Featured

ಕಾರ್ಕಳ : ಪ್ರಮೋದ್ ಮುತಾಲಿಕ್ ನೈಜ ಹಿಂದುತ್ವ ಎಂದು ನಂಬಿ ನಕಲಿ ಹಿಂದುತ್ವಕ್ಕೆ ಯುವಕರು ಬಲಿಯಾಗದಿರಿ – ರವಿ ಸಿಂದ್ಲಿಂಗ್ – Vishwanews24

ಕಾರ್ಕಳ : ಪ್ರಮೋದ್ ಮುತಾಲಿಕ್  ನೈಜ ಹಿಂದುತ್ವ ಎಂದು ನಂಬಿ ನಕಲಿ ಹಿಂದುತ್ವಕ್ಕೆ ಯುವಕರು ಬಲಿಯಾಗದಿರಿ : ರವಿ ಸಿಂದ್ಲಿಂಗ್

ಕಾರ್ಕಳ: ಶ್ರೀ ರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ನೈಜ ಹಿಂದುತ್ವದ ರಕ್ಷಣೆಗೋಸ್ಕರ ಚುನಾವಣೆ ಸ್ಪರ್ಧಿಸುತ್ತಿದ್ದಾರೆ ಎಂಬ ಸಂಗತಿ ತಿಳಿದು ಅವರ ಈ ನೈಜ ಹಿಂದುತ್ವದ ನಕಲಿ ಮುಖದ ಹಿಂದಿರುವ ಕೆಲ ಅಸಲಿ ಸಂಗತಿಯನ್ನು ಮುಗ್ಧ ಕರಾವಳಿಯ ಜನರಿಗೆ ತಿಳಿಸುವುದು ನಮ್ಮ ಆದ್ಯ ಕರ್ತವ್ಯ ಮತ್ತು ಅವರ ಮಾತಿಗೂ ಅವರ ಕೃತಿಗೂ ಯಾವುದೇ ಸಂಬಂಧವಿಲ್ಲ. ಉತ್ತರ ಕರ್ನಾಟಕದಲ್ಲಿ ನಮಗೆ ಮೋಸ ಮಾಡಿದ ಹಾಗೆ ತಾವು ಅವರನ್ನು ನಂಬಿ ಮೋಸ ಹೋಗಬೇಡಿ ಹಾಗೂ ನೈಜ ಹಿಂದುತ್ವ ಎಂದು ನಂಬಿ ನಕಲಿ ಹಿಂದುತ್ವಕ್ಕೆ ಯುವಕರು ಬಲಿಯಾಗದಿರಿ ಎಂದು ಶ್ರೀರಾಮ ಸೇನೆಯ ಮಾಜಿ ರಾಜ್ಯ ಸಂಚಾಲಕ ರವಿ ವಿ. ಸಿಂದ್ಲಿಂಗ್ ತಿಳಿಸಿದರು.

ಅವರು ಕಾರ್ಕಳದ ಪ್ರಕಾಶ್ ಹೊಟೇಲ್‌ನಲ್ಲಿ ಸೋಮವಾರ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದರು.ಪ್ರಮೋದ್ ಮುತಾಲಿಕರ ಹಿಂದುತ್ವದ ಪ್ರಖರ ಭಾಷಣದಿಂದ ಪ್ರಭಾವಿತರಾಗಿ ಉತ್ತರ ಕರ್ನಾಟಕದ ಭಾಗದಲ್ಲಿ 15 ವರ್ಷಗಳ ಕಾಲ ಹಿಂದು ಸಂಪಘಟನೆ ಬೆಳೆಸುವುದಕೋಸ್ಕರ ದುಡಿದರು. ಆದರೆ ಮುತಾಲಿಕ್ ಅವರ ಹಿಂದುತ್ವ ಕೇವಲ ಭಾಷಣಕ್ಕಾಗಿ ಮಾತ್ರ. ಹಿಂದುತ್ವ ಮತ್ತು ಅದರೊಳಗಿನ ಸತ್ಯ ಹಾಗೂ ವ್ಯವಹಾರಗಳೇ ಬೇರೆ. ಬೇರೆ ಬೇರೆ ರಾಜ್ಯದ ಯುವಕರ ಹೆಸರಿನಲ್ಲಿ ಸಂಗ್ರಹವಾದ ಹಣ ಹಿಂದುತ್ವಕ್ಕಾಗಿ ಹುತಾತ್ಮರಾದ ಹಿಂದು ಯುವಕರ ಮನೆಗೆ ಮುಟ್ಟಿಲ್ಲ.

ಉತ್ತರ ಕರ್ನಾಟಕ ಭಾಗದ ನಾವೆಲ್ಲರೂ ಅವರ ಸ್ವಾರ್ಥ ಹಾಗೂ ಜನದಾಹದ ಮನಸ್ಸಿನ ಅವರ ರಾಷ್ಟ್ರೀಯ ಹಿಂದು ಸೇನಾ ಪಕ್ಷದಿಂದ ಚುನಾವಣಾ ಕಣಕ್ಕಿಳಿಸಿ ನಮ್ಮನ್ನು ಬಲಿ ಹಾಕಿದರು. ಕರಾವಳಿಯ ಜನರು ಅವರಿಗೆ ಇಲ್ಲಿ ನೆಲೆ ನಿಲ್ಲುವುದಕ್ಕೆ ಅವಕಾಶ ಕೊಟ್ಟರೆ ನಮಗಾದ ಪರಿಸ್ಥಿತಿ ಈ ಜಿಲ್ಲೆಯ ಜನರಿಗೂ ಬರಬಹುದು.

ಮುತಾಲಿಕರ ನೈಜ ಹಿಂದುತ್ವದ ಭ್ರಮೆಗೆ ಸಿಲುಕಿ ನಾವೆಲ್ಲಾ ಮನೆ, ಮಠ, ಹೆತ್ತವರಿಂದ ದೂರವಾಗಿ ಜೈಲುವಾಸವನ್ನು ಅನುಭವಿಸುವಂತಹ ಪ್ರಮೇಯ ಬಂದೊದಗಿತ್ತು. ಆ ಸಂದರ್ಭದಲ್ಲಿ ಹತ್ತಾರು ವರ್ಷದಿಂದ ನಮ್ಮ ಬಗ್ಗೆ ಯಾವುದೇ ಕಾಳಜಿ ವಹಿಸದೇ ನಮ್ಮನ್ನು ಜೈಲಿನಲ್ಲಿ ಬಂಧಿಯಾಗುವಂತೆ ಮಾಡಿದರು ಎಂದು ಶ್ರೀರಾಮ ಸೇನೆಯ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವಿಲಾಸ್‌ರಾವ್ ಪವಾರ್ ತಿಳಿಸಿದರು.

ಇಡೀ ಕರ್ನಾಟಕಕ್ಕೆ ನಾನೊಬ್ಬನೇ ಹಿಂದುತ್ವವಾದಿ, ದೊಡ್ಡ ಆದರ್ಶ ಪುರುಷ ಎಂಬ ಹುಚ್ಚು ಭ್ರಮೆಯನ್ನು ತುಂಬಿ ಉತ್ತರ ಕರ್ನಾಟಕದ ಘಟಾನುಘಟಿ ಹಿಂದು ಕಾರ್ಯಕರ್ತರನ್ನು ಸಂಪೂರ್ಣ ಹಾಳು ಮಾಡಿ ಕಾರ್ಯಕರ್ತರ ಬದುಕಿಗೆ ಹಾಗೂ ಭವಿಷ್ಯಕ್ಕೆ ಕೊಳ್ಳಿ ಇಟ್ಟು ಕಾರ್ಕಳದ ವಿಧಾನಸಭೆಗೆ ಸ್ಪರ್ಧಿಸಲು ಬಂದಿದ್ದಾರೆ. ಇವರಿಗೆ ಹಿಂದುತ್ವದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಹಿಂದುತ್ವದ ವಿಚಾರದಲ್ಲಿ ಮಾತ್ರವಲ್ಲ ನೈತಿಕವಾಗಿಯೂ ಅವರು ಅಧಪತನ ಹೊಂದಿದ್ದಾರೆ. ಅವರ ಕಾಣದ ಮುಖವೊಂದು ನಿಮ್ಮ ಮುಂದೆ ತೆರೆದಿಡಲು ಕಾರ್ಕಳಕ್ಕೆ ಬಂದಿದ್ದೇವೆ.

ಮುತಾಲಿಕ್‌ರ ಮಾತು, ಆವೇಶವನ್ನು ನಂಬಿ ನಮ್ಮನ್ನು ನಂಬಿಸಿ ಕತ್ತು ಕೊಯ್ದು ನಡು ನೀರಲ್ಲಿ ಕೈಬಿಟ್ಟ, ನಂಬಿದವರಿಗೆ ದ್ರೋಹ ಬಗೆದ, ಜೊತೆಗಿದ್ದವರನ್ನು ವಂಚಿಸಿ, ತುಳಿದು ಬೆಂಕಿಯಿಟ್ಟ ಅವರನ್ನು ಕರಾವಳಿಯ ಯುವಕರೇ ದಯವಿಟ್ಟು ನಂಬಬೇಡಿ. ನಮಗಾದ ದ್ರೋಹ, ವಂಚನೆ, ಮೋಸ ನಿಮಗೂ ಆಗದಿರಲಿ ಎಂದು ಈ ಮೂಲಕ ತಿಳಿಸಲು ಬಂದಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಬೆಳಗಾವಿ ವಿಭಾಗದ ಮಾಜಿ ಪ್ರಮುಖ ಶಿವಶಂಕರ್ ಕಾನಾಪೂರ್, ಬೆಳಗಾವಿ ಜಿಲ್ಲಾ ಮಾಜಿ ಪ್ರಮುಖ ದೀಪಕ್ ಪೂಜಾರ್, ಮಾಜಿ ಉತ್ತರ ಪ್ರಾಂತ್ಯ ಪ್ರಮುಖ್ ಉಮೇಶ್ ಅಲ್ಮೇಲ್ಕರ್, ಜಮಖಂಡಿ ತಾಲೂಕು ಮಾಜಿ ಪ್ರಮುಖ ಮಹೇಶ್ ಅರಾಕೇರಿ, ಬಾಗಲಕೋಟ್ ಜಿಲ್ಲಾ ಪ್ರಮುಖ್ ಜ್ಯೋತಿಭಾ ಖಾಬುಲೆ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Vishwa News 24

Recent Posts

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

12 hours ago

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…

20 hours ago

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ – vishwanews24

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…

20 hours ago

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…

20 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…

20 hours ago

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ – vishwanews24

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ:  ದಕ್ಷಿಣ ಕನ್ನಡ (ದ.ಕ)…

20 hours ago