Featured

ಕಾರ್ಕಳ: ಪರಶುರಾಮನ ಮೂರ್ತಿ ಬಾಕಿ ಭಾಗ ತೆರವುಗೊಳಿಸುವ ಹುನ್ನಾರ ; ಸಾಕ್ಷಿ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ – Vishwanews24

ಕಾರ್ಕಳ: ಪರಶುರಾಮನ ಮೂರ್ತಿ ಬಾಕಿ ಭಾಗ ತೆರವುಗೊಳಿಸುವ ಹುನ್ನಾರ ; ಸಾಕ್ಷಿ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

ಕಾರ್ಕಳ: ಬೈಲೂರಿನ ಪರಶುರಾಮನ ಮೂರ್ತಿ ಕಂಚಿನದ್ದಲ್ಲ, ನಕಲಿ ಎಂದು ಹೇಳಲು ಕೊನೆಯ ಸಾಕ್ಷಿ ಉಳಿದಿತ್ತು. ಅದನ್ನು ತೆರವುಗೊಳಿಸುವ ಹುನ್ನಾರ ನಡೆಯುತ್ತಿದ್ದು, ನಮ್ಮ ಪ್ರಬಲ ವಿರೋಧವಿದೆ ಎಂದು ಕಾಂಗ್ರೆಸ್‌ ಮುಖಂಡ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈಗಾಗಲೇ ಮೂರ್ತಿಯ ಅರ್ಧ ಭಾಗ ತೆರವು ಗೊಳಿಸಲಾಗಿದೆ. ಮಳೆಗಾಲದಲ್ಲಿ ನೀರು ತುಂಬಿದರೆ ಮೂರ್ತಿ ಮುರಿದು ಬೀಳಬಹುದು ಎಂಬ ಕಾರಣ ನೀಡಿ ಟಾರ್ಪಾಲು ಹೊದೆಸುವುದಾಗಿ ತಿಳಿಸಿದ್ದರು. ಈಗ ಹೈಕೋರ್ಟ್‌ ಆದೇಶದಂತೆ ಮೂರ್ತಿಯ ಬಾಕಿ ಭಾಗವನ್ನು ತೆರವು ಗೊಳಿಸಿ ಶಿಲ್ಪಿಗೆ ಕೊಡುತ್ತಾರೆಂಬ ವಿಷಯ ತಹಶೀಲ್ದಾರ್‌ ಮೂಲಕ ನನಗೆ ತಿಳಿಯಿತು. ಇದು ಉಳಿದ ಸಾಕ್ಷ್ಯವನ್ನೂ ನಾಶ ಮಾಡುವ ಪ್ರಯತ್ನ ಎಂದು ಆರೋಪಿಸಿದರು.

ಕೆಂಪೇಗೌಡ, ಶಿವಾಜಿಯ ಮೂರ್ತಿಗಳನ್ನು ನಿರ್ಮಿಸಿದ ಹಲವು ಪ್ರತಿಭೆಗಳು ರಾಜ್ಯ ದಲ್ಲಿದ್ದಾರೆ. ಆದರೂ ಜಿಎಸ್‌ಟಿ ಡಿಫಾಲ್ಟರ್‌ ಆಗಿರುವ ಕೃಷ್ಣ ನಾಯ್ಕ ಅವರಿಗೆ ಯಾವುದೇ ಅರ್ಹತೆ ಇಲ್ಲದಿದ್ದರೂ ಮೂರ್ತಿ ಮಾಡಲು ನೀಡಲಾಗಿದೆ ಎಂದು ಆಪಾದಿಸಿದ ಅವರು, ಈಗ ತರಾತುರಿಯಲ್ಲಿ ಮೂರ್ತಿಯ ಉಳಿದ ಭಾಗವನ್ನು ಕೃಷ್ಣ ನಾಯಕ್‌ರಿಗೆ ನೀಡಿ ಏನು ಸಾಧಿಸುವುದಿದೆ? ಇದು ಸಾಕ್ಷ್ಯ ಅಳಿಸುವ ಹುನ್ನಾರವಲ್ಲದೇ ಮತ್ತೇನೂ ಅಲ್ಲ ಎಂದರು.

ಪ್ರತಿಮೆಯನ್ನು ಸುನಿಲರೇ ಸ್ಥಾಪಿಸಲಿ ಪರಶುರಾಮನ ಮೂರ್ತಿಯ ಈ ಸ್ಥಿತಿಗೆ ಸುನಿಲ್‌ ಕುಮಾರ್‌ ಹಾಗೂ ಅವರ ಹಿಂಬಾಲಕರೇ ಕಾರಣ. ಮೂರ್ತಿ ಯಾವುದರಿಂದ ತಯಾರಾ ದದ್ದು (ಫೈಬರ್‌ /ಕಂಚು) ಎಂಬ ತನಿಖೆಯಾಗಲಿ ಎಂದ ಅವರು, 2 ಕೋಟಿ ರೂ. ವೆಚ್ಚದ ಮೂರ್ತಿ ಉದ್ಘಾಟನೆ ಕಾರ್ಯಕ್ರಮಕ್ಕೆ 2.5. ಕೋಟಿ ರೂ.ಗಳನ್ನು ಸುನಿಲ್‌ ಕುಮಾರ್‌ ಖರ್ಚು ಮಾಡಿಸಿದ್ದಾರೆ ಎಂದು ಟೀಕಿಸಿದರು.

 

ನಮ್ಮ ಉದ್ದೇಶ ಅಲ್ಲಿ ಸ್ಥಾಪಿಸ ಬೇಕಿದ್ದ ಪರಶುರಾಮನ ಕಂಚಿನ ಮೂರ್ತಿಯನ್ನು ಸುನಿಲ್‌ ಕುಮಾರ್‌ ಅವರೇ ಸ್ಥಾಪಿಸಲಿ. ಆದರೆ ಕೃಷ್ಣ ನಾಯಕ್‌ ಅವರಿಗೆ ಪುನಃ ಕೆಲಸ ನೀಡಬಾರದು. ನಿರ್ಮಿತಿ ಕೇಂದ್ರದವರಿಗೆ ಈ ಮೂರ್ತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು. ಸಂಪೂರ್ಣ ತನಿಖೆಯ ಬಳಿಕವೇ ಪರಿಣಿತರಿಂದ ಥೀಂ ಪಾರ್ಕ್‌ ಕೆಲಸ ಮುಂದುವರಿಸಬೇಕು ಎಂದು ಆಗ್ರಹಿಸಿದರು.ಸದಾಶಿವ ದೇವಾಡಿಗ, ಉದಯ ಕುಮಾರ್‌ ಶೆಟ್ಟಿ ಕುಕ್ಕುಂದೂರು, ಜಾರ್ಜ್‌ ಕ್ಯಾಸ್ತಲಿನೋ ಉಪಸ್ಥಿತರಿದ್ದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

4 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

5 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

5 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

5 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

5 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

5 days ago