ಹೆಬ್ರಿ: ಟಿಪ್ಪರ್ ಲಾರಿಯೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಾಲ್ಕೂರು ಗ್ರಾಮದ ಮಿಯ್ಯಾರು ಬಿಕ್ರಿಜಡ್ಡು ತಿರುವಿನಲ್ಲಿ ಅಕ್ಟೋಬರ್ 5ರಂದು ನಡೆದಿದೆ.
ಮೃತರನ್ನು 28ವರ್ಷದ ಸುದರ್ಶನ್ ಎಂದು ಗುರುತಿಸಲಾಗಿದೆ. ಇವರು ನಿನ್ನೆ ಸಂಜೆ ಬೈಕ್ ನಲ್ಲಿ ನಂಚಾರು ಕಡೆಯಿಂದ ಮುದ್ದೂರು ಕಡೆಗೆ ತೆರಳುತ್ತಿದ್ದರು. ಮಿಯ್ಯಾರು ಬಿಕ್ರಿಜಡ್ಡು ತಿರುವಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯು ಸುದರ್ಶನ್ ಅವರು ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು, ಅವರನ್ನು ಬೈಕ್ ಸಮೇತ ಸುಮಾರು 15 ಅಡಿಯವರೆಗೆ ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಪರೀಕ್ಷಿಸಿ ವೈದ್ಯರು ಸುದರ್ಶನ್ ಅದಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…
ಶಿರ್ವ : ವ್ಯಕ್ತಿ ನಾಪತ್ತೆ ; ಪ್ರಕರಣ ದಾಖಲು ಶಿರ್ವ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬೆಳಪು ಬಡಿಕೇರಿ ಹೌಸ್ ನಿವಾಸಿ…
ಉದ್ಯಾವರ : ರಸ್ತೆ ದಾಟುತ್ತಿದ್ದಾಗ ಕ್ರೇನ್ ಢಿಕ್ಕಿ ; ಮಹಿಳೆ ಸಾವು ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಗುರುವಾರ…