Featured

ಕಾರ್ಕಳ : ಮೃತ ವ್ಯಕ್ತಿಯ ಹೆಸರಿನಲ್ಲಿ ಇದ್ಧ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ , ನಗದನ್ನು ತಮ್ಮ ಹೆಸರಿಗೆ ವರ್ಗಾಯಿಸಿ ವಂಚನೆ   – Vishwanews24

ಕಾರ್ಕಳ : ಮೃತ ವ್ಯಕ್ತಿಯ ಹೆಸರಿನಲ್ಲಿ ಇದ್ಧ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ , ನಗದನ್ನು ತಮ್ಮ ಹೆಸರಿಗೆ ವರ್ಗಾಯಿಸಿ ವಂಚನೆ

ಕಾರ್ಕಳ,: ವ್ಯಕ್ತಿಯೊಬ್ಬರು ಸಾವಿಗೀಡಾದ ಬಳಿಕ ಅವರ ಹೆಸರಿನಲ್ಲಿ ಇದ್ಧ ಕೋಟ್ಯಾಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಶೇರುಗಳು ಮತ್ತು ಕೋಟ್ಯಾಂತರ ರೂಪಾಯಿ ನಗದನ್ನು ಆರೋಪಿಗಳಿಬ್ಬರು ತಮ್ಮ ಹೆಸರಿಗೆ ವರ್ಗಾಯಿಸಿರುವ ಕೃತ್ಯ ಬೆಳಕಿಗೆ ಬಂದಿದೆ.

ನಗರದ ಪುನೀತ್ ರಾವ್ ಈ ಕುರಿತು ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ನ್ಯಾಯಾಲಯದ ನಿರ್ದೇಶನದಂತೆ ಆರೋಪಿಗಳಾದ ಕಾರ್ಕಳ ಬಸ್ ನಿಲ್ದಾಣ ಬಳಿಯ ದಿನೇಶ್ ಕೆ(51), ಪೆರ್ವಾಜೆ ರಸ್ತೆಯ ಗುದ್ದೆಲ್ ಬಾಕ್ಯಾರ್ ನ ಪ್ರಸಾದ್(27) ಎಂಬವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಪ್ರಕರಣದ ದೂರುದಾರ ಪುನೀತ್ ರಾವ್ ರವರ ತಂದೆ ಅಶೋಕ್ ರಾವ್ ಅವರ ಹೆಸರಿನಲ್ಲಿ ಕಾರ್ಕಳ ನಗರದ ವಿವಿದೆಡೆಗಳಲ್ಲಿ ಸ್ಥಿರಾಸ್ತಿಗಳಿದ್ದು, ಅದರ ಮೌಲ್ಯವು ಕೋಟ್ಯಾಂತರ ರೂಪಾಯಿ ಆಗಿರುತ್ತದೆ. ಮಾತ್ರವಲ್ಲದೆರ ಬ್ಯಾಂಕ್ ಖಾತೆ ಹಾಗೂ ವಿವಿಧ ಶೇರು ಹೊಂದಿದ್ದರು. ತನ್ನ ಜೀವತಾವಧಿಯ ಕೊನೆಯ ದಿನಗಳಲ್ಲಿ ಅಶೋಕ ರಾವ್ ಒಂಟಿಯಾಗಿ ಬದುಕು ನಿರ್ವಹಿ, 2020 ಜೂಲೈ 13ರಂದು ಮೃತಪಟ್ಟಿದ್ದರು.

ಅವರು ತನ್ನ ಜೀವಿತಾವಧಿಯಲ್ಲಿ ಮೃತ್ಯು ಪತ್ರವನ್ನು ಬರೆದು ಒಟ್ಟಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಶೋಕ್ ರಾವ್ ಮೃತಪಟ್ಟ ಮಾಹಿತಿಯನ್ನು ಆರೋಪಿ ದಿನೇಶ್ ಕೆ ಮತ್ತು ಆತನ ಪತ್ನಿ ಮಂಜುಳಾ ಎಂಬುವರು ಪುನೀತ್ ರಾವ್ ಸಂಬಂಧಿಕರಿಗೆ‌ ವಿಚಾರ ತಿಳಿಸಿದ್ದರು.

ವಿದೇಶದಲ್ಲಿ ಇದ್ದ ಪುನೀತ್ ರಾವ್ ಆತನ ತಾಯಿ ಮತ್ತು ಸಹೋದರ ಅವರು ಕೋವಿಡ್ ಲಾಕ್ ಡೌನ್ ಕಾರಣದಿಂದ ಊರಿಗೆ ಬರಲು ಸಾಧ್ಯವಾಗಿರಲಿಲ್ಲ. ಪುನೀತ್ ರಾವ್ ತಂದೆಯ ಹೆಸರಿನಲ್ಲಿ ರೂ. 4,24,90, 548.90 ಶೇರುಗಳನ್ನು ಮತ್ತು ಅವರ ಹೆಸರಿನಲ್ಲಿದ್ದ ಸ್ಥಿರಾಸ್ತಿ ರೂ.2,20,76,238.81 ಬ್ಯಾಂಕ್ ಡೆಪಾಸಿಟ್ ಗಳನ್ನು ಮೋಸದಿಂದ ಆರೋಪಿಗಳು ತಮ್ಮ ಹೆಸರಿಗೆ ವರ್ಗಾವಣೆ ಮಾಡಿದ್ದಾರೆಂದು ಮೃತ ಅಶೋಕ ರಾವ್ ಅವರ ಮಗ ಪುನೀತ್ ರಾವ್ ದೂರಿನಲ್ಲಿ ವಿವರಿಸಿದ್ದಾರೆ.

ಈ ಬಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿ ತನಿಖೆ ನಡೆಯುತ್ತಿದೆ.

Vishwa News 24

Recent Posts

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ -vishwanews24

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…

6 hours ago

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

12 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

12 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

14 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

14 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

14 hours ago