Featured

ಕಾರ್ಕಳ: ಪರಶುರಾಮನ ಪ್ರತಿಮೆ ; ಜನತೆಗೆ ನಿರಂತರ ಸುಳ್ಳು ಹೇಳುತ್ತಿದ್ದ ಶಾಸಕರ ನಿಜ ಬಣ್ಣ ಪೋಲೀಸ್ ತನಿಖೆಯಿಂದ ಬಯಲು : ಶುಭದರಾವ್‌ – vishwanews24

ಕಾರ್ಕಳ:ಶಾಸಕರ  ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಸಿದ್ಧತೆ :ಶುಭದರಾವ್‌

ಕಾರ್ಕಳ: ಪರಶುರಾಮನ ಕಂಚಿನ ಪ್ರತಿಮೆ ವಿಚಾರವಾಗಿ ಜನತೆಗೆ ನಿರಂತರ ಸುಳ್ಳು ಹೇಳುತ್ತಿದ್ದ ಶಾಸಕರ ನಿಜ ಬಣ್ಣ ಪೋಲೀಸ್ ತನಿಖೆಯಿಂದ ಬಯಲಾಗಿದೆ, ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಉದ್ಘಾಟಿಸಿದ್ದ ಪ್ರತಿಮೆ ಕಂಚಿನದ್ದು ಅಲ್ಲ ಎಂಬುದು ಪೋಲೀಸರು ಬೆಂಗಳೂರಿನಲ್ಲಿ ವಶಪಡಿಸಿಕೊಂಡ ಬಿಡಿ ಭಾಗಗಳಿಂದ ಬಹಿರಂಗವಾಗಿದೆಂದು ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್‌ ತಿಳಿಸಿದ್ದಾರೆ.

ಬೆಟ್ಟದ ಮೇಲೆ ಎರಡು ಕಾಲುಗಳ ಮೇಲೆ ಅರ್ಧ ಭಾಗ ನಿಂತಿರುವಾಗ ವಶಪಡಿಸಿಕೊಂಡಿರುವ ಬಿಡಿ ಭಾಗಗಳಲ್ಲೂ ಎರಡು ಕಾಲು ಇದ್ದು ಪ್ರತಿಮೆಗೆ ನಾಲ್ಕು ಕಾಲು ಇರಲು ಹೇಗೆ ಸಾದ್ಯ ಎಂಬ ಪ್ರಶ್ನೆ ಮೂಡಿದೆ.
ಈ ಎಲ್ಲಾ ವಿಚಾರವಾಗಿ ಮೊದಲಿನಿಂದಲೂ ಜನತೆಗೆ ನಿರಂತರ ಸುಳ್ಳು ಹೇಳುತ್ತಾ ಬಂದಿರುವ ಶಾಸಕರು ಮಾಡಿರುವುದು ಧರ್ಮ ದ್ರೋಹದ ಕೆಲಸವಾಗಿದೆ ಅವರು ಇನ್ನಾದರೂ ತನ್ನೊಪ್ಪಿಕೊಂಡು ಕ್ಷಮೆಯಾಚಿಸ ಬೇಕೆಂದು ಮತ್ತು ಅವರ ತಕ್ಷಣ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಸಿದ್ಧತೆ ನಡೆಸಲಾಗುವುದು ಶುಭದರಾವ್ ಹೇಳಿದ್ದಾರೆ.

ಪ್ರತಿಮೆ ನಕಲಿ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ, ಪ್ರತಿಮೆ ಪೂರ್ಣಗೊಂಡ ಬಗ್ಗೆಯಾಗಲಿ, ಅಲ್ಲಿಂದ ಇಲ್ಲಿಗೆ ತಂದಿರುವ ಬಗ್ಗೆಯಾಗಲಿ ಯಾವುದೇ ದಾಖಲೆಗಳು ಯಾರ ಬಳಿಯೂ ಇಲ್ಲ, ಚುನಾವಣೆಯ ದೃಷ್ಟಿಯಿಂದ ತುರಾತುರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿಮೆ ನಿರ್ಮಾಣವಾಗದ ಕಾರಣ ಪೈಬರ್ ಪ್ರತಿಮೆಯನ್ನು ತಂದು ಉದ್ಘಾಟಿಸಲಾಗಿದೆ, ಅದರ ನಿಜ ಬಣ್ಣ ಬಯಲಾದಾಗ ರಾತ್ರಿಯಲ್ಲಿ ಅದನ್ನು ಕೊಂಡೊಯ್ದು ಪ್ರತಿಮೆಯ ರೂಪ ಬದಲಾವಣೆ ಇದೆ ಎಂದು ನಂಬಿಸಲಾಗಿದೆ. ಈಗ ವಶಪಡಿಸಿಕೊಂಡಿರುವ ಭಾಗಗಳು ಉದ್ಘಾಟನೆಯ ನಂತರ ತಯಾರಾದ ಭಾಗಗಳು ಎಂದು ಅಲ್ಲಿ ಸಿಕ್ಕಿರುವ ನಾಲ್ಕು ಕಾಲುಗಳಿಂದ ಸಾಬೀತಾಗಿದೆ, ಒಂದು ವೇಳೆ ಈಗ ಬೆಟ್ಟದ ಮೇಲಿರುವ ಪ್ರತಿಮೆ ಕಂಚಿದ್ದೇ ಆಗಿದ್ದರೆ ಮತ್ತೊಮ್ಮೆ ಕಾಲುಗಳನ್ನು ತಯಾರಿಸುವ ಅಗತ್ಯವಿತ್ತೇ ಎಂದು ಪ್ರಶ್ನಿಸಿ ಪ್ರತಿಮೆಯ ಮುಖದ ಭಾಗ ಸಂಪೂರ್ಣ ಬದಲಾಗಿದ್ದು ಅಂದಿನ ಮುಖಕ್ಕೆ ಹೋಲಿಕೆಯೇ ಇಲ್ಲ ಇದು ನಕಲಿ ಪ್ರತಿಮೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂದಿದ್ದಾರೆ.

ಪ್ರತಿಮೆ ನಿರ್ಮಾತ ಕೃಷ್ಣನಾಯ್ಡ್ ಮಹಾನ್ ಸುಳ್ಳುಗಾರ ಇಲ್ಲವಾದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಅಗತ್ಯವೇನಿದೆ, ಈಗ ಜಾತಿ ಮತ್ತು ಧರ್ಮವನ್ನು ಎಳೆದು ತಂದು ಕೋಮು ಗಲಭೆಯ ಹುನ್ನಾರ ನಡೆಸುತ್ತಿದ್ದಾರೆ ಅವರ ವಿರುದ್ಧ ದೂರು ದಾಖಲಿಸಲಾಗುವುದು.

ಸತ್ಯವನ್ನು ಎಷ್ಟೇ ಮುಚ್ಚಿಟ್ಟರೂ ಅದು ಬಹಿರಂಗವಾಗಲೇ ಬೇಕು, ಸತ್ಯಾಸತ್ಯತೆಯನ್ನು ತಿಳಿಸುವ ಪ್ರಯತ್ನಪಟ್ಟಾಗ ಕಾಂಗ್ರೇಸ್ ಕಾರ್ಯಕರ್ತರ ಮೇಲೆ ಪೋಲೀಸ್ ಕೇಸು ದಾಖಲಿಸಿ ಬೆದರಿಸಲಾಯಿತು, ಅನ್ಯಾಯದ ವಿರುದ್ಧ ಮಾತನಾಡಿದವರನ್ನು ಅವಮಾನಿಸಲಾಯಿತು, ಅದರೆ ಸತ್ಯಕ್ಕೆ ಗೆಲುವಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

2 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

2 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

2 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

2 days ago

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ – vishwanews24

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ  ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…

3 days ago

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ – ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು – vishwanews24

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…

3 days ago