ.

 

ಆಲ್‌ ಓಕೆ ಲೈವ್‌ ಇನ್‌ ಕಾನ್ಸರ್ಟ್‌
ಬಾಲಿವುಡ್‌ ಹೆಸರಾಂತ ಡ್ಯಾನ್ಸ್‌ ಕೊರೊಯೋಗ್ರಾಫರ್‌ ಹಾಗೂ ನಟ ಧರ್ಮೆಶ್‌ ಅವರಿಂದ ನೃತ್ಯ ಪ್ರದರ್ಶನ ಹಾಗೂ ಬಾಯ್‌ ಝೋನ್‌ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ.

ಡಿ. 29ರ ಆದಿತ್ಯವಾರ
ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ರಿ. ನ ಉದಯ ಶೆಟ್ಟಿ ಮುನಿಯಾಲು ಹಾಗೂ ಜಸ್ಟ್‌ ಡ್ಯಾನ್ಸರ್‌ ದುಬೈ ಹಾಗೂ ಬಾಯ್‌ಝೋನ್‌ ಡಾನ್ಸ್‌ ಅಕಾಡೆಮಿ ಮಂಗಳೂರ ಇದರ ಫೌಂಡರ್‌ ಪ್ರಸನ್ನ ಕುಮಾರ್‌ ಗೌರವ ಉಪಸ್ಥಿತರಿರಲಿದ್ದು, ಬೋಳ ಪ್ರಶಾಂತ್‌ ಕಾಮತ್‌ ಅಧ್ಯಕ್ಷತೆ ವಹಿಸಲಿದ್ದಾರೆ. ರವಿ ಕಟಪಾಡಿ ಹಾಗೂ ರಾಮಣ್ಣ ಪೂಜಾರಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸ್ಟಾರ್‌ ನೈಟ್‌
ಕನ್ನಡ ಚಲನ ಚಿತ್ರರಂಗದ ಹೆಸರಾಂತ ಗಾಯಕರು ಹಾಗೂ ನಟರ ಒಗ್ಗೂಡುವಿಕೆಯಲ್ಲಿ ಸ್ಟಾರ್‌ ನೈಟ್‌ ನಡೆಯಲಿದ್ದು, ರಿಷಬ್‌ ಶೆಟ್ಟಿ, ಪ್ರಜ್ವಲ್‌ ದೇವರಾಜ್‌, ಮಿತ್ರ, ಸಂಪದ, ರಮೇಶ್‌ ಇಂದಿರಾ ಹಾಗೂ ದೀಪಿಕಾದಾಸ್‌ ಭಾಗವಹಿಸಲಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

7 hours ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

8 hours ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

8 hours ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

11 hours ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

11 hours ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

11 hours ago